DC Shivamogga ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರದ ಕರಡು ಮತದಾರರ ಪಟ್ಟಿಗೆ ತಿದ್ದುಪಡಿಗಳ ಪಟ್ಟಿ ಸಿದ್ಧಪಡಿಸಿರುವುದನ್ನು ಸಾರ್ವಜನಿಕರ ಮಾಹಿತಿಗಾಗಿ ಡಿ.30 ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ.
ಜಿಲ್ಲಾಧಿಕಾರಿಗಳ ಕಚೇರಿ, ಶಿವಮೊಗ್ಗ ಮಹಾನಗರ ಪಾಲಿಕೆ, ಶಿವಮೊಗ್ಗ, ಭದ್ರಾವತಿ, ತೀರ್ಥಹಳ್ಳಿ, ಹೊಸನಗರ, ಶಿಕಾರಿಪುರ, ಸೊರಬ, ಸಾಗರ ತಾಲೂಕು ಕಚೇರಿಗಳಲ್ಲಿ ಮತ್ತು ಶಿವಮೊಗ್ಗ, ಸಾಗರ ಉಪವಿಭಾಗಾಧಿಕಾರಿಗಳ ಕಚೇರಿಗಳಲ್ಲಿ ಹಾಗೂ ಜಿಲ್ಲಾಧಿಕಾರಿಗಳ ವೆಬ್‍ಸೈಟ್ ಮತ್ತು ceo.karnataka.gov.in ರಲ್ಲಿ ಪರಿಶೀಲನೆಗಾಗಿ ಲಭ್ಯವಿರುತ್ತದೆ.
ಭಾರತ ಚುನಾವಣಾ ಅಯೋಗದ ಮ್ಯಾನ್ಯುಯಲ್ ಆನ್ ಎಲೆಕ್ಟ್ರೊಲ್ ರೋಲ್-2016ರ ಅಧ್ಯಾಯ 12 ರಂತೆ ಕರ್ನಾಟಕ ನೈರುತ್ಯ ಪದವೀಧರರ ಕ್ಷೇತ್ರದ ಮತದಾರರ ಪಟ್ಟಿಗೆ ಹೆಸರನ್ನು ಸೇರಿಸಲು ನಮೂನೆ-18 ರಲ್ಲಿ , ಕರ್ನಾಟಕ ನೈರುತ್ಯ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಗೆ ಹೆಸರನ್ನು ಸೇರಿಸಲು ನಮೂನೆ-19 ರಲ್ಲಿ ನಾಮಪತ್ರಗಳ ಸ್ವೀಕೃತಿಯ ಕೊನೆಯ ದಿನಾಂಕದವರೆಗೆ ಹೆಸರು ಸೇರ್ಪಡೆಗೆ ಅವಕಾಶಗಳಿದ್ದು, ಸಂಬಂಧಪಟ್ಟ ಸಹಾಯಕ ಮತದಾರರ ನೋಂದಣಾಧಿಕಾರಿಗಳಿಗೆ / ನಿಯೋಜಿತ ಅಧಿಕಾರಿಗಳಿಗೆ ಅಗತ್ಯ ದಾಖಲಾತಿಗಳೊಂದಿಗೆ ಸಲ್ಲಿಸಬಹುದಾಗಿದ್ದು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಎಲ್ಲಾ ಅರ್ಹ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ನೋಂದಾಯಿಸಿಕೊಳ್ಳುವಂತೆ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ .
DC Shivamogga ಶಿವಮೊಗ್ಗ ಜಿಲ್ಲೆಗೆ ಸಂಬಂಧಿಸಿದಂತೆ ಕರ್ನಾಟಕ ನೈರುತ್ಯ ಪದವೀಧರರ ಕ್ಷೇತ್ರದ ಮತದಾರರ ಅಂಕಿ ಅಂಶಗಳು: ಭದ್ರಾವತಿ- ಗಂಡಸರು-1672, ಹೆಂಗಸರು -1492 ಒಟ್ಟು 3164, ಹೊಸನಗರ – ಗಂ-739, ಹೆಂ-553 ಒಟ್ಟು 1292, ಸಾಗರ – ಗಂ-971, ಹೆಂ-831 ಒಟ್ಟು 1802, ಶಿಕಾರಿಪುರ- ಗಂ-1891, ಹೆಂ-1007 ಒಟ್ಟು 2898, ಶಿವಮೊಗ್ಗ ಗ್ರಾಮಾಂತರ – ಗಂ-1227, ಹೆಂ-878 ಒಟ್ಟು 2105, ಶಿವಮೊಗ್ಗ ನಗರ – ಗಂ-4774, ಹೆಂ-4121 ಒಟ್ಟು 8895, ಸೊರಬ ಗಂ-1156, ಹೆಂ-606 ಒಟ್ಟು 1762, ತೀರ್ಥಹಳ್ಳಿ – ಗಂ- 1097, ಹೆಂ.-887 ಒಟ್ಟು-1984. ಒಟ್ಟು ಗಂಡಸರು -13527, ಹೆಂಗಸರು -10375 ಒಟ್ಟು -23902.
ಶಿವಮೊಗ್ಗ ಜಿಲ್ಲೆಗೆ ಸಂಬಂಧಿಸಿದಂತೆ ಕರ್ನಾಟಕ ನೈರುತ್ಯ ಶಿಕ್ಷಕರ ಕ್ಷೇತ್ರದ ಮತದಾರರ ಅಂಕಿ ಅಂಶಗಳು: ಭದ್ರಾವತಿ- ಗಂಡಸರು-244, ಹೆಂಗಸರು -198 ಒಟ್ಟು 442, ಹೊಸನಗರ – ಗಂ-124, ಹೆಂ-78 ಒಟ್ಟು 202, ಸಾಗರ – ಗಂ-292, ಹೆಂ-174 ಒಟ್ಟು 466, ಶಿಕಾರಿಪುರ- ಗಂ-395, ಹೆಂ-115 ಒಟ್ಟು 510, ಶಿವಮೊಗ್ಗ ಗ್ರಾಮಾಂತರ – ಗಂ-122, ಹೆಂ-45 ಒಟ್ಟು 167, ಶಿವಮೊಗ್ಗ ನಗರ – ಗಂ – 723, ಹೆಂ-755 ಒಟ್ಟು 1478, ಸೊರಬ ಗಂ-189, ಹೆಂ-59 ಒಟ್ಟು 248, ತೀರ್ಥಹಳ್ಳಿ – ಗಂ- 235, ಹೆಂ.-159 ಒಟ್ಟು-394. ಒಟ್ಟು ಗಂಡಸರು -2324, ಹೆಂಗಸರು -1583 ಒಟ್ಟು -3907.