Primary Cooperative Agriculture and Rural Development Bank ರೈತರು ಸಾಲ ಮರುಪಾವತಿ ಐದಾರು ದಶಕಗಳೇ ಕಳೆದಿರುವ ಹಿನ್ನೆಲೆಯಲ್ಲಿ ಬ್ಯಾಂಕ್‌ನಲ್ಲಿರುವ ಜಮೀನಿನ ಮೂಲ ದಾಖಲೆಗಳ ಪತ್ರವನ್ನು ಹಿಂಪಡೆದುಕೊಳ್ಳಬೇಕು ಎಂದು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ರಂಗನಾಥ್ ಮನವಿ ಮಾಡಿದರು.
ಚಿಕ್ಕಮಗಳೂರು ನಗರದ ರತ್ನಗಿರಿ ರಸ್ತೆಯ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್ ಸಭಾಂಗಣದಲ್ಲಿ ಆಡಳಿತ ಮಂಡಳಿಯ ಸಭೆಯಲ್ಲಿ ಮಾತನಾಡಿದ ಅವರು ರೈತರು ಸಾಲ ಮರುಪಾವತಿಸಿ ಐದಾರು ದಶಕ ಗಳೇ ಕಳೆದಿದ್ದರೂ ಮೂಲ ಪತ್ರಗಳನ್ನು ಹಿಂಪಡೆದಿಲ್ಲ, ಹೀಗಾಗಿ ಸಂಬಂಧಿಸಿದ ರೈತಬಾಂಧವರು ಬ್ಯಾಂಕ್‌ಗೆ ಭೇಟಿ ನೀಡಿ ತಮ್ಮಗಳ ಮೂಲ ದಾಖಲಾತಿ ಪತ್ರಗಳನ್ನು ಹಿಂಪಡೆದುಕೊಳ್ಳಬೇಕು ಎಂದು ಹೇಳಿದರು.
ಜಿಲ್ಲೆಯ ಆಲ್ದೂರು, ಆವುತಿ, ಖಾಂಡ್ಯ, ಜಾಗರ, ಕಸಬಾ, ಲಕ್ಯಾ, ಅಂಬಳೆ ಹಾಗೂ ವಸ್ತಾರೆ ಹೋಬಳಿಗಳ ಲ್ಲಿ ಸುಮಾರು 2050 ಮಂದಿ ರೈತರು ಬ್ಯಾಂಕ್‌ನಿಂದ ಸಾಲ ಪಡೆದುಕೊಂಡು ನಿಗಧಿತ ಸಮಯಕ್ಕೆ ಹಿಂತಿರುಗಿಸಿ ಹಲವಾರು ವರ್ಷಗಳೇ ಕಳೆದಿದೆ. ಹಾಗಾಗಿ ಬ್ಯಾಂಕ್‌ನಲ್ಲಿರುವ ಮೂಲ ದಾಖಲಾತಿ ಪತ್ರಗಳನ್ನು ಹಿಂಪಡೆದುಕೊಳ್ಳ ಬೇಕು ಎಂದು ಮನವಿ ಮಾಡಿದರು.
Primary Cooperative Agriculture and Rural Development Bank ಈಗಾಗಲೇ ಬ್ಯಾಂಕ್‌ನಿಂದ ರೈತರಿಗೆ ಆರ್ಥಿಕ ಅಭಿವೃಧ್ದಿಗಾಗಿ ಶೇ.3ರ ಬಡ್ಡಿದರದಲ್ಲಿ 15 ಲಕ್ಷದವರೆಗೂ ದೀ ರ್ಘಾವಾಧಿ ಸಾಲ ವಿತರಿಸುವ ಮೂಲಕ ರೈತಪರ ಕಾಳಜಿ ಹೊಂದಿರುವ ಹೆಗ್ಗೆಳಿಕೆಗೆ ಬ್ಯಾಂಕ್ ಪಾತ್ರವಾಗಿದೆ ಎಂದ ಅವರು ಆ ನಿಟ್ಟಿನಲ್ಲಿ ಪ್ರಸ್ತುತ ಸಾಲ ಪಡೆದುಕೊಂಡ ಫಲಾನುಭವಿಗಳು ಸಮಯಕ್ಕೆ ಹಿಂತಿರುಗಿಸಿದರೆ ಬ್ಯಾಂಕ್ ಅಭಿವೃದ್ದಿ ಇನ್ನಷ್ಟು ರೈತರಿಗೆ ಅನುಕೂಲವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಬ್ಯಾಂಕ್‌ನ ಉಪಾಧ್ಯಕ್ಷ ಕೆ.ಪಿ.ಸತೀಶ್‌ಗೌಡ, ನಿರ್ದೇಶಕರುಗಳಾದ ದಾನಿಹಳ್ಳಿ ಮಂಜು ನಾಥ್, ಎ.ಎನ್.ರವೀಶ್, ಬಸವೇಶ್, ಎಸ್.ಇ.ರಮೇಶ್, ಕರಾಳಮ್ಮ, ಜಾನಕಮ್ಮ, ಇ.ಕೆ.ಮಹೇಶ್, ಕೆ.ಎಲ್.ಶಿವಾ ನಂದ್, ಹೆಚ್.ಹಂಪಚ್ಯ, ಎಂ.ಎಸ್.ಪ್ರಕಾಶ್, ಎಂ.ಬಿ.ರುದ್ರೇಗೌಡ, ವ್ಯವಸ್ಥಾಪಕ ಎ.ಎಂ.ಚಂದ್ರೇಗೌಡ ಉಪಸ್ಥಿತ ರಿದ್ದರು.
