Saturday, December 6, 2025
Saturday, December 6, 2025

Diabetes reversal ಡಯಾಬಿಟಿಸ್ ರಿವರ್ಸ್ ಮಾಡಲು ಸಾಧ್ಯ- ಡಾ.ಪ್ರೀತಮ್

Date:

Diabetes reversal ಡಯಾಬಿಟಿಸ್ ರಿವರ್ಸಲ್- ಸರಳ ಮತ್ತು ಸುಲಭ
ಟೈಪ್ 2 ಡಯಾಬಿಟಿಸ್ ಅಥವಾ ಮಧುಮೇಹ ಒಮ್ಮೆ ಬಂದರೆ ಮತ್ತೆ ಹೋಗುವುದಿಲ್ಲ ಎಂಬ ಬಲವಾದ ನಂಬಿಕೆ ರೂಢಿಯಲ್ಲಿತ್ತು.. ಇದಕ್ಕೆ ಕಾರಣ ಏನು ಎಂಬುದು ಈಗ ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ.

ನಿಮ್ಮ ಬಳಿ ಇರುವ ಸೈಕಲ್ಲಿನ ಮುಂದಿನ ಗಾಲಿಯಲ್ಲಿ ಪಂಚರಾದರೆ ಹಿಂದಿನ ಗಾಲಿಯಲ್ಲಿ ನೀವು ಎಷ್ಟೇ ಗಾಳಿ ತುಂಬಿದರು ಸರಿ ಹೋಗುತ್ತದೆಯೇ ?
ಟೈಪ್ ಟು ಡಯಾಬಿಟಿಸ್ ಕೂಡ ಅಷ್ಟೇ ಸರಳ. ಡಯಾಬಿಟಿಸ್ ನಲ್ಲಿ ಸಮಸ್ಯೆ ಇರುವುದು ಆಹಾರ ಪದ್ಧತಿಯಲ್ಲಿ, ಅದನ್ನು ಮಾತ್ರೆ ಅಥವಾ ಇನ್ಸುಲಿನ್ ತೆಗೆದುಕೊಂಡು ಸರಿಪಡಿಸಿಕೊಳ್ಳುತ್ತೇವೆ ಎಂಬುದು ಮೂರ್ಖತನ. ಸಮಸ್ಯೆ ಆಹಾರ ಪದ್ಧತಿಯಲ್ಲಿರುವಾಗ ಪರಿಹಾರ ಕೂಡ ಆಹಾರ ಪದ್ಧತಿಯಲ್ಲಿ ಇರಬೇಕು ಎಂಬುದು ಸರಳ ಸತ್ಯ.

ಮಾತ್ರೆಗಳು ಮತ್ತು ಇನ್ಸುಲಿನ್ ಕೇವಲ ತಾತ್ಕಾಲಿಕ ಪರಿಹಾರವಾಗಿದೆ.
2019ನೇ ಇಸ್ವಿಯಲ್ಲಿ ಬ್ರಿಟಿಷ್ ಜರ್ನಲ್ ಆಫ್ ಮೆಡಿಸನ್ ನಲ್ಲಿ ಪ್ರಕಟವಾದ ಒಂದು ಸಂಶೋಧನೆಯಲ್ಲಿ ಸಾಬೀತಾಗಿರುವುದು ಏನೆಂದರೆ ಎಲ್ಲಾ ರೀತಿಯ ಮಾತ್ರೆ ಮತ್ತು ಇನ್ಸುಲಿನ್ ತೆಗೆದುಕೊಂಡರೂ ಕೂಡ 80% ಜನರಿಗೆ ಡಯಾಬಿಟಿಸ್ ಕಂಟ್ರೋಲ್ ಬರುವುದಿಲ್ಲ ಮತ್ತು ಅದರಲ್ಲಿ 77% ಜನರು ಕಿಡ್ನಿ ಕಣ್ಣು ಹೃದಯಾಘಾತ ಲೈಂಗಿಕ ನಿರಾಸಕ್ತಿ ಅಂತಹ ಮಧುಮೇಹದ ದುಷ್ಪರಿಣಾಮಗಳಿಂದ ಬಳಲುತ್ತಿದ್ದಾರೆ.

ICMR (ಇಂಡಿಯನ್ ಕೌನ್ಸಿಲ್ ಫಾರ್ ಮೆಡಿಕಲ್ ರಿಸರ್ಚ್) ಮಾಡಿದ ಸಂಶೋಧನೆಯಲ್ಲಿ 18000 ಡಯಾಬಿಟಿಸ್ ಜನ ಸಂಖ್ಯೆಯಲ್ಲಿ ಕಂಡುಬಂದಿದ್ದೇನೆಂದರೆ ನಮ್ಮ
ತಟ್ಟೆಯಲ್ಲಿ ಸರಾಸರಿ 80%
ಕಾರ್ಬೋಹೈಡ್ರೇಟ್ ಗಳನ್ನು ತಿನ್ನುತ್ತೇವೆ. ಈ ಪ್ರಮಾಣವನ್ನು ಶೇಕಡ 50 ಪರ್ಸೆಂಟಿಗೆ ಇಳಿಸಿದರೆ ಡಯಾಬಿಟೀಸ್ ರಿವರ್ಸಲ್ ಆಗುತ್ತೆ ಎಂಬುದನ್ನು ಸಾಬೀತುಪಡಿಸಿದ್ದಾರೆ.

Diabetes reversal ಹಾಗಾದರೆ ಡಯಾಬಿಟಿಸ್ ರಿವರ್ಸಲ್ ಮಾಡಿಕೊಳ್ಳಲು ಸರಿಯಾದ ಆಹಾರ ಕ್ರಮ ಏನಿರಬೇಕು ಎಂಬುದನ್ನು ತಿಳಿದುಕೊಳ್ಳೋಣ.

ನಿಮ್ಮ ಪ್ರತಿ ಊಟಕ್ಕೂ ಮುನ್ನ ತಟ್ಟೆಯಲ್ಲಿ ಎಲ್ಲ ರೀತಿಯ ತರಕಾರಿ ಕಾಳು ಬೆಳೆ ಸೊಪ್ಪು ಬೆಣ್ಣೆ ತುಪ್ಪ ಮತ್ತು ನಾನ್ ವೆಜಿಟೇರಿಯನ್ ಆಹಾರ ತೆಗೆದುಕೊಳ್ಳುವವರು ಮೊಟ್ಟೆ ಚಿಕನ್ ಫಿಶ್ ಮಟನ್ ಮುಂತಾದವುಗಳನ್ನು ಮೊದಲು ತಿನ್ನಬೇಕು, ಅಲ್ಲಿಗೆ ನಮಗೆ ಹೊಟ್ಟೆ ತುಂಬಿದ ಅನುಭವವಾಗುತ್ತದೆ, ತದನಂತರ ಅಲ್ಪ ಪ್ರಮಾಣದಲ್ಲಿ ಅಕ್ಕಿ ರಾಗಿ ಗೋದಿ ಜೋಳ ಯಾವುದಾದರೂ ತಿನ್ನಬಹುದಾಗಿದೆ,
ದುರದೃಷ್ಟವಶಾತ್ ಇಂದಿಗೂ ಕೂಡ ಡಯಾಬಿಟಿಸ್ ಇರುವವರು ಅನ್ನ ಕಡಿಮೆ ಮಾಡಬೇಕು ಮುದ್ದೆ ಮತ್ತು ಚಪಾತಿ ರೊಟ್ಟಿ ತಿಂದರೆ ಶುಗರ್ ಕಮ್ಮಿಯಾಗುತ್ತದೆ ಎಂದು ಭಾವಿಸಿದ್ದಾರೆ.

ಆದರೆ ವೈಜ್ಞಾನಿಕವಾಗಿ ಇವೆಲ್ಲವೂ ಕಾರ್ಬೋಹೈಡ್ರೇಟ್ಸ್ ಆಗಿರುವುದರಿಂದ ರಕ್ತದ ಸಕ್ಕರೆ ಪ್ರಮಾಣದಲ್ಲಿ ಏನು ವ್ಯತ್ಯಾಸ ಕಾಣುವುದಿಲ್ಲ.
ಹಾಸನ ಮಂಡ್ಯ ಮೈಸೂರು ಕಡೆಗಳಲ್ಲಿ ಮುಂಚಿನಿಂದಲೂ ಯಥೇಚ್ಛವಾಗಿ ರಾಗಿಯನ್ನು ಬಳಸುತ್ತಾರೆ ಹಾಗಂತ ಅಲ್ಲಿ ಡಯಾಬಿಟಿಸ್ ಬಂದ ಜನರು ಇಲ್ಲವೇ? ಹುಬ್ಬಳ್ಳಿ ಧಾರವಾಡ ಬಿಜಾಪುರ ಕಡೆ ಹೋದರೆ ಎಲ್ಲರೂ ಜೋಳದ ರೊಟ್ಟಿ ತಿನ್ನುತ್ತಾರೆ ಹಾಗಾದ್ರೆ ಅಲ್ಲಿ ಡಯಾಬಿಟಿಸ್ ಪೇಷಂಟ್ ಇಲ್ಲವೇ ?

ಅಮೇರಿಕನ್ ವೈದ್ಯರಾದ ಡಾಕ್ಟರ್ ಮ್ಯಾಕ್ಸ್ವೆಲ್ ಅವರ 21/90 ಸಿದ್ಧಾಂತದ ಪ್ರಕಾರ ಯಾವುದೇ ಕೆಲಸವನ್ನು ನಾವು 21 ದಿವಸ ಮಾಡಿದರೆ ಅದು ನಮಗೆ ಹ್ಯಾಬಿಟ್ ಆಗುತ್ತದೆ. ಅದೇ ಕೆಲಸವನ್ನು ಮೂರು ತಿಂಗಳು ನಾವು ಪಾಲಿಸಿದರೆ ಅದು ಜೀವನಶೈಲಿಯಾಗುತ್ತದೆ,
ಕೇವಲ 90 ದಿನಗಳಲ್ಲಿ ನೀವು ನಿಮ್ಮ ಡಯಾಬಿಟಿಸ್ ಅನ್ನು ಸಂಪೂರ್ಣ ಅಥವಾ ಭಾಗಶಹ ರಿವರ್ಸಲ್ ಮಾಡಿಕೊಳ್ಳಬಹುದು. ಕೇವಲ ನಿಮ್ಮ ಆಹಾರದಲ್ಲಿ ಕೆಲ ಬದಲಾವಣೆಗಳನ್ನು ಮಾಡಿಕೊಂಡು.
ಡಯಾಬಿಟಿಸ್ ರಿವರ್ಸಲ್ ಪುಸ್ತಕಕ್ಕಾಗಿ ಸಂಪರ್ಕಿಸಿ ಡಾ. ಪ್ರೀತಮ್
7899838546
9449138546
ದುರ್ಗಿಗುಡಿ ಫಸ್ಟ್ ಪಾರಲಲ್ ರೋಡ್ ಶಿವಮೊಗ್ಗ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಡಿಸೆಂಬರ್ 6. ಸಾಮಾಜಿಕ ಭದ್ರತಾ ಸೌಲಭ್ಯ ವಿಸ್ತರಣೆ ಅರಿವು ಕಾರ್ಯಾಗಾರ

Shivamogga District Chamber of Commerce and Industry ಶಿವಮೊಗ್ಗ ಜಿಲ್ಲಾ...

Madhu Bangarappa ಹವಾಮಾನಾಧಾರಿತಬೆಳೆವಿಮೆ ಮೊತ್ತ ಪಾವತಿ ನ್ಯೂನತೆ ಸರಿಪಡಿಸಲು ಶೀಘ್ರ ಕ್ರಮ- ಮಧು ಬಂಗಾರಪ್ಪ

Madhu Bangarappa ಅತಿವೃಷ್ಟಿ, ಅನಾವೃಷ್ಟಿ, ತಾಪಮಾನದ ಏರಿಳಿತದಂತಹ ಹವಾಮಾನ ವೈಪರಿತ್ಯಗಳಿಂದ ತೋಟಗಾರಿಕೆ...

DC Shivamogga ಕೆಎಸ್ಎಫ್ ಸಿ ಎಸ್ ಸಿ ಮಳಿಗೆಗಳಲ್ಲಿ ಸಗಟು ಭತ್ತ ಖರೀದಿ ವ್ಯವಸ್ಥೆ- ಗುರುದತ್ತ ಹೆಗಡೆ

DC Shivamogga 2025-26 ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಟ ಬೆಂಬಲ...