Karnataka Rakshana Vedike ಈಗಾಗಲೇ ಕರ್ನಾಟಕ ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳಾದಂತಹ
ಸಿದ್ಧರಾಮಯ್ಯನವರು ಕರ್ನಾಟಕದಲ್ಲಿ ಕನ್ನಡದ ನಾಮಫಲಕ ಕಡ್ಡಾಯಗೊಳಿಸಲಾಗಿದೆ.
ಆದರೆ ಚಿಕ್ಕಮಗಳೂರಾದ್ಯಂತ ಎಲ್ಲಾ ಅಂಗಡಿ ಮುಂಗಟ್ಟು, ಹೋಟೆಲ್, ರೆಸಾರ್ಟ್
ಹೋಂಸ್ಟೇ , ಅಂಗಡಿ, ಕಛೇರಿಗಳಲ್ಲಿ ಕನ್ನಡದ ನಾಮಫಲಕವನ್ನು ಕಡೆಗಣಿಸಲಾಗಿದೆ.
ಆದ್ದರಿಂದ ಕರ್ನಾಟಕ ರಕ್ಷಾಣಾ ವೇದಿಕೆ ಶಿವರಾಮೇಗೌಡರ ಬಣದ ವತಿಯಿಂದ ದಿನಾಂಕ
: 30.12.2023ರ ಶನಿವಾರ ಬೆಳ್ಳಿಗೆ 11-00 ಗಂಟೆಗೆ ಹನುಮಂತಪ್ಪ ಸರ್ಕಲ್‌ನಿಂದ
ಪ್ರಮುಖ ಬೀದಿಗಳಲ್ಲಿ ಕನ್ನಡ ನಾಮಫಲಕ ಹಾಕಲು ಎಲ್ಲರಿಗೂ ವಿನಂತಿಸಿಕೊಳ್ಳಲಾಗುವುದು.
ಎಲ್ಲರೂ ಕಡ್ಡಾಯವಾಗಿ ಕನ್ನಡದ ನಾಮಫಲಕವನ್ನು ಅಳವಡಿಸಲು ಸಾರ್ವಜನಿಕರಲ್ಲಿ
ಮನವಿ ಮಾಡಿಕೊಳ್ಳುತ್ತಿದ್ದೇವೆ. ಫೆಬ್ರವರಿ 28ರವರೆಗೆ ಕಾಲಾವಕಾಶವನ್ನು ಕೊಡಲಾಗಿದೆ.
Karnataka Rakshana Vedike ಅಷ್ಟರಲ್ಲಿ ಚಿಕ್ಕಮಗಳೂರು ಜಿಲ್ಲಾದ್ಯಾಂತ ಕನ್ನಡದ ನಾಮಫಲಕವನ್ನು ಅಳವಡಿಸಿಕೊಳ್ಳಿ
ಇಲ್ಲದಿದ್ದರೆ ಎಲ್ಲಾ ಅಂಗಡಿ ಮುಂಗಟ್ಟು, ಮಹಲ್, ಹೋಟೆಲ್, ರೆಸಾರ್ಟ್,
ಹೋಂ ಸ್ಟೆ
ಕಛೇರಿಗಳು ಇನ್ನು ಹಲವು ಕಛೇರಿಗಳಲ್ಲಿ ಕನ್ನಡ ನಾಮಫಲಕ ಇಲ್ಲದಿದ್ದರೆ ಮಸಿ
ಬಳಿಯಲಾಗುವುದು ಅಥವಾ ಕಿತ್ತು ಹಾಕಲಾಗುವುದು.
ಆದ್ದರಿಂದ
ರಾಜ್ಯಸರ್ಕಾರ ಆದೇಶದಂತೆ ಚಿಕ್ಕಮಗಳೂರಿನಲ್ಲಿ ಕನ್ನಡಾಧಿಕರಣ
ಮಾಡಲು ಕನ್ನಡ ರಕ್ಷಣಾ ವೇದಿಕೆ ವತಿಯಿಂದ ಕೇಳಿಕೊಳ್ಳುತ್ತೇವೆ. ಈ ಬಗ್ಗೆ ಮುಂದಿನ
ಆಗೂ-ಹೋಗುಗಳಿಗೆ ಜಿಲ್ಲಾಡಳಿತ ಮತ್ತು ನಗರಸಭೆ ನೇರ ಹೊಣೆಗಾರರಾಗುತ್ತಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರು ಕಡ್ಟಾಯಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.