Shahi Export Corporation ಶಿವಮೊಗ್ಗ ಸಮೀಪದ ಮಾಚೇನಹಳ್ಳಿಯಲ್ಲಿರುವ ಶಾಹಿ ಎಕ್ಸ್ ಪೋರ್ಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯಿಂದ ನಿಧಿಗೆ ಸರ್ಕಾರಿ ಪ್ರೌಢಶಾಲೆಗೆ ಸುಮಾರು ಐದೂವರೆ ಲಕ್ಷ ರೂ ಮೌಲ್ಯದ ವಿಜ್ಞಾನ ಪ್ರಯೋಗ ಶಾಲೆಯನ್ನು ನಿರ್ಮಿಸಿಕೊಡುವ ಕಾರ್ಯವನ್ನು ಕೈಗೆತ್ತಿಕೊಂಡು ಯಶಸ್ವಿಯಾಗಿದೆ.
ಬರುವ ಡಿಸೆಂಬರ್ 28ರ ಗುರುವಾರ ಬೆಳಿಗ್ಗೆ 11 ಗಂಟೆಗೆ ಶಾಹಿ ಸಂಸ್ಥೆ ನೀಡುವ ವಿಜ್ಞಾನ ಪ್ರಯೋಗಾಲಯವನ್ನು ಹಸ್ತಾಂತರಿಸುವ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಪರಮೇಶ್ವರಪ್ಪ ಸಿ.ಆರ್., ಕ್ಷೇತ್ರ ಶಿಕ್ಷಣಾಧಿಕಾರಿ ಕೆ ನಾಗರಾಜ್, ಡಯಟ್ ಪ್ರಾಂಶುಪಾಲ ಬಸವರಾಜಪ್ಪ ಅವರು ಆಗಮಿಸಿದ್ದಾರೆ.
ವಿಶೇಷವಾಗಿ ಶಾಹಿ ಎಕ್ಸ್ಪೋರ್ಟ್ ನ ಸಿಓಓಗಳಾದ ಸುಖವಂತ್ ಸಿಂಗ್ ಬೈನ್ಸ್, ಅಳಗಪ್ಪನ್ ಆರ್, ಹಿರಿಯ ಜನರಲ್ ಮ್ಯಾನೇಜರ್ ಹರಿಹರ ಪುತ್ರನ್ ವಿ., ಸಹಾಯಕ ಜನರಲ್ ಮ್ಯಾನೇಜರ್ ಲಕ್ಷ್ಮಣ ಧರ್ಮಟ್ಟಿ, ಡೆಪ್ಯುಟಿ ಮ್ಯಾನೇಜರ್ ಪ್ರತಿಶ್ ಎಸ್, ನಿಧಿಗೆ ಸರ್ಕಾರಿ ಪ್ರೌಢಶಾಲೆಯ ಎಸ್ ಬಿ ಎಂ ಸಿ ಅಧ್ಯಕ್ಷ ಪ್ರಕಾಶ್, ಮುಖ್ಯ ಶಿಕ್ಷಕ ಲಕ್ಷ್ಮಣಪ್ಪ ಉಪಸ್ಥಿತರಿರುತ್ತಾರೆ.
Shahi Export Corporation ಭೌತಶಾಸ್ತ್ರ ರಾಸಾಯನಶಾಸ್ತ್ರ ಹಾಗೂ ಗಣಿತ ಅಧ್ಯಯನದ ವಿಶೇಷ ಪ್ರಯೋಗಶಾಲೆ ಇದಾಗಿದ್ದು, ಇದರಲ್ಲಿ ಎಲ್ಲ ಬಗೆಯ ಕಲಿಕೆಯ ಸಾಮಗ್ರಿಗಳು ಇಲ್ಲಿ ದೊರೆಯುತ್ತವೆ. ಶಾಯಿ ಎಕ್ಸ್ಪೋರ್ಟ್ ನ ಕ್ರಮವನ್ನು ಶಾಲಾ ಅಭಿವೃದ್ಧಿ ಸಮಿತಿ ಹಾಗೂ ಶಿಕ್ಷಣ ಇಲಾಖೆ ಆತ್ಮೀಯವಾಗಿ ಅಭಿನಂದಿಸಿದೆ.
ಆತ್ಮೀಯ ಸ್ವಾಗತ: ವಿಜ್ಣಾನ ಪ್ರಯೋಗಾಲಯ ಹಸ್ತಾಂತರ ಕಾರ್ಯಕ್ರಮಕ್ಕೆ ಮಾದ್ಯಮ ಮಿತ್ರರು ಆಗಮಿಸಿ ಸೂಕ್ತ ಪ್ರಚಾರ ನೀಡುವ ಮೂಲಕ ಸರ್ಕಾರಿ ಶಾಲೆಗಳ ಬೆಳವಣಿಗೆಗೆ ಸಹಕರಿಸುವಂತೆ ಕೋರಲಾಗಿದೆ.
- ಲಕ್ಷಣಪ್ಪ, ಮುಖ್ಯ ಶಿಕ್ಷಕರು, ಸ.ಪ್ರೌಢಶಾಲೆ, ನಿಧಿಗೆ, 94812 42971