Saturday, December 6, 2025
Saturday, December 6, 2025

Klive Special ಜೀವಭಾವಗಳುದ್ಧರಿಸಿದ ಏಸುವಿನ ಜನ್ಮದಿನ-ಕವಿ ರಮೇಶ್ ಗುಬ್ಬಿ ಅವರ ಕವಿತೆ

Date:

Klive Special “ಸಮಸ್ತ ಅಕ್ಷರಬಂಧುಗಳಿಗೂ ಕ್ರಿಸ್ಮಸ್ ಹಬ್ಬದ ಹಾರ್ದಿಕ ಶುಭಕಾಮನೆಗಳು. ನಮ್ಮೆಲ್ಲರ ನಲುಮೆಯ ಕ್ರೈಸ್ತ ಬಾಂಧವರಿಗೆ ಶುಭಾಶಯಗಳೊಂದಿಗೆ, ಒಲುಮೆಯ ಅಕ್ಷರಬಂಧುಗಳ ಪರವಾಗಿ ಹಬ್ಬದುಡುಗರೆಯಾಗಿ ಈ ಕಾವ್ಯ ಕಾಣಿಕೆ. ದೇವಮಾನವ ಯೇಸುಕ್ರಿಸ್ತನ ದಿವ್ಯ ಸಂದೇಶ ಜಗದಿ ಅನುಕ್ಷಣವೂ ಅನುರಣಿಸಲಿ. ಸಕಲ ಬದುಕುಗಳೂ ಕರುಣೆ-ಪ್ರೀತಿ-ಮಮತೆಗಳಿಂದ ಸಂತಸದಿ ನಳನಳಿಸಲಿ” – ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.

ಈ ದಿನ..!

ಪ್ರೀತಿ ಮಮಕಾರಗಳ ತತ್ವ
ಸಾರಲು ದೇವದೂತ ಕ್ರಿಸ್ತ
ಧರೆಗಿಳಿದು ಬಂದ ಸುದಿನ
ದಿವ್ಯಜ್ಯೋತಿ ಬುವಿಗಿಳಿದು
ಬೆಳಗಿತು ಅಗಣಿತ ಹೃನ್ಮನ.!

ಕರುಣೆ ಕ್ಷಮೆಗಳ ಮಹತ್ವ
ತೋರಲು ದೈವ ಯೇಸು
ಇಳೆಗವತರಿಸಿದ ಶುಭದಿನ
ಭವ್ಯಕಾಂತಿ ಜೀವತಳೆದು
ಮೊಳಗಿತು ನವ್ಯ ಕೀರ್ತನ.!

ಮಮತೆ ಸತ್ಯಗಳ ನಿಜಸತ್ವ
ಸಾಕ್ಷಿಕರಿಸಲು ದಯಾಮಯ
ಅವನಿಗಡಿಯಿಟ್ಟ ಪುಣ್ಯದಿನ
ಸುರದೀಪ್ತಿ ರೂಪ ಪಡೆದು
ಮಿನುಗಿತು ಅನನ್ಯ ಚೇತನ.!

Klive Special ಜೀವಗಳಿಗೆ ಹೊಸದು ದಿಕ್ಕು
ನೀಡಿದ ದೈವಾಂಶಸಂಭೂತ
ಜನಿಸಿದ ಪಾವನ ಪವಿತ್ರದಿನ
ಬಾಲಕ್ರಿಸ್ತನ ಮುಗುದ ನಗು
ಧರಣಿ ದೇದೀಪ್ಯವಾಗಿಸಿದ ದಿನ.!

ಬದುಕುಗಳ ಬೇಗುದಿ ಬಿಕ್ಕು
ಕಳೆದ ಬೆಳಕ ಕಾರುಣ್ಯದಾತ
ಹುಟ್ಟಿದ ಮಹಾ ಮಂಗಳದಿನ
ಜಗದ ಜೀವಭಾವಗಳುದ್ದರಿಸಿದ
ಯೇಸುದೇವನ ಜನುಮದಿನ.!

ಎ.ಎನ್.ರಮೇಶ್. ಗುಬ್ಬಿ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...