Veerashaiva Lingayat Mahasabha ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ಎರಡನೇ ಅಧಿವೇಶನದಲ್ಲಿ ವೀರಶೈವ ಲಿಂಗಾಯತದ ಎಲ್ಲಾ ಒಳಪಂಗಡಗಳು ಒಂದಾಗಬೇಕು. ಆ ನಿಟ್ಟಿನಲ್ಲಿ ಎಲ್ಲರೂ ಕೈ ಜೋಡಿಸಬೇಕು. ಭವಿಷ್ಯದ ದೃಷ್ಟಿಯಿಂದ ಸಂಘಟಿತರಾಗಬೇಕು. ಇಲ್ಲದಿದ್ದರೆ ಈ ಸಮಾಜ ಅಪಾಯಕ್ಕೆ ಸಿಲುಕಲಿದೆ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿಎಸ್ ಯಡಿಯೂರಪ್ಪನವರು ಸಲಹೆ ನೀಡಿದರು.
ದಾವಣಗೆರೆ ನಗರದ ಬಾಪೂಜಿ ಎಂಬಿಎ ಕಾಲೇಜ್ ಮೈದಾನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ಹಮ್ಮಿಕೊಂಡಿದ್ದ 24ನೇ ಮಹಾಧಿವೇಶನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಮಾತನಾಡಿ ವೀರ ಶೈವ ಲಿಂಗಾಯಿತ ಒಳಪಂಗಡಗಳು ಒಂದಾಗದಿದ್ದರೆ ಭವಿಷ್ಯವಿಲ್ಲವೆಂದರು.
ವೀರಶೈವ ಲಿಂಗಾಯತ ಸಮುದಾಯ ಮೀಸಲು ಪಡೆಯಲು ತಮ್ಮ ಜಾತಿ ಕಾಲಮ್ನಲ್ಲಿ ವೀರಶೈವ ಲಿಂಗಾಯಿತ ಎಂದು ಬರೆಸುತ್ತಿಲ್ಲ. ಮೂಲ ಜಾತಿಯಲ್ಲಿಯೇ ಉಳಿದುಕೊಂಡರೆ ಮೀಸಲು ಸಿಗುತ್ತದೆ ಎಂಬ ಕಾರಣಕ್ಕೆ ಈ ರೀತಿ ಆಗುತ್ತಿದೆ. ಈ ಬಗ್ಗೆ ಎಚ್ಚರ ವಹಿಸಬೇಕು ಎಂದು ಮಾಜಿ ಸಚಿವ ಎಸ್ ಆರ್ ಪಾಟೀಲ್ ಅವರು ವಿಷಯ ಪ್ರಸ್ತಾಪಿಸಿದರು.
Veerashaiva Lingayat Mahasabha ಕಾಂಗ್ರೆಸ್ ಶಾಸಕ ಬಸವರಾಜ್ ರಾಯರೆಡ್ಡಿ ಅವರು ಮಾತನಾಡಿ ಬೇರೆ ಮೀಸಲು ಕೇಳುವ ಬದಲು ವೀರಶೈವ ಸಮುದಾಯಕ್ಕೆ ಈಗಿರುವ ಶೇಕಡಾ ಐದರಷ್ಟು ಮೀಸಲು ಹೆಚ್ಚಿಸಲು ಒತ್ತಡ ಹಾಕುವುದು ಒಳ್ಳೆಯದು ಎಂದರು.
ಉಜ್ಜಯಿನಿ ಪೀಠದ ಸಿದ್ದಗಂಗಾ ರಾಜದೇಶಿ ಕೇಂದ್ರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಒಂದು ಬೆರಳಿನಿಂದ ಏನು ಮಾಡಲು ಸಾಧ್ಯವಿಲ್ಲ. ಈ ಬೆರಳಿಂದ ಯಾರನ್ನಾದರೂ ತಿವಿದರೆ ಬೆರಳಿಗೇ ನೋವಾಗುತ್ತದೆ. ಹೀಗಾಗಿ ಎಲ್ಲಾ ಐದು ಬೆರಳು ಸೇರಿದರೆ ವಜ್ರಮುಷ್ಟಿ ಶಕ್ತಿ ಬರುತ್ತದೆ. ಹಾಗಾಗಿ ಎಲ್ಲಾ ಒಡಪಂಗಡಗಳು ಒಂದಾದರೆ ವಜ್ರಮುಷ್ಟಿ ಶಕ್ತಿ ಸಿಗಲಿದೆ. ಮಹಾಸಭಾದಿಂದಲೇ ಜಾತಿಗಣತಿ ಮಾಡಬಹುದು ಎಂದರು.
ವೀರಶೈವ ಲಿಂಗಾಯತ ಒಳಪಂಗಡಗಳು ಒಂದಾಗ ಬೇಕಾದ ಕಾಲ ಬಂದಿದೆ. ಯಾರ ವಿರುದ್ಧವು ಶಕ್ತಿ ಪ್ರದರ್ಶನಕ್ಕಲ್ಲ. ನಮ್ಮ ಮಕ್ಕಳ ಭವಿಷ್ಯಕ್ಕಾಗಿ ಒಂದಾಗಬೇಕಿದೆ. ಮಹಾಸಭಾ ನಿರ್ಣಯಗಳಿಗೆ ನಮ್ಮ ಬೆಂಬಲವಿದೆಯೆಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ತಿಳಿಸಿದರು.