Saturday, September 28, 2024
Saturday, September 28, 2024

Vagdevi Charitable Trust ತೀರ್ಥಹಳ್ಳಿಯ ಹಿರಿಮೆ-ಸಾಮಾಜಿಕ ಕಳಕಳಿಯ ವಾಗ್ದೇವಿ ಚಾರಿಟಬಲ್ ಟ್ರಸ್ಟ್

Date:

Vagdevi Charitable Trust ಆರ್ಥಿಕವಾಗಿ ಹಿಂದುಳಿದ ವಿಕಲಚೇತನರು, ಅನಾಥರು, ವೃದ್ಧರು ಮತ್ತು ಅನಾರೋಗ್ಯ ಪೀಡಿತರಿಗೆ ಸಹಾಯ ಮಾಡುವ ಮೂಲ ಉದ್ದೇಶದೊಂದಿಗೆ ತೀರ್ಥಹಳ್ಳಿಯಲ್ಲಿ 2015ರಲ್ಲಿ ವಾಗ್ದೇವಿ ಚಾರಿಟೇಬಲ್ ಟ್ರಸ್ಟ್ ಆರಂಭವಾಯಿತು.

ಟ್ರಸ್ಟ್ ಇದುವರೆಗೆ ಹಲವಾರು ಸೇವಾ ಕಾರ್ಯಗಳು ಮಾಡಿದೆ.

  • ವಿಕಲಚೇತನ ವ್ಯಕ್ತಿಯೊಬ್ಬರಿಗೆ ಮನೆಯನ್ನು ಕಟ್ಟಿಸಿ ಕೊಡಲಾಗಿದೆ.
  • ಆರ್ಥಿಕವಾಗಿ ಹಿಂದುಳಿದ ವಿಕಲಚೇತನರ ಎರಡು ಕುಟುಂಬಗಳಿಗೆ ಸ್ನಾನ ಗೃಹ ಮತ್ತು ಶೌಚಾಲಯದ ವ್ಯವಸ್ಥೆ ಮಾಡಲಾಗಿದೆ.
  • ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಸೋಲಾರ್ ದೀಪಗಳನ್ನು ಕೊಡುಗೆಯಾಗಿ ಕೊಟ್ಟಿದೆ.
  • 15 ವಿಕಲಚೇತನ ಬಡ ವಿದ್ಯಾರ್ಥಿನಿಯರಿಗೆ ಸುಕನ್ಯಾ ಸಮೃದ್ಧಿ ಯೋಜನೆಗೆ ರೂ.1000 ನೀಡಲಾಗಿದೆ.
  • ಕ್ಯಾನ್ಸರ್ ಪೀಡಿತರು ಹಾಗೂ ಅಪಘಾತದಿಂದ ತೀವ್ರವಾಗಿ ಗಾಯಗೊಂಡವರಿಗೆ ಆರ್ಥಿಕ ನೆರವು ನೀಡಲಾಗಿದೆ.
  • ಸರ್ಕಾರಿ ಶಾಲೆಯೊಂದಕ್ಕೆ ಕೆಲವೊಂದು ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ.
  • ವಾಗ್ದೇವಿ ವರ್ಷಾಧಾರ ಯೋಜನೆಯಡಿ 15 ಜನ ಆರ್ಥಿಕವಾಗಿ ಹಿಂದುಳಿದ ವಿಕಲಚೇತನರಿಗೆ ವಾರ್ಷಿಕ 5000 ಹಾಗೂ ಮಹಿಳಾ ಅಬಲಾಶ್ರಮವೊಂದಕ್ಕೆ ವಾರ್ಷಿಕ 10000 ಸಹಾಯಧನ ನೀಡಲಾಗುತ್ತಿದೆ
  • ವಾಗ್ದೇವಿ ವಿದ್ಯಾಧಾರ ಯೋಜನೆಯಡಿ 15 ವಿಕಲಚೇತನ ವಿದ್ಯಾರ್ಥಿಗಳಿಗೆ ವಾರ್ಷಿಕ 1000 ರೂ. ಸಹಾಯಧನ ನೀಡಲಾಗುತ್ತಿದೆ. ಕಂಪ್ಯೂಟರ್ ಸೈನ್ಸ್ ನಲ್ಲಿ ಬಿಇ ಪದವಿ ಮಾಡುತ್ತಿರುವ ಅನಾಥ ವಿದ್ಯಾರ್ಥಿಯೊಬ್ಬನಿಗೆ ಲ್ಯಾಪ್ ಟಾಪ್ ನ್ನುನೀಡಲಾಗಿದೆ.
  • Vagdevi Charitable Trust ವಾಗ್ದೇವಿ ಆರೋಗ್ಯಧಾರ ಯೋಜನೆಯಡಿ ಅನಾರೋಗ್ಯ ಪೀಡಿತ ವೃದ್ಧರೊಬ್ಬರಿಗೆ 1000 ವನ್ನು ಹಾಗೂ ಇನ್ನೋರ್ವ ವೃದ್ಧ ದಂಪತಿಗಳಿಗೆ ರೂ. 3000, ಹಾಗೂ ಮಹಿಳೆಯೊಬ್ಬರಿಗೆ ಮಾಸಿಕ 1000 ರೂ.ಗಳನ್ನು ಔಷಧಿ ಖರ್ಚಿಗೆಂದು ನೀಡಲಾಗುತ್ತಿದೆ. ಅಂಗವಿಕಲರೊಬ್ಬರಿಗೆ ಮಾಸಿಕ 1000 ರೂ. ಕೊಡಲಾಗುತ್ತಿದೆ. ಅಲ್ಲದೆ ಅನಾಥೆ ವೃದ್ಧೆಯೊಬ್ಬರ ಕಣ್ಣಿನ ಶಸ್ತ್ರ ಚಿಕಿತ್ಸೆಗೆ 20000 ರೂಪಾಯಿ ನೀಡಲಾಗಿದೆ. ವೃದ್ಧೆಯೊಬ್ಬರ ಮೊಮ್ಮಗನಿಗೆ ಒಂದು ಜೊತೆ ಸಮವಸ್ತ್ರವನ್ನು ಕೊಡಲಾಗಿದೆ.
  • ವಾಗ್ದೇವಿ ಆಶ್ರಯಾಧಾರ ಯೋಜನೆಯಡಿ ಬಡ ವೃದ್ಧರ ವಾಸದ ಮನೆಯ ರಿಪೇರಿಯನ್ನು ಒಂದು ಲಕ್ಷ ವೆಚ್ಚದಲ್ಲಿ ಮಾಡಲಾಗಿದೆ.
    ಹಾಗೆ ಇನ್ನೊಂದು ಬಡ ಕುಟುಂಬಕ್ಕೆ ಮನೆಯ ಗೋಡೆಯ ಮೇಲೆ ಬೀಳುವ ಮಳೆ ನೀರನ್ನು ತಡೆಯುವ ಉದ್ದೇಶದಿಂದ ಟಾರ್ಪಲಿನ್ ವ್ಯವಸ್ಥೆ ಮಾಡಿದೆ.
    *ವಾಗ್ದೇವಿ ಅನ್ನಾಧಾರ ಯೋಜನೆಯಡಿ ನಾಲ್ಕು ಕುಟುಂಬಗಳಿಗೆ ಪ್ರತಿ ತಿಂಗಳು ದಿನಸಿ ಸಾಮಗ್ರಿಗಳನ್ನು ನೀಡಲಾಗುತ್ತಿದೆ.

ಹೀಗೆ ಅವಶ್ಯಕತೆಯುಳ್ಳ ಆರ್ಥಿಕವಾಗಿ ಹಿಂದುಳಿದ ವಿಕಲಚೇತನರು, ವೃದ್ಧರು ಮತ್ತು ಅನಾಥರಿಗೆ ಅನೇಕ ರೀತಿಯ ನೆರವು ನೀಡುತ್ತಾ ಅವರಲ್ಲಿ ಆತ್ಮವಿಶ್ವಾಸ ತುಂಬುತ್ತಾ ಸ್ವತಂತ್ರ ಜೀವನಕ್ಕೆ ಪೂರಕ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಟ್ರಸ್ಟ್ ಕಾರ್ಯೋನ್ಮುಖವಾಗಿದೆ.
ಟ್ರಸ್ಟ್ ಸಂಪೂರ್ಣ ದಾನಿಗಳ ನೆರವಿನಿಂದ ಕಾರ್ಯನಿರ್ವಹಿಸುತ್ತಿದ್ದು ಟ್ರಸ್ಟ್ ಗೆ ನೀಡುವ ದೇಣಿಗೆ ಆದಾಯ ತೆರಿಗೆ ಸೆಕ್ಷನ್ 80 ಜಿ ಅಡಿ ತೆರಿಗೆ ವಿನಾಯಿತಿ ಇದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Sri Adhichunchanagiri Mahasamsthana Math ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ನವರಾತ್ರಿ ಸಂಭ್ರಮ

Sri Adhichunchanagiri Mahasamsthana Math ಶರನ್ನವರಾತ್ರಿ ಉತ್ಸವದ ಪ್ರಯುಕ್ತ ಪ್ರತಿ ವರ್ಷದಂತೆ...

Department of Fisheries ಮತ್ಸ್ಯಸಂಪದ ಮತ್ತು ನೀಲಿಕ್ರಾಂತಿ ಯೋಜನೆಯಡಿ ಅರ್ಜಿ ಆಹ್ವಾನ

Department of Fisheries ಮೀನುಗಾರಿಕೆ ಇಲಾಖೆಯು 2022-23 ರಿಂದ 2024-25 ನೇ...

National Open Athletic Championship ಬಿಹಾರದ ಓಪನ್ ಅಥ್ಲೇಟಿಕ್‌ನಲ್ಲಿ ಶಿವಮೊಗ್ಗ ಜಿಲ್ಲೆಯ ಕ್ರೀಡಾಪಟು

National Open Athletic Championship ಬಿಹಾರದ ಪಾಟ್ನದಲ್ಲಿ ಸೆ. 28 ರಿಂದ...

Bhadravati Police ಅನಾಮಧೇಯ ಗಂಡಸ್ಸಿನ ಶವ ಪತ್ತೆ

Bhadravati Police ಭದ್ರಾವತಿ ಶಿವಪುರ ಗ್ರಾಮದಲ್ಲಿ ಭದ್ರಾ ಬಲದಂಡೆ ನಾಲೆಯಲ್ಲಿ ಸುಮಾರು...