Vande Mataram Trust ಮಾನವ ಜನಾಂಗದ ಎಂತಹ ಸಮಸ್ಯೆಗಳಿಗೂ ಭಗವದ್ಗೀತಾ ಧರ್ಮ ಗ್ರಂಥದಲ್ಲಿ ಪರಿಹರಿಸುವ ಗುಣವಿದ್ದು ಪ್ರತಿ ಹಿಂದೂಬಾಂಧವರು ತಮ್ಮ ಮನೆಗಳಲ್ಲಿ ಗ್ರಂಥವನ್ನು ಇರಿಸಿ ಅಭ್ಯಾಸಿ ಸುವ ಮೂಲಕ ಪೂಜಿಸುವ ಗುಣ ಬೆಳೆಸಿಕೊಳ್ಳಬೇಕು ಎಂದು ವಂದೇ ಮಾತರಂ ಟ್ರಸ್ಟ್ ಅಧ್ಯಕ್ಷ ಪ್ರೀತೇಶ್ ಹೇಳಿದರು.
ಚಿಕ್ಕಮಗಳೂರು ನಗರದ ಕೋಟೆ ಸಮೀಪದ ವೀರಗಲ್ಲು ವೃತ್ತದ ಬಳಿ ವಂದೇ ಮಾತರಂ ಟ್ರಸ್ಟ್ ವತಿಯಿಂದ ಗೀತಾ ಜಯಂತಿ ಪ್ರಯುಕ್ತ ಸುಮಾರು ೧೦೮ ಭಗವದ್ಗೀತಾ ಧರ್ಮಗ್ರಂಥವನ್ನು ಮಕ್ಕಳ ಮೂಲಕ ಸಾರ್ವಜನಿಕರಿಗೆ ಉಚಿತವಾಗಿ ವಿತರಿಸಿದರು.
ಭಗವಾನ್ ಶ್ರೀಕೃಷ್ಣನು ಅರ್ಜುನನಿಗೆ ಬೋಧಿಸಿದ ದಿನವನ್ನು ಗೀತಾ ಜಯಂತಿಯಂದು ಆಚರಿಸಲಾಗುತ್ತಿದೆ ಎಂದ ಅವರು ಸಮಸ್ತ ಹಿಂದೂಬಾಂಧವರು ಇತರೆ ಹಬ್ಬದಂತೆ ಧರ್ಮಗ್ರಂಥದ ದಿನವನ್ನು ಆಚರಿಸಿ ಗ್ರಂಥದಲ್ಲಿ ಅಳವಡಿಸಿರುವ ತತ್ವಸಾರವನ್ನು ಸಮಾಜದ ನಾಗರೀಕರಿಗೆ ಬೋಧಿಸುವಂತಾಗಬೇಕು ಎಂದು ಹೇಳಿದರು.
Vande Mataram Trust ಭಗವದ್ಗೀತಾ ಗ್ರಂಥದಲ್ಲಿ ಮನುಷ್ಯನ ಮಾನಸಿಕ, ಆರೋಗ್ಯ ಸೇರಿದಂತೆ ಅನೇಕ ಸಮಸ್ಯೆಗಳಿಗೆ ಸೂಕ್ತ ಪರಿ ಹರಿಸುವ ಮಾಹಿತಿ ಲಭ್ಯವಿದೆ. ಧರ್ಮಗ್ರಂಥವನ್ನು ಹಂಚುವ ಸಂಕಲ್ಪದ ಧ್ಯೇಯೋದ್ದೇಶವನ್ನಿಟ್ಟುಕೊಂಡು ಸಾರ್ವ ಜನಿಕರಿಗೆ ವಿತರಿಸಿ ಅರಿವು ಮೂಡಿಸುವ ಕಾರ್ಯಕ್ಕೆ ಕೈಹಾಕಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಂದೇ ಮಾತರಂ ಟ್ರಸ್ಟ್ ಪದಾಧಿಕಾರಿಗಳಾದ ನವೀನ್, ರವೀಶ್, ಮಹಿಳಾ ಘಟಕದ ವಿದ್ಯಾಶ್ರೀ, ಆಟೋ ಚಾಲಕ ದ್ವಾರಕೇಶ್, ಮಕ್ಕಳಾದ ನಿಶ್ವಿನ್ ಸೂರ್ಯ, ಗೌರವ್, ಇಷ್ಟರ್ತ ಸಾಯಿ ಹಾಜರಿದ್ದರು.