Department of Health and Family Welfare ಚಿಕ್ಕಮಗಳೂರು ನಗರದ ಉಪ್ಪಳ್ಳಿ ಸಮೀಪದಲ್ಲಿ ಜವೇರಿಯಾ ಉಚಿತ ಅಂಬುಲೆನ್ಸ್ 24×7 ವಾಹನಗಳ ಸೇವೆಗೆ ಜಾಮೀಯಾ ಮಸೀದಿ ಅಧ್ಯಕ್ಷ ಝಮೀರ್ ಅಹ್ಮದ್ ಅಧಿಕೃತವಾಗಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಝಮೀರ್ ಅಹ್ಮದ್ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಉಚಿತ ಸೇವೆ ನೀಡುತ್ತಿರುವ ಅಂಬುಲೆನ್ಸ್ ಮಾಲೀಕರ ಕೆಲಸ ಸ್ಮರಣೀಯವಾಗಿದೆ. ಎಲ್ಲಾ ಧರ್ಮದ ಬಡ ಹಾಗೂ ಹಿಂದುಳಿದವರಿಗೂ ನಗರ ವ್ಯಾಪ್ತಿಯಲ್ಲಿ ಉಚಿತವಾಗಿ ಸೇವೆ ನೀಡಿ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿರುವುದು ಹೆಮ್ಮೆಯ ಸಂಗತಿ ಎಂದರು.
ಅದೇ ರೀತಿಯಲ್ಲಿ ಅಂಬುಲೆನ್ಸ್ ಚಾಲಕರುಗಳು ತುರ್ತು ಸಂದರ್ಭದಲ್ಲಿ ಪ್ರಾಣದಹಂಗು ತೊರೆದು ವಾಹನ ಚಲಾಯಿಸುತ್ತಿರುವುದರಿಂದ ಸ್ಥಳೀಯ ಜನಪ್ರತಿನಿಧಿಗಳು ಸರ್ಕಾರದಿಂದ ಸವಲತ್ತುಗಳನ್ನು ಒದಗಿಸಿದರೆ ಬಹಳಷ್ಟು ಅನುಕೂಲವಾಗಲಿದೆ ಜೊತೆಗೆ ಉಚಿತ ಇನ್ಸೂರೆನ್ಸ್ ಸೇವೆ ಒದಗಿಸಿಕೊಡಬೇಕು ಎಂದು ಆಗ್ರಹಿಸಿದರು.
Department of Health and Family Welfare ಕಾಂಗ್ರೆಸ್ ಯುವ ಮುಖಂಡ ಶಹಬುದ್ದೀನ್ ಮಾತನಾಡಿ ದಿನನಿತ್ಯದ ವ್ಯಾಪಾರ ಜೊತೆಗೆ ಅತ್ಯಧಿಕ ತಂತ್ರ ಜ್ಞಾನ ವ್ಯವಸ್ಥೆಯುಳ್ಳ ಎರಡು ಉಚಿತ ಅಂಬುಲೆನ್ಸ್ ವಾಹನಗಳನ್ನು ನೀಡಿರುವುದು ಒಳಿತು. ಆ ನಿಟ್ಟಿನಲ್ಲಿ ಇಂದಿನ ಯುವಪೀಳಿಗೆ ಮಾದಕ ವ್ಯಸನಿಗಳಾಗಿ ಯೌವ್ವಳ ಹಾಳು ಗೆಡುವ ಬದಲು ಇಂತಹ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿ ಸಮಾಜಕ್ಕೆ ಮಾದರಿಯಾಗಿ ಬದುಕಬೇಕು ಎಂದು ತಿಳಿಸಿದರು.
ಅಂಬುಲೆನ್ಸ್ ವಾಹನ ಮಾಲೀಕ ಮಹ್ಮದ್ ಜುನೇದ್ ಮಾತನಾಡಿ ಕಳೆದ ಕೆಲ ವರ್ಷಗಳ ಹಿಂದೆ ತಮ್ಮ ಮಗಳು ಸಮಯಕ್ಕೆ ಅಂಬುಲೆನ್ಸ್ ಸೇವೆ ದೊರೆಯದ ಹಿನ್ನೆಲೆಯಲ್ಲಿ ಮೃತರಾಗಿದ್ದು ಆ ಮಗುವಿನ ಸ್ಮರಣಾರ್ಥ ಜವೇರಿಯಾ ಎಂಬ ಹೆಸರಿನಲ್ಲಿ ನಗರ ವ್ಯಾಪ್ತಿಯಲ್ಲಿ 05 ಕಿ.ಮೀ.ವರೆಗೂ ಉಚಿತ ಸೇವೆ ನೀಡಲಾಗುತ್ತಿದೆ. ಅದಲ್ಲದೇ ತೀರಾ ಕಡುಬಡವರಿಗೆ ಸಂಪೂರ್ಣ ಉಚಿತ ಸೇವೆ ನೀಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರುಗಳಾದ ಅಕ್ರಮ್, ತೇಜಸ್‌ಕುಮಾರ್ ಚಾಲಕರಾದ ಅಬ್ರಾಜ್ , ಜುನೇದ್ ಅವರು ಉಪಸ್ಥಿತರಿದ್ದರು.