Friday, November 22, 2024
Friday, November 22, 2024

S N Channabasappa ವಾಜಪೇಯಿ ಬಡಾವಣೆಯಲ್ಲಿ ರಾಜಯೋಗ ಭವನ ನಿರ್ಮಾಣ ಸಂತಸದ ವಿಷಯ- ಎಸ್.ಎನ್.ಚನ್ನಬಸಪ್ಪ

Date:

S N Channabasappa ಬ್ರಹ್ಮಕುಮಾರಿ ಈಶ್ವರೀಯ ವಿವಿ ಯ ರಾಜಯೋಗ ಭವನದ ಶಂಕುಸ್ಥಾಪನಾ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿದ್ದ ಡಾ. ಬಸವರಾಜ ರಾಜಋಷಿ ಆಶೀರ್ವಚನ ನೀಡುತ್ತಾ ಶಿವಮೊಗ್ಗ ಶಿವಶರಣರು ಭೂಮಿ. ಸಮಾಜಗಲ್ಲಿ ಸಮಾನತೆ ತರುವಲ್ಲಿ ಶರಣರ ಸಾಧನೆ ಅಪಾರವೆಂದು ನುಡಿದರು. ಜೊತೆಗೆ ನಮಃ ಶಿವಾಯ ಮಹಾಮಂತ್ರದ ಮಹತ್ವವನ್ನು ತಿಳಿಸಿದರು.

ಬ್ರಹ್ಮಾಕುಮಾರಿ ಈ ವಿ ವಿ, ವಾಜಪೇಯಿ ಬಡಾವಣೆಯ ರಾಜಯೋಗ ಭವನದ ಶಂಕುಸ್ಥಾಪನೆಯನ್ನು ನೆರವೇರಸಿದ ನಂತರ ಶಾಸಕ ಚನ್ನಬಸಪ್ಪರವರು ಮಾತನಾಡುತ್ತಾ ಅಟಲ್ ಬಿಹಾರಿ ವಾಜಪೇಯಿ ರವರು ಈ ವಿ ವಿದ್ಯಾಲಯದ ಪ್ರಧಾನಕೇಂದ್ರ ಮೌಂಟ್ಅಬುವಿಗೆ ಆಗಾಗ ಬೇಟಿ ನೀಡಿ ಪರಮಾತ್ಮನ ಪ್ರೇರಣೆಯನ್ನು ಪಡೆಯುತ್ತಿದ್ದರು. ವಾಜಪೇಯಿ ಹೆಸರಿನ ಬಡಾವಣೆಯಲ್ಲಿ ರಾಜಯೋಗ ಭವನ ನಿರ್ಮಾಣವಾಗುತ್ತಿರುವುದು ಸಂತಸವಾಗಿದೆ . ಇದು ಎಲ್ಲರಿಗೂ ಆತ್ಮಶಕ್ತಿ ಕೇಂದ್ರವಾಗಲಿ ಎಂದು ಶುಭ ಹಾರೈಸಿದರು.

ವಿಧಾನ ಪರಿಷತ್ ಶಾಸಕರಾದ ಅರುಣರವರು ಮಾತನಾಡುತ್ತಾ ಜಗತ್ತಿನಲ್ಲಿ ಸಾಕಷ್ಟು ವಿ ವಿ ಗಳಿವೆ. ಆದರೆ ವರ್ತಮಾನದಲ್ಲಿ ಸಮಾಜಕ್ಕೆ ಅತಿ ಅತ್ಯವಶ್ಯವಾಗಿರುವ, ಉತ್ತಮ ಆಚಾರ , ವಿಚಾರ,ಸಂಸ್ಕಾರ ಕಲಿಸುವಂಥಹ ಅತ್ಯುನ್ನತವಾದ ವಿ ವಿ ಕೇಂದ್ರ ಈಶ್ವರೀಯ ವಿ ವಿ ವಾಗಿದೆ ಎಂದರು.

ಚಂದ್ರಶೇಖರಪ್ಪ , ಮಾಜಿ ಶಾಸಕರು ಮಾತನಾಡುತ್ತಾ ಹಣದಿಂದ ಶಾಂತಿ, ನೆಮ್ಮದಿ ಸಿಗುವುದಿಲ್ಲ. ಆದರೆ ಈ ಸಂಸ್ಥೆಯಲ್ಲಿ ಕಲಿಸುವ ರಾಜಯೋಗದಿಂದ ಲಭುಸುವುದು ಎಂದು ತಿಳಿಸಿದರು.

ಬಿಕೆ ಸ್ನೇಹಕ್ಕನವರು ಈಶ್ವರೀಯ ಸಂದೇಶ ನೀಡುತ್ತಾ ಮೌಲ್ಯಾಧಾರಿತ ಸಮಾಜ ನಿರ್ಮಾಣ ಕಾರ್ಯ ಈ ಭವನದ ಮೂಲಕ ಆಗಲಿದೆ ಎಂದು ತಿಳಿಸಿದರು.

ಯೋಗೇಶ್ ಮಾಜಿ ನಗರಪಾಲಿಕೆ ಸದಸ್ಯರು ವರ್ತಮಾನ ಪೀಳಿಗೆಗೆ ಆಧ್ಯಾತ್ಮದ ಅವಶ್ಯಕತೆ ಕುರಿತು ತಿಳಿಸಿದರು. ರೋಟರಿ ಶರತ್ಚಂದ್ರ , ರಘು , ನಿಂಗಪ್ಪ ರವರು ಉಪಸ್ಥಿತರಿದ್ದರು.
ಧನಂಜಯ ಸ್ವಾಗತಿಸಿದರು.
ಮಂಜಪ್ಪನವರು ವಂದಿಸಿದರು.
ಶಿವಮೊಗ್ಗ ಸೇವಾಕೇಂದ್ರದ ಸಂಚಾಲಕಿಯಾದ ರಾಜಯೋಗಿನಿ ಬಿಕೆ ಅನಸೂಯಕ್ಕನವರು ಕಾರ್ಯಕ್ರಮವನ್ನು ಆಯೋಜಿಸಿ , ನಿರೂಪಿಸಿದರು.

S N Channabasappa ಗಾನಾಂತರಂಗ /ಶಶಿಕಲಾ ಹಾಗೂ ತಂಡದವರಿಂದ ಭಕ್ತಿಗೀತೆ ಹಾಗೂ ವೇದ ಬ್ರಹ್ಮ ವಿನಾಯಕ ಬಾಯರಿ ತಂಡದಿಂದ ವೇದಘೋಷ ಜರುಗಿತು.
ಜಿಲ್ಲೆಯ ಸೇವಾಕೇಂದ್ರ ಸಂಚಾಲಕಿ ಸೋದರಿಯರು ಹಾಗೂ ಈಶ್ವರೀಯ ಪರಿವಾರದವರೆಲ್ಲರೂ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Department of Cooperation ಹಿರಿಯ ಸಹಕಾರಿ ಧುರೀಣ ಕೊಪ್ಪದ ಎಸ್.ಎನ್.ವಿಶ್ವನಾಥ್ ಗೆ ‘ ಸಹಕಾರಿ ರತ್ನ’ ಪ್ರಶಸ್ತಿ.

Department of Cooperation ಕರ್ನಾಟಕ ಸರ್ಕಾರದ ಕರ್ನಾಟಕ ಸಹಕಾರ ಮಹಾಮಂಡಲ ದ...

Kasturba Girls Junior College ಮಕ್ಕಳ ಪ್ರತಿಭೆ ಅನಾವರಣಗೊಳಿಸುವ ಪ್ರತಿಭಾ ಕಾರಂಜಿಗೆ ಇನ್ನಷ್ಟು ಶಕ್ತಿ ತುಂಬೋಣ- ಶಾಸಕ ಚನ್ನಬಸಪ್ಪ

Kasturba Girls Junior College ವೈವಿಧ್ಯತೆಯನ್ನು ಹೊಂದಿರುವ ನಮ್ಮ ರಾಷ್ಟ್ರದ ಸಂಸ್ಕೃತಿಯನ್ನು...