Thursday, November 21, 2024
Thursday, November 21, 2024

 ABSP ಕನ್ನಡದ ಹಿರಿಯ ಸಾಹಿತಿ ಪ್ರೊ. ಪ್ರೇಮಶೇಖರ ಅವರಿಗೆ ಭುವನೇಶ್ವರದಲ್ಲಿ ಸನ್ಮಾನ

Date:

ABSP ಭಾರತೀಯ ಸಾಹಿತ್ಯ ಕ್ಷೇತ್ರಕ್ಕೆ ಉತ್ಕೃಷ್ಟ ಕೊಡುಗೆ ನೀಡಿದ ಹಿನ್ನೆಲೆಯಲ್ಲಿ ಕನ್ನಡದ ಹೆಸರಾಂತ ಸಾಹಿತಿ, ಅಂಕಣಕಾರ ಪ್ರೊ. ಪ್ರೇಮಶೇಖರ ಅವರನ್ನು ಭುವನೇಶ್ವರದಲ್ಲಿ ನಡೆದ ಪ್ರತಿಷ್ಠಿತ ಸರ್ವಭಾಷಾ ಸಾಹಿತ್ಯಕಾರ್ ಸಮ್ಮಾನ ಕಾರ್ಯಕ್ರಮದಲ್ಲಿ ಸಮ್ಮಾನಿಸಲಾಗಿದೆ.

ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ವತಿಯಿಂದ ನಡೆದ ಈ ಸಮ್ಮಾನವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಅವರು ನೆರವೇರಿಸಿದರು.

ದೇಶದೆಲ್ಲೆಡೆಯಿಂದ ಆಯ್ಕೆಯಾದ ಒಟ್ಟು ಹದಿನಾಲ್ಕು ಭಾಷೆಗಳ ಸಾಹಿತಿಗಳನ್ನು ಈ ಸಂದರ್ಭದಲ್ಲಿ ಭಾಗವತ್ ಅವರು ಸಮ್ಮಾನಿಸಿದರು.

ಕಾರ್ಯಕ್ರಮದಲ್ಲಿ ಉದ್ಬೋಧನೆಗೈದು ಮಾತನಾಡಿದ ಮೋಹನ್ ಭಾಗವತ್ ಸಂಕ್ಷಿಪ್ತವಾಗಿ ಹೇಳಿದ್ದಿಷ್ಟ.

‘ಆಧ್ಯಾತ್ಮಿಕ ಜಾಗೃತಿ ಆದ ಬಳಿಕ ಸಾಮಾಜಿಕ ಜಾಗೃತಿ ಘಟಿಸುತ್ತದೆ. ಮನಃಪರಿವರ್ತನೆಯ ಮೂಲಕ ಆಧ್ಯಾತ್ಮಿಕ ಜಾಗೃತಿಯಾಗುತ್ತದೆ. ಇದನ್ನು ಆಗುಮಾಡುವುದು ಸಾಹಿತ್ಯ‌‌. ಸ್ವಾಂತಸುಖಾಯ ಸ್ಫೂರ್ತಿಯಿಂದ ರಚನೆಯಾದ ಸಾಹಿತ್ಯ ಜನರಿಗೂ ಆನಂದವನ್ನು ಉಂಟುಮಾಡುತ್ತದೆ. ಸಹಿತ ಅಂದರೆ ಒಟ್ಟಿಗಿರುವುದು. ಕರ್ಮ ಒಟ್ಟಿಗಿರುತ್ತದೆ. ಸಂಕಲ್ಪದಿಂದ ಕರ್ಮ. ಸಂಕಲ್ಪದ ಹಿಂದಿರುವುದು ಮನಸ್ಸು. ಮನಸ್ಸನ್ನು ನಿಯಂತ್ರಿಸುವುದು ಬುದ್ಧಿ. ರಾಗದ್ವೇಷಗಳನ್ನು ಬದಿಗಿಟ್ಟು ಹಿತವನ್ನು ಮುಖ್ಯವಾಗಿಸಿದಾಗ ಕರ್ಮವು ದೈವೀ ಸ್ಫೂರ್ತಿಯಿಂದ ಅಭಿವ್ಯಕ್ತವಾಗುತ್ತದೆ. ನಿಜ ಸಾಹಿತ್ಯ ನಿರ್ಮಾಣದ ಗುಟ್ಟು ಇದು. ಹಿತದ ಪರಿಕಲ್ಪನೆ ಉಳಿದೆಡೆಗಿಂತ ಭಾರತದಲ್ಲಿ ಭಿನ್ನವಿದೆ. ತನ್ನ ಹಿತಕ್ಕೂ ಉಳಿದುದಕ್ಕೂ ಸಂಬಂಧವಿಲ್ಲವೆಂದು ಉಳಿದೆಡೆ ಭಾವಿಸಿದರೆ, ಸಂಬಂಧವಿದೆ ಎಂದು ಭಾರತೀಯ ದೃಷ್ಟಿ ಹೇಳುತ್ತದೆ. ಎಲ್ಲರೂ ಒಂದೇ ಎಂದು ಭಾವಿಸುವ ಭಾರತದ ತಾತ್ತ್ವಿಕತೆಯು ಉಳಿದುದರ ಹಿತದಲ್ಲಿ ತನ್ನ ಹಿತವನ್ನು ಕಾಣುತ್ತದೆ’.

‘ಸಮಾಜವನ್ನು ಜೋಡಿಸಿ ಸೃಷ್ಟಿಯ ಶ್ರೇಯಸ್ಸನ್ನು ಪರಿಗಣಿಸಿ ಎಲ್ಲರ ಇಹಪರ ಸುಖವನ್ನು ಸಾಧಿಸುವ ಸಂಗತಿಯೇ ಧರ್ಮ. ಸಾಹಿತ್ಯವು ಧರ್ಮವನ್ನು ಪ್ರೇರೇಪಿಸುವುದಾಗಬೇಕು. ಧರ್ಮದ ಆಧಾರದಲ್ಲಿ ಶಾಶ್ವತ ಸುಖವನ್ನು ಪ್ರದಾನಿಸಿ ಮನುಷ್ಯನನ್ನು ಮನುಷ್ಯನನ್ನಾಗಿಸುವ ಕಾರ್ಯವನ್ನು ಸಾಹಿತ್ಯ ಮಾಡುತ್ತದೆ. ಇಂಥ ಭಾರತೀಯ ವಿಚಾರವನ್ನು ಜಗತ್ತು ನಮ್ಮಿಂದ ನಿರೀಕ್ಷಿಸುತ್ತಿದೆ. ಅದನ್ನು ಸಾಹಿತ್ಯ ಕ್ಷೇತ್ರವು ತನ್ನ ಸಾಧನೆಯ ಮೂಲಕ ಸಾಧಿಸಬೇಕು. ಧರ್ಮವನ್ನು ಎಲ್ಲರೂ ಅನುಸರಿಸುವಂತೆ ವಾತಾವರಣವನ್ನು ಉಂಟುಮಾಡುವ ಕಾರ್ಯವು ಸಾಹಿತಿಗಳಿಂದಲೂ ಆಗಬೇಕಾಗಿದೆ.

ಕಾರ್ಯಕ್ರಮದಲ್ಲಿ ಮೂರು ಪುಸ್ತಕಗಳನ್ನು ಮೋಹನ್ ಭಾಗವತ್ ಅವರು ಬಿಡುಗಡೆ ಮಾಡಿದರು.

ಕಾರ್ಯಕ್ರಮದಲ್ಲಿ ಅಭಾಸಾಪ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶ್ರೀ ಋಷಿಕುಮಾರ ಮಿಶ್ರಾ, ಆರೆಸ್ಸೆಸ್ ಅಖಿಲ ಭಾರತ ಬೌದ್ಧಿಕ ಪ್ರಮುಖ್ ಶ್ರೀ ಸ್ವಾಂತ ರಂಜನ್ ಮುಂತಾದವರು ಉಪಸ್ಥಿತರಿದ್ದರು.

ABSP ಅಭಾಸಾಪ ರಾಷ್ಟ್ರೀಯ ಸಂಯುಕ್ತ ಪ್ರಧಾನ ಕಾರ್ಯದರ್ಶಿ ಶ್ರೀ ಪಪವನಪುತ್ರ ಬಾದಲ್ ಅವರು ಕಾರ್ಯಕ್ರಮ ನಿರೂಪಿಸಿದರು. ರಾಷ್ಟ್ರೀಯ ಅಧ್ಯಕ್ಷ ಡಾ. ಸುಶೀಲಚಂದ್ರ ತ್ರಿವೇದಿ ಅವರು ವಂದಿಸಿದರು. ಕರ್ನಾಟಕವೂ ಸೇರಿದಂತೆ ದೇಶದೆಲ್ಲೆಡೆಯಿಂದ ಬಂದ ಸಾವಿರಕ್ಕೂ ಅಧಿಕ ಸಾಹಿತಿಗಳು ಹಾಗೂ ಸಾಹಿತ್ಯಾಸಕ್ತರು ಈ ಸನ್ಮಾನ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Department of Cooperation ಹಿರಿಯ ಸಹಕಾರಿ ಧುರೀಣ ಕೊಪ್ಪದ ಎಸ್.ಎನ್.ವಿಶ್ವನಾಥ್ ಗೆ ‘ ಸಹಕಾರಿ ರತ್ನ’ ಪ್ರಶಸ್ತಿ.

Department of Cooperation ಕರ್ನಾಟಕ ಸರ್ಕಾರದ ಕರ್ನಾಟಕ ಸಹಕಾರ ಮಹಾಮಂಡಲ ದ...

Kasturba Girls Junior College ಮಕ್ಕಳ ಪ್ರತಿಭೆ ಅನಾವರಣಗೊಳಿಸುವ ಪ್ರತಿಭಾ ಕಾರಂಜಿಗೆ ಇನ್ನಷ್ಟು ಶಕ್ತಿ ತುಂಬೋಣ- ಶಾಸಕ ಚನ್ನಬಸಪ್ಪ

Kasturba Girls Junior College ವೈವಿಧ್ಯತೆಯನ್ನು ಹೊಂದಿರುವ ನಮ್ಮ ರಾಷ್ಟ್ರದ ಸಂಸ್ಕೃತಿಯನ್ನು...