Thursday, March 19, 2026
Thursday, March 19, 2026

Anandapura railway station ತಾಂತ್ರಿಕ ಪರಿಶೀಲನೆಗೆ ಕುಂಸಿ -ಆನಂದಪುರ‌ ಸ್ಟೇಷನ್ ರೈಲ್ವೆ ಕ್ರಾಸಿಂಗ್ ತಾತ್ಕಾಲಿಕ ಬಂದ್

Date:

Anandapura railway station ಕುಂಸಿ-ಆನಂದಪುರ ಸ್ಟೇಷನ್ ಮಧ್ಯೆ ಬರುವ ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್ ನಂ.80(ಕಿ.ಮೀ.96/200-300) ನ್ನು ತಾಂತ್ರಿಕವಾಗಿ ಪರಿಶೀಲನೆ ಮಾಡಬೇಕಾಗಿದೆ. ಸಾರ್ವಜನಿಕ ಹಿತದೃಷ್ಟಿಯಿಂದ ವಾಹನ ಸಂಚಾರಕ್ಕೆ ಅಡಚಣೆ ಆಗದಂತೆ ಡಿ.25 ರಿಂದ 26 ರವರೆಗೆ ಗೇಟ್ ಮುಚ್ಚಿ ಕೆಳಕಂಡಂತೆ ತಾತ್ಕಾಲಿಕವಾಗಿ ಪಯಾರ್ಯ ಮಾರ್ಗ ಕಲ್ಪಿಸಿ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್. ಆದೇಶಿಸಿದ್ದಾರೆ.

Anandapura railway station ರಿಪ್ಪನ್‍ಪೇಟೆಯಿಂದ ಆಯನೂರು ಮತ್ತು ಆಯನೂರಿನಿಂದ ರಿಪ್ಪನ್‍ಪೇಟೆಗೆ ಸಂಚರಿಸುವ ಲಘು ವಾಹನಗಳು ರೈಲ್ವೆ ಲೆವೆಲ್ ಕ್ರಾಸ್ ನಂ.79ರ ಮೂಲಕ ಆಯನೂರು, ಕುಂಸಿ, ಚೋರಡಿ, ಗುಂಡೂರು ಕ್ರಾಸ್, ಶೆಟ್ಟಿಕೆರೆ, ಸೂಡೂರು, ರಿಪ್ಪನ್‍ಪೇಟೆ ಹಾಗೂ ರಿಪ್ಪನ್‍ಪೇಟೆಯಿಂದ ಶಿವಮೊಗ್ಗಕ್ಕೆ ಬರುವ ವಾಹನಗಳು ರಿಪ್ಪನ್‍ಪೇಟೆ, ಸೂಡೂರು, ಶೆಟ್ಟಿಕೆರೆ, ಚೋರಡಿ, ಕುಂಸಿ, ಆಯನೂರು, ಶಿವಮೊಗ್ಗ ಮಾರ್ಗವಾಗಿ ಹಾಗೂ ಭಾರಿ ವಾಹನಗಳು ಅಯನೂರು, ಕುಂಸಿ, ಚೋರಡಿ, ಆನಂದಪುರ, ರಿಪ್ಪನ್‍ಪೇಟೆ ಮುಖಾಂತರ ಪರ್ಯಾಯ ಮಾರ್ಗದಲ್ಲಿ ವಾಹನಗಳು ಸಂಚರಿಸುವಂತೆ ಜಿಲ್ಲಾಧಿಕಾರಿಗಳು ಡಿ.14 ರ ಆದೇಶದಲ್ಲಿ ಸೂಚಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Channabasappa “ಸಹ್ಯಾದ್ರಿ ಉತ್ಸವ” ಕ್ಕೆ ಸರ್ಕಾರವು ಮತ್ತೆ ಚಾಲನೆ ನೀಡಲು ಒತ್ತಾಯಿಸುತ್ತೇನೆ- ಶಾಸಕ ಎಸ್.ಎನ್. ಚನ್ನಬಸಪ್ಪ

S.N. Channabasappa ಶಿವಮೊಗ್ಗ ಜಿಲ್ಲೆಯ ಸಮೃದ್ಧ ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಯನ್ನು...

Madhu Bangarappa ಎಸ್ಎಸ್ಎಲ್ ಸಿ ಪರೀಕ್ಷಾರ್ಥಿಗಳಿಗೆ ಶುಭ ಹಾರೈಸಿದ ಸಚಿವ ಮಧು ಬಂಗಾರಪ್ಪ

Madhu Bangarappa ರಾಜ್ಯಾದ್ಯಂತ ಇಂದಿನಿಂದ 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1...

Jawahar Navodaya Vidyalaya ಕುಂದಗಸವಿಯ ಎಂ.ಎನ್.ಅಪೂರ್ವ ನವೋದಯ ವಿದ್ಯಾಲಯಕ್ಕೆ ಆಯ್ಕೆ

Jawahar Navodaya Vidyalaya ಜವಾಹರ ನವೋದಯ ವಿದ್ಯಾಲಯ ನಡೆಸುವ ಪ್ರಸಕ್ತ ಸಾಲಿನ...