Kuvempu University ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ ಅಧಿಕೃತ ವೆಬ್ ಸೈಟ್ ಹ್ಯಾಕ್ ಆಗಿದೆ.
ಪ್ರೋ ಪ್ಯಾಲೆಸ್ಟೈನ್ ರಿಂದ ಕುವೆಂಪು ವಿವಿ ವೆಬ್ ಸೈಟ್ ಹ್ಯಾಕ್ ಆಗಿರುವುದು ತಿಳಿದುಬಂದಿದೆ.
ನಿನ್ನೆ ರಾತ್ರಿ ವೇಳೆಗೆ ವಿವಿ ವೆಬ್ಸೈಟ್ ನ್ನು ಹ್ಯಾಕರ್ಸ್ ಹ್ಯಾಕ್ ಮಾಡಿದ್ದಾರೆ.
ವೆಬ್ ಸೈಟ್ ಹ್ಯಾಕ್ ಮಾಡಿರುವ ಕಲೀಮಲ್ಯಾಂಗ್ ಬ್ಲಾಕ್ ಹ್ಯಾಟ್ ಟೀಂ ಎಂದು ತಿಳಿದು ಬಂದಿದೆ.
ಸೇವ್ ಪ್ಯಾಲೆಸ್ಟೈನ್- ಇಸ್ರೇಲ್ ಡಾಗ್ ಎಂದು ವೆಬ್ಸೈಟ್ ನಲ್ಲಿ ಉಲ್ಲೇಖವಾಗಿದೆ.
Kuvempu University ಹ್ಯಾಕ್ ಆದ ತಕ್ಷಣ ವೆಬ್ಸೈಟ್ ನ್ನು ವಿವಿ ಟೆಕ್ನಿಕಲ್ ಟೀಂ ಸ್ಥಗಿತಗೊಳಿಸಿದೆ.