Sri Basaveshwara Veershiva Samaj Seva Sangh ಲಿಂಗಾಯತ ಪರಂಪರೆಯ ಶ್ರೇಷ್ಠ ಆಚರಣೆಗಳಲ್ಲಿ ಗಣಪರ್ವ ಕೂಡ ಒಂದು. ಸ್ನೇಹ ಸೌಹಾರ್ದತೆಯ ಸಂಕೇತ ಹಾಗೂ ಪರಮಶಾಂತಿಯನ್ನು ಕೊಡುವ ಗಣಪರ್ವ ವಿಶೇಷ ಕಾರ್ಯಕ್ರಮ ಆಗಿದೆ ಎಂದು ಬಸವಕೇಂದ್ರದ ಶ್ರೀ ಡಾ. ಬಸವ ಮರುಳಸಿದ್ಧ ಸ್ವಾಮೀಜಿ ಅಭಿಪ್ರಾಯಪಟ್ಟರು.
ಬಸವಕೇಂದ್ರದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್, ಅಕ್ಕನ ಬಳಗ, ಕದಳಿ ಸಮಾಜ, ಶ್ರೀ ಬಸವೇಶ್ವರ ವೀರಶೈವ ಲಿಂಗಾಯತ ಸಮಾಜ ಸೇವಾ ಸಂಘ, ಸೃಷ್ಠಿ ಮಹಿಳಾ ಸಮಾಜ, ಕದಳಿ ವನಿತಾ ವೇದಿಕೆ ಹಾಗೂ ವಿವಿಧ ಸಂಘಟನೆಗಳ ವತಿಯಿಂದ ಆಯೋಜಿಸಿದ್ದ ಗಣಪರ್ವ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಎಲ್ಲ ಭಕ್ತರ ಮನೆಯಿಂದ ಮನೆಗಳಲ್ಲಿ ಸ್ವತಃ ತಾವೇ ತಯಾರಿ ಮಾಡಿದ ವಿವಿಧ ಬಗೆಯ ಅಡುಗೆಗಳನ್ನು ತಂದು ಎಲ್ಲರೂ ಒಟ್ಟಾಗಿ ಆಹಾರ ಸೇವಿಸುವುದರಲ್ಲಿ ಇರುವ ತೃಪ್ತಿಯು ಗಣಪರ್ವದಲ್ಲಿ ಸಿಗುತ್ತದೆ ಎಂದು ತಿಳಿಸಿದರು.
ನೂರಾರು ಭಕ್ತರು ಮನೆಗಳಲ್ಲಿ ಸಿದ್ಧಪಡಿಸಿದ ಪ್ರಸಾದವನ್ನು ಒಂದು ಕಡೆ ತಂದು ಸೇವನೆ ಮಾಡುವುದು, ವಿಶ್ವಗುರು ಬಸವಣ್ಣ ಅವರಿಗೆ ಹಾಲುಕುರ್ಕಿ ಸೋಮನಾಥ ಕವಿ ಬರೆದಿರುವ ಬಸವಲಿಂಗ ನೂರೊಂದು ನಾಮಗಳ ಮೂಲಕ ಅರ್ಚನೆ ಮಾಡಿ ನಂತರ ಪ್ರಸಾದ ವಿನಿಯೋಗ ಮಾಡಲಾಯಿತು.
ಒಂದು ತಿಂಗಳ ಅವಧಿಯಲ್ಲಿ ಚಿಂತನ ಕಾರ್ತಿಕ ನಡೆಸಿದ ಸೇವಾರ್ಥಿಗಳಿಗೆ ನೆನಪಿನ ಕಾಣಿಕೆ ನೀಡಿ ಆಶೀರ್ವದಿಸಿದರು.
ಹಾರನಹಳ್ಳಿ ಚೌಕಿ ಮಠದ ಶ್ರೀ ನೀಲಕಂಠ ಸ್ವಾಮೀಜಿ, ಸಿದ್ಧರಹಳ್ಳಿ ಪಾರಮಾರ್ಥಿಕ ಗವಿಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಸಿಂದಿಗೆರೆ ಕರಡಿಗವಿ ಮಠದ ಶ್ರೀ ಶಿವಶಂಕರ ಶಿವಯೋಗಿ ಸ್ವಾಮೀಜಿ, ಶಿಕಾರಿಪುರ ವಿರಕ್ತ ಮಠದ ಶ್ರೀ ಚನ್ನಬಸವ ಸ್ವಾಮೀಜಿ, ತಂಗನಹಳ್ಳಿ ಶ್ರೀ ಕಾಶಿ ಅನ್ನಪೂರ್ಣೇಶ್ವರಿ ಮಹಾಸಂಸ್ಥಾನ ಮಠದ ಶ್ರೀ ಬಸವ ಮಹಾಲಿಂಗ ಸ್ವಾಮೀಜಿ ಪಾಲ್ಗೊಂಡಿದ್ದರು.
Sri Basaveshwara Veershiva Samaj Seva Sangh ಬಸವಕೇಂದ್ರದ ಅಧ್ಯಕ್ಷ ಜಿ.ಬೆನಕಪ್ಪ, ಎಚ್.ಸಿ.ಯೋಗೀಶ್, ನಾಗರಾಜ ಕಂಕಾರಿ, ಚಂದ್ರಶೇಖರ ತಳಗಿನಹಾಳ, ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕ ಅಧ್ಯಕ್ಷ ಜಿ.ವಿಜಯ್‌ಕುಮಾರ್ ಹಾಗೂ ಬಸವ ಕೇಂದ್ರದ ಭಕ್ತರು ಉಪಸ್ಥಿತರಿದ್ದರು.