Mallikarjun Kharge ಐಎನ್ ಡಿಐಎ ಒಕ್ಕೂಟದ ಸಭೆ ನವದೆಹಲಿಯಲ್ಲಿ ನಡೆಯಿತು. ಇದುವರೆಗೂ 2024ರ ಲೋಕಸಭಾ ಚುನಾವಣೆ ಬಗ್ಗೆ ಸೀಟು ಹಂಚಿಕೆ ಸಮಸ್ಯೆ ಬಗ್ಗೆ ಹಿಂದೇಟು ಹೊಡೆಯುತ್ತಿದ್ದ ಮೈತ್ರಿಕೂಟ ಈಗ ಒಮ್ಮೆಲೇ ಸೇರಿದೆ.
ದೆಹಲಿ ಮುಖ್ಯಮಂತ್ರಿ ಕ್ರೇಜಿವಾಲ್ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸಭೆಯಲ್ಲಿ ಒಕ್ಕೂಟದ ಪ್ರಧಾನಿ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರಸ್ತಾಪ ಮಾಡಿದರು.
ಪ್ರಸ್ತುತ 141 ವಿರೋಧ ಪಕ್ಷಗಳ ಸಂಸದರ ಅಮಾನತಿನ ಬಗ್ಗೆ ಮಾತನಾಡಿದ ಖರ್ಗೆ ಅವರು, ವಿರೋಧ ಪಕ್ಷಗಳ ಸದಸ್ಯರನ್ನ ಅಮಾನತುಗೊಳಿಸಿ ಬಿಜೆಪಿ ಪಕ್ಷವು ಸರ್ಕಾರದ ತೀರ್ಮಾನಗಳನ್ನು ಚರ್ಚಿಸದೇ ಪಾಸು ಮಾಡಿಕೊಳ್ಳುವ ಹುನ್ನಾರ ಎಂದಿದ್ದಾರೆ.
Mallikarjun Kharge ಪ್ರಧಾನಿಗಳು ಮತ್ತು ಗೃಹ ಸಚಿವರು ಪ್ರವಾಸದಲ್ಲಿದ್ದಾರೆ. ಅವರು ವಾಪಸ್ ಬಂದು ಸಂಸದರ ಅಮಾನತ್ತನ್ನ ಹಿಂಪಡೆಯಲು ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿದರು.