National Investigation Agency ಕರ್ನಾಟಕ ಸೇರಿ ದೇಶದ ಹಲವು ಕಡೆ ದಾಳಿ ನಡೆಸಿದ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ದೊಡ್ಡ ಮಟ್ಟದ ಸ್ಫೋಟಕ್ಕೆ ಸಂಚು ರೂಪಿಸಿದ್ದ 8 ಮಂದಿ ಶಂಕಿತ ಉಗ್ರರನ್ನು ಬಳ್ಳಾರಿಯಲ್ಲಿ ಬಂಧಿಸಿದ್ದಾರೆ .
ಈ ಉಗ್ರರು ಕಾಲೇಜು ಸೇರಿ ಹಲವೆಡೆ ಐಇಡಿ ಬ್ಲಾಸ್ಟ್ ಮಾಡುವುದಕ್ಕೆ ಸಂಚು ರೂಪಿಸಿದ್ದರು ಎನ್ನಲಾಗುತ್ತಿದೆ. ಆರೋಪಿಗಳಿಂದ ಬಾಂಬ್ ತಯಾರಿಕೆಗೆ ಬಳಸುವ ಸಲ್ಫರ್, ಪೊಟಾಷಿಯಂ ನೈಟ್ರೇಟ್, ಗನ್ ಪೌಡರ್, ಶಸ್ತ್ರಾಸ್ತ್ರ ಹಣ ಮತ್ತು ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.
National Investigation Agency ಬೆಂಗಳೂರು, ಬಳ್ಳಾರಿ, ಪುಣೆ, ಅಮರಾವತಿ, ಜಮ್ ಶೆಡ್ ಪುರ, ಬೊಕಾರೊ ಹಾಗೂ ದೆಹಲಿಯಲ್ಲಿ ಶಂಕಿತರು ನೆಲೆ ಹೊಂದಿದ್ದರು. ಮೊಬೈಲ್ ಆಪ್ ಬಳಸಿಕೊಂಡು ಮಾತನಾಡುತ್ತಿದ್ದರು. ಆಪ್ ಮೂಲಕವೇ ಕರೆ ಪತ್ರಗಳು ವಿಡಿಯೋ ಆಡಿಯೋ ಗಳನ್ನು ಹಂಚಿಕೊಳ್ಳುತ್ತಿದ್ದರು ಎಂದು ಎನ್ಐಎ ಮೂಲಗಳು ತಿಳಿಸಿವೆ.
ಬಂಧಿತರಲ್ಲಿ ಬಳ್ಳಾರಿ ಆಪರೇಷನ್‌ನ ನೇತೃತ್ವ ವಹಿಸಿದ್ದ ಮೊಹಮ್ಮದ್ ಸುಲೈಮಾನ್ ಕೂಡ ಸೇರಿರುವುದಾಗಿ ಮೂಲಗಳು ತಿಳಿಸಿವೆ.