Sunday, December 14, 2025
Sunday, December 14, 2025

Shivamogga District Industrial Centre ಶಿವಮೊಗ್ಗದಲ್ಲಿ ಸೂಕ್ಷ್ಮ ,ಸಣ್ಣ & ಮಧ್ಯಮ ಉದ್ಯಮಗಳ ಬಗ್ಗೆ ಎಕ್ಸ್ ಪೊ ಕಾರ್ಯಕ್ರಮ

Date:

Shivamogga District Industrial Centre ಶಿವಮೊಗ್ಗ ನಗರದ ಸುವರ್ಣ ಸಂಸ್ಕೃತಿ ಭವನದಲ್ಲಿ ಡಿಸೆಂಬರ್ 21 ಹಾಗೂ 22ರಂದು ಎರಡು ದಿನ ಬೆಳಗ್ಗೆ 10 ರಿಂದ ಸಂಜೆ 5ರವರೆಗೆ “ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು ಕುರಿತಾದ ಎಕ್ಸ್‌ಪೋ ” ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಭಾರತ ಸರ್ಕಾರದ ಎಂಎಸ್‌ಎಂಇ ಸಚಿವಾಲಯ, ಶಿವಮೊಗ್ಗ ಜಿಲ್ಲಾ ಕೈಗಾರಿಕಾ ಕೇಂದ್ರ, ಮಾಚೇನಹಳ್ಳಿ ಕೈಗಾರಿಕಾ ಸಂಸ್ಥೆ, ಕಾಸಿಯಾ ಹಾಗೂ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗರಿಕಾ ಸಂಘದ ಸಹಯೋಗದಲ್ಲಿ ಎರಡು ದಿನಗಳ ಕಾಲ ಎಂಎಸ್‌ಎಂಇ ಎಕ್ಸ್‌ಪೋ ಆಯೋಜನೆಗೊಂಡಿದೆ.
ಸ್ಥಳೀಯ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಅನುಕೂಲಕ್ಕಾಗಿ ಪ್ರದರ್ಶನವು ಸಹಕಾರಿ ಆಗಲಿದೆ. ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳು ಹಾಗೂ ಮಧ್ಯಮ ಉದ್ಯಮಗಳಿಗೆ ಉಚಿತ ಮಳಿಗೆಗಳನ್ನು ಒದಗಿಸಲಾಗುತ್ತಿದೆ. ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ. ಪ್ರತಿಯೊಬ್ಬರಿಗೂ ಎಕ್ಸ್‌ಪೋ ವೀಕ್ಷಿಸಲು ಉಚಿತ ಪ್ರವೇಶ ಇರಲಿದೆ.

ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ವಲಯವು ಭಾರತೀಯ ಆರ್ಥಿಕತೆಯಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಿದ್ದು, ರಾಷ್ಟ್ರದ ಜಿಡಿಪಿ, ವಿದೇಶಿ ವಿನಿಮಯ ಗಳಿಕೆ ಮತ್ತು ಉತ್ಪಾದನಾ ವಲಯಕ್ಕೆ ಗಣನೀಯ ಕೊಡುಗೆ ನೀಡುತ್ತಿದೆ. ಬೃಹತ್ ಕೈಗಾರಿಕೆಗಳಿಗೆ ಪೂರಕ ಘಟಕವಾಗಿ ಕಾರ್ಯ ನಿರ್ವಹಿಸುತ್ತಿದೆ. ಎಲ್ಲ ಕ್ಷೇತ್ರಗಳಲ್ಲಿಯೂ ಎಂಎಸ್‌ಎಂಇ ವಿಸ್ತಾರ ಆಗುತ್ತಿದೆ.

Shivamogga District Industrial Centre ವ್ಯಾಪಾರ ಅಭಿವೃದ್ಧಿಗೆ ಮಾರುಕಟ್ಟೆಯು ಪ್ರಮುಖ ಸಾಧನ ಆಗಿದ್ದು, ಎಂಎಸ್‌ಎಂಇ ಬೆಳವಣಿಗೆ ಮತ್ತು ಉಳಿವಿಗೆ ನಿರ್ಣಾಯಕವಾಗಿದೆ. ಮಾಹಿತಿ ಕೊರತೆ, ಸಂಪನ್ಮೂಲಗಳ ಕೊರತೆ ಮತ್ತು ಅಸಂಘಟಿತ ಮಾರಾಟದ ವಿಧಾನಗಳಿಂದ ಎಂಎಸ್‌ಎಂಇ ವಲಯವು ಹೊಸ ಮಾರುಕಟ್ಟೆಗಳನ್ನು ಅನ್ವೇಷಿಸುವಲ್ಲಿ ಮತ್ತು ಅಸ್ತಿತ್ವದ ಮಾರುಕಟ್ಟೆಗಳನ್ನು ಉಳಿಸಿಕೊಳ್ಳುವಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದೆ.
ಭಾರತ ಸರ್ಕಾರದಿಂದ ಸಂಗ್ರಹಣೆ ಮತ್ತು ಮಾರುಕಟ್ಟೆ ಬೆಂಬಲ ( ಪಿಎಂಎಸ್ ) ಯೋಜನೆಯನ್ನು ಎಂಎಸ್‌ಎಂಇ ವಲಯದಲ್ಲಿ ಪರಿಚಯಿಸಲಾಗಿದೆ. ಉತ್ಪನ್ನಗಳು ಮತ್ತು ಮಾರುಕಟ್ಟೆಯ ಸೇವೆಯನ್ನು ಹೆಚ್ಚಿಸಲು ಹಾಗೂ ಸಾರ್ವಜನಿಕ ಸಂಗ್ರಹಣೆ ನೀತಿಯ ಉದ್ದೇಶಗಳನ್ನು ಸಾಧಿಸುವಲ್ಲಿ ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳು ಪಾತ್ರವು ಬಹಳ ಮುಖ್ಯವಾಗಿದೆ.

ಪಿಎಂಎಸ್ ಯೋಜನೆಯಡಿ ಸಾರ್ವಜನಿಕ ಸಂಗ್ರಹಣೆ ನೀತಿಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳು ಹಾಗೂ ಮಧ್ಯಮ ಉದ್ಯಮಗಳ ನಡುವಿನ ಮರುಕಟ್ಟೆ ಸಂಪರ್ಕವನ್ನು ಸುಲಭಗೊಳಿಸಲು ಮಾರಾಟಗಾರರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.
ಎರಡು ದಿನಗಳ ಎಕ್ಸ್‌ಪೋ ದಲ್ಲಿ ನೈಋತ್ಯ ರೈಲ್ವೇ, ಬಿಇಎಲ್, ಬಿಇಎಂಎಲ್, ಬ್ಯಾಂಕ್ಸ್, ಹಣಕಾಸು ಸಂಸ್ಥೆಗಳು, ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಉದ್ಯಮಗಳು ಭಾಗವಹಿಸಲಿವೆ.

ಎಂಎಸ್‌ಎಂಇ ಯೋಜನೆಗಳು, ದೊಡ್ಡ ಉದ್ಯಮಗಳು ಮತ್ತು ಸಾರ್ವಜನಿಕ ಸಂಗ್ರಹಣೆ ನೀತಿ ಸೇರಿದಂತೆ ವ್ಯಾಪಾರ ಅವಕಾಶಗಳ ಕುರಿತು ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...