Ayodhya SriRama Mandir ಜನವರಿ 22 ಅಯೋಧ್ಯಾ ರಾಮ ಮಂದಿರದಲ್ಲಿ ಶ್ರೀರಾಮ ವಿಗ್ರಹದ ಪ್ರಾಣ ಪ್ರತಿಷ್ಠಾಪನಾ ಉತ್ಸವ ನಡೆಯಲಿದೆ.
ಅದಕ್ಕಾಗಿ ಸಿದ್ಧತೆಗಳು ಭರದಿಂದ ಸಾಗಿವೆ.
ಮಂದಿರ ನಿರ್ಮಾಣ ಸಮಿತಿ ಅಧ್ಯಕ್ಷ ಶ್ರೀ ನೃಪೇಂದ್ರ ಮಿಶ್ರಾ ಅವರ ಪ್ರಕಾರ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ಆದ ನಂತರ ಜನವರಿ 24 ರಿಂದ ಭಕ್ತಾದಿಗಳ ದರ್ಶನಕ್ಕೆ ಮಂದಿರ ತೆರೆದಿರುತ್ತದೆ.
ಮುಂದಿನ ನಿರ್ಮಾಣದ ಸಲುವಾಗಿ ಈವರೆಗೆ 900 ಕೋಟಿ ರೂಪಾಯಿಗಳು ಖರ್ಚಾಗಿವೆ. ಪ್ರಧಾನಿ ಮೋದಿ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ ಯೋಗಿ, ಕೇಂದ್ರ ಹಣಕಾಸು ಮಂತ್ರಿ ನಿರ್ಮಲ ಸೀತಾರಾಮ, ಮುಂತಾದ ಗಣ್ಯರೊಂದಿಗೆ ಮಂದಿರ ನಿರ್ಮಾಣ ಕಾರ್ಯಗಳ ವೀಕ್ಷಣೆ ಮಾಡಿದ್ದಾರೆ.
ರಾಮ ಮಂದಿರದ ಪ್ರವೇಶ ದ್ವಾರ ಹೀಗಿದೆ. ಮಂದಿರ ಒಳಗೆ, ಹೊರಗೆ ಶಿಲ್ಪಕಲಾ ಸ್ತಂಭಗಳು, ಚಿತ್ತಾರಗಳು ಒಡ ಮೂಡುತ್ತಿದೆ.
ಪ್ರಾಣ ಪ್ರತಿಷ್ಠಾಪನ ಕಾರ್ಯಕ್ರಮಕ್ಕೆ ದೇಶದ ಗಣ್ಯರಿಗೆಲ್ಲ ಆಮಂತ್ರಣ ನೀಡಲಾಗಿದೆ. ರಾಜಕಾರಣಿಗಳು ಸಾಹಿತಿಗಳು ಕಲಾವಿದರು ಗಣ್ಯ ವ್ಯಕ್ತಿಗಳು ಇದರಲ್ಲಿ ಸೇರಿದ್ದಾರೆ.
Ayodhya SriRama Mandir ಆಮಂತ್ರಣ ಕಳಿಸಿದವರ ಪಟ್ಟಿಯಲ್ಲಿ ಅಮಿತಾಬ್ ಬಚ್ಚನ್ , ಸಂಜಯ್ ಲೀಲಾ ಬನ್ಸಾಲಿ, ಅಕ್ಷಯ್ ಕುಮಾರ್, ಅರುಣ್ ಗೋವಿಲ್, ಅನುಪಮ್ ಖೇರ್, ಮಾಧುರಿ ದೀಕ್ಷಿತ್ ರಜನಿಕಾಂತ್ ಚಿರಂಜೀವಿ ಹೀಗೆ ಕನ್ನಡದ ರಿಷಬ್ ಶೆಟ್ಟಿ ಸೇರಿದ್ದಾರೆ.
ಪ್ರಮುಖ ಸಂಗತಿ ಎಂದರೆ ಹಿರಿಯರಾದ ಎಲ್ ಕೆ ಅಡ್ವಾಣಿ , ಹಾಗೂ ಮುರುಳಿ ಮನೋಹರ್ ಜೋಶಿ ಅವರಿಗೆ ಟ್ರಸ್ಟ್ ತಾನೇ ಮುಂದಾಗಿ ಜನವರಿ 22ರಂದು ಅಯೋಧ್ಯೆಗೆ ಆಗಮಿಸುವುದು ಬೇಡ ಎಂದು ಮನವಿ ಮಾಡಿದೆಯಂತೆ.
ಈರ್ವರು 90 ವರ್ಷ ವಯಸ್ಸು ಮೀರಿದ್ದು ಇಳಿ ವಯಸ್ಸಿನ ಹಿನ್ನೆಲೆಯಲ್ಲಿ ಅಯೋಧ್ಯೆಗೆ ಬರುವುದು ಬೇಡ ಎಂಬ ಮನವಿಗೆ ಇವರು ಒಪ್ಪಿದ್ದಾರಂತೆ.
ಈ ಸಂಗತಿಯನ್ನು ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.