Kamala Nehru College ಶಿವಮೊಗ್ಗ ನಗರದ ಬಹುಮುಖಿ ವತಿಯಿಂದ 30ನೇ ಕಾರ್ಯಕ್ರಮವಾಗಿ, ಡಿ. 21ರಂದು ಕವಿ, ನಾಟಕಕಾರ ಡಾ. ಹೆಚ್. ಎಸ್. ಶಿವಪ್ರಕಾಶ್‌ರವರಿಂದ ಹೊಸ ತಲೆಮಾರಿಗೆ ರಂಗಭೂಮಿ ಕುರಿತ ವಿಶೇಷ ಉಪನ್ಯಾಸವನ್ನು ಏರ್ಪಡಿಸಲಾಗಿದೆ.
ಕಮಲಾ ನೆಹರೂ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ನಡೆಯಲಿರುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ರಂಗಕರ್ಮಿ, ವಿಶ್ರಾಂತ ಪ್ರಾಚಾರ್ಯ ಪ್ರೊ. ಎನ್. ಕೆ. ಹಾಲೇಶ್ ವಹಿಸಲಿದ್ದಾರೆ.
ಪರಿಚಯ
ಡಾ. ಹೆಚ್. ಎಸ್. ಶಿವಪ್ರಕಾಶ್‌ರವರು, ನಾಡಿನ ಬಹು ಮುಖ್ಯ ಕವಿಗಳು ಹಾಗೂ ನಾಟಕಕಾರರು. ದೆಹಲಿಯ ಜೆಎನ್‌ಯುನಲ್ಲಿ ಸ್ಕೂಲ್ ಆಫ್ ಆರ್ಟ್ಸ್ ಅಂಡ್ ಆಸ್ಥಟಿಕ್ಸ್ ವಿಭಾಗದಲ್ಲಿ ಪ್ರಾಧ್ಯಾಪಕರಾಗಿರುವ ಇವರು ಜರ್ಮನಿಯ ಟ್ಯಾಗೋರ್ ಕೇಂದ್ರದ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
Kamala Nehru College ಇವರ ಕವನಗಳು ಹಾಗೂ ನಾಟಕಗಳು ಇಂಗ್ಲಿಷ್, ಫ್ರೆಂಚ್, ಇಟಾಲಿಯನ್, ಸ್ಪಾ÷್ಯನಿಷ್, ಜರ್ಮನ್, ಫೋಲಿಷ್, ಹಿಂದಿ, ಮಲಯಾಳಂ ಮರಾಠಿ ತಮಿಳು ಹಾಗೂ ತೆಲುಗು ಭಾಷೆಗಳಿಗೆ ಭಾಷಾಂತರಗೊಂಡಿವೆ.
ಇವರ ಬಹು ಚಶ್ಚಿತ ನಾಟಕ “ಮಂಟೇಸ್ವಾಮಿ ಕಥಾಪುಸಂಗ” ಕನ್ನಡದ ಹಲವು ಸಂಶೋಧನೆಗಳಿಗೆ ದಾರಿ ಮಾಡಿಕೊಟ್ಟ ಒಂದು ವಿಶಿಷ್ಟ ಕೃತಿ. ಇವರ ಕೃತಿಗಳಲ್ಲಿ ಮಾರ್ಕ್ಸ್ ವಾದ, ಶೈವ, ಆಧ್ಯಾತ್ಮ ಹಾಗೂ ಕಾಶ್ಮೀರಿ ಜೈನ ಪರಂಪರೆಯ ಅಂಶಗಳನ್ನು ಕಾಣಬಹುದಾಗಿದೆ
ರಾಜ್ಯ ಸಾಹಿತ್ಯ ಅಕಾಡೆಮಿ ಪುಶಸ್ತಿ, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ರ್ಕಾಟಕ ರಾಜ್ಯೋತ್ಸವ ಪುಶಸ್ತಿಗಳು ಇವರಿಗೆ ಸಂದಿವೆ.