Tunga Tharanga Newspaper ಶಿವಮೊಗ್ಗ ತುಂಗಾ ತರಂಗ ದಿನಪತ್ರಿಕೆಯ ವಾರ್ಷಿಕ ವಿಶೇಷಾಂಕ ‘ತುಂಗೆಯ ವರುಣಾಂತರಂಗ’ವನ್ನು ಗೋಪಾಳದ ರಾಮಕೃಷ್ಣ ವಿದ್ಯಾನಿಕೇತನದ ಸಭಾಂಗಣಲ್ಲಿ ನಡೆದ ಸಮಾರಂಭದಲ್ಲಿ ‘ಮಾತೆ’ ಯರು ಬಿಡುಗಡೆ ಮಾಡಿದರು.
ಪ್ರತಿ ವರ್ಷದಂತೆ ನೀಡುವ ವಿಶೇಷಾಂಕದಲ್ಲಿ ವರುಣನನ್ನು ಸ್ವಾಗತಿಸಲು ತುಂಗೆಯ ವರುಣಾಂತರಂಗದ ಶೀರೋನಾಮೆ ನೀಡಿದ್ದು, ಹಿರಿಯ ವೈದ್ಯೆ ಡಾ.ವಾಣ ಕೋರಿ, ರಾಮಕೃಷ್ಣ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಶೋಭಾ ವೆಂಕಟರಮಣ, ತುಂಗಾ ತರಂಗ ದಿನಪತ್ರಿಕೆ ನಿಕಟಪೂರ್ವ ವರದಿಗಾರರಾಗಿದ್ದ ರಾಮಸ್ವಾಮಿ ಅವರ ಪತ್ನಿ ಶಾಂತಾರಾಮಸ್ವಾಮಿ, ವಿಶ್ವನಾಥ್ ಸಿಂಗ್ ಅವರ ಪತ್ನಿ ವೇದಾವತಿ ವಿ ಸಿಂಗ್ ಅವರು ವಿಶೇಷಾಂಕವನ್ನು ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ಡಾ.ವಾಣಿ ಅವರು ಮಾತನಾಡುತ್ತಾ, ವೈದ್ಯ ಲೋಕದಲ್ಲಿ ನಮ್ಮ ಸಾಧನೆ ಹಾಗೂ ಯಶಸ್ಸುಗಳು ಮಾದ್ಯಮರಂಗದಿಂದ ಪ್ರಚುರವಾಗಿ ಬೆಳೆಯಲು ಸಾಧ್ಯ. ಶಿವಮೊಗ್ಗ ಜಿಲ್ಲೆಯ ಪತ್ರಿಕೆಗಳು ಈ ವಿಷಯದಲ್ಲಿ ನಮ್ಮನ್ನು ಗುರುತಿಸಿ ಈ ಮಟ್ಟಕ್ಕೆ ಬೆಳೆಸಿದ್ದಾರೆ. ಇದರಲ್ಲಿ ತುಂಗಾ ತರಂಗ ಪತ್ರಿಕೆಯದು ವಿಶೇಷ ಹೆಚ್ಚುಗಾರಿಕೆ ಇದೆ ಎಂದು ಹೇಳಿದರು.
ನೇಪಾಳದಲ್ಲಿ ನಡೆದ ಭೂಕಂಪ ವಿಷಯದಲ್ಲಿ ವೈದ್ಯಕೀಯ ಸಹಾಯಕ್ಕೆ ಹೋಗಿದ್ದ ಸಂದರ್ಭಧಲ್ಲಿ ನಾವು ಬದುಕಿದ್ದೇವೆ ಎಂಬುದನ್ನು ದಿನನಿತ್ಯ ಸಿಗದ ನೆಟ್‌ವರ್ಕ್ನಲ್ಲೂ ನಮ್ಮನ್ನು ಹುಡುಕಿ ಮಾಹಿತಿ ನೀಡುತ್ತಿದ್ದ ಗಜೇಂದ್ರ ಸ್ವಾಮಿಯಂತಹ ಪತ್ರಕರ್ತರಿಂದ ನಮ್ಮ ಕುಟುಂಬಗಳು ನೆಮ್ಮದಿಯಾಗಿದ್ದವು ಎಂದು ಉದಾಹರಿಸಿದರು.
Tunga Tharanga Newspaper ಹಿರಿಯ ಪತ್ರಿಕಾ ಸಂಪಾದಕರಾದ ಎಸ್.ಚಂದ್ರಕಾಂತ್ ಅವರು ಮಾತನಾಡುತ್ತಾ, ನಾಲ್ಕು ಪುಟದಲ್ಲಿ ನೀಡುವ ಸುದ್ದಿಗಳನ್ನು ಸಂಕ್ಷಿಪ್ತವಾಗಿ ನೀಡುವಂತಹ ತುಂಗಾ ತರಂಗ ದಿನಪತ್ರಿಕೆ ಶ್ಲಾಘನೀಯ ಕೆಲಸ ಮಾಡುತ್ತಿದೆ. ವಿಶೇಷಾಂಕ ಹಾಗೂ ಕ್ಯಾಲೆಂಡರ್ ಮಾಧ್ಯಮಗಳ ಉಳುವಿಗೆ ಕ್ರೂಢೀಕರಣಕ್ಕೆ ಸಹಾಯ ಮಾಡುತ್ತದೆ. ಗಜೇಂದ್ರ ಸ್ವಾಮಿ ಬಳಗದ ಈ ಕಾರ್ಯ ಮೆಚ್ಚುಗೆಗೆ ಅರ್ಹವಾದದು ಎಂದರು.
ರಾಮಕೃಷ್ಣ ವಿದ್ಯಾನಿಕೇತನದ ಕಾರ್ಯದರ್ಶಿ ಶೋಭಾವೆಂಕರಮಣ ಮಾತನಾಡುತ್ತಾ, ಮಾದ್ಯಮಗಳು ನಮ್ಮ ಶಿಕ್ಷಣ ಸಂಸ್ಥೆಗಳನ್ನು ಬೆಳೆಸಲು ಕಾರಣಕರ್ತವಾಗಿವೆ. ಸಾಧಕ ಮಕ್ಕಳನ್ನು ಗುರುತಿಸಿ ಬೆಳೆಸುವ ಮಾಧ್ಯಮಗಳಿಂದ ಪ್ರತಿಭೆಗಳು ಇನ್ನಷ್ಟು ಬೆಳೆಯಲು ಕಾರಣವಾಗುತ್ತವೆ. ತುಂಗಾ ತರಂಗ ಪತ್ರಿಕೆ ನೀಡುವ ಸ್ಪಷ್ಟ ಹಾಗೂ ನೈಜ ಸುದ್ದಿಗಳು ಸತ್ಯಕ್ಕೆ ಹತ್ತಿರವಾಗಿರುತ್ತವೆ ಎಂದರು.
ಹಿರಿಯ ವೈದ್ಯ ಹೆಚ್.ಆರ್.ಡಿ. ಆಸ್ಪತ್ರೆಯ ಡಾ.ದೇವೇಂದ್ರಪ್ಪ, ಕಾಂಗ್ರೆಸ್ ಉಪಾಧ್ಯಕ್ಷ, ಮಾಜಿ ನಗರಸಭಾ ಅಧ್ಯಕ್ಷ ಎಲ್.ಸತ್ಯನಾರಾಯಣ್‌ರಾವ್ ಮಾತನಾಡಿ ತುಂಗಾ ತರಂಗ ಬಳಗದ ಕಾರ್ಯವನ್ನು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ವೈಷ್ಣವ ಸಮಾಜದ ರಾಜ್ಯಾಧ್ಯಕ್ಷ ಕೃಷ್ಣಸ್ವಾಮಿ, ನಾಗರತ್ನಮ್ಮ ಹಾಗೂ ಇತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ರಾಮಕೃಷ್ಣ ವಿದ್ಯಾನಿಕೇತನದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಪತ್ರಿಕೆಯ ಸಂಪಾದಕ ಎಸ್.ಕೆ.ಗಜೇಂದ್ರಸ್ವಾಮಿ ಸರ್ವರನ್ನು ಸ್ವಾಗತಿಸಿ ಪ್ರಾಸ್ತವಿಕವಾಗಿ ಮಾತನಾಡಿದರು.
ರಾಮಕೃಷ್ಣದ ಪ್ರಾಂಶುಪಾಲ ಗಜೇಂದ್ರನಾಥ್ ನಿರೂಪಿಸಿದರು. ಮುಖ್ಯ ಶಿಕ್ಷಕ ತಿರ್ಥೇಶ್ ವಂದಿಸಿದರು.