Saturday, December 6, 2025
Saturday, December 6, 2025

Canara Bank Rural Self-Employment Training Institute ಕೆನರಾ ಬ್ಯಾಂಕ್ ಸ್ವ ಉದ್ಯೋಗ ತರಬೇತಿ ಸಂಸ್ಥೆಯ ಬೋಧಕ ಹುದ್ದೆಗೆ ಅರ್ಜಿ ಆಹ್ವಾನ

Date:

Canara Bank Rural Self-Employment Training Institute ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ ಹೊನ್ನಾಳಿ ರಸ್ತೆ ಹೊಳಲೂರು ಶಿವಮೊಗ್ಗದಲ್ಲಿರುವ ಸಂಸ್ಥೆಯಲ್ಲಿ 03 ವರ್ಷ ಗುತ್ತಿಗೆ ಆಧಾರಿತವಾಗಿ 1 ಬೋಧಕ (ಪ್ಯಾಕಲ್ಟಿ) ಉದ್ಯೋಗಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ಅಭ್ಯರ್ಥಿಗಳು ಈ ಕೆಳಕಂಡ ಅರ್ಹತೆಗೆ ಅನುಗುಣವಾಗಿ ಈ ಕೆಳಕಂಡ ವಿಳಾಸಕ್ಕೆ ಭೇಟಿ ಮಾಡಿ ದಿನಾಂಕ : 10/01/2024 ರೊಳಗೆ ಅರ್ಜಿಯನ್ನು ಸಲ್ಲಿಸಬೇಕಾಗಿ ಈ ಮೂಲಕ ಕೋರಲಾಗಿದೆ.

ಅರ್ಹತೆ:1. ವಯಸ್ಸು : 22 ರಿಂದ 40 ವರ್ಷದೊಳಗಿನವರು (ಅನುಭವಹೊಂದಿದವರಿಗೆ 05 ವರ್ಷದ ಸಡಿಲಿಕೆಯ ಆದ್ಯತೆ ನೀಡಲಾಗುವುದು)

  1. ವಿದ್ಯಾಭ್ಯಾಸ : ಸರ್ಕಾರದಿಂದ ಮಾನ್ಯತೆ ಪಡೆದ ಮನೋವಿಜ್ಞಾನ / ಪತ್ರಿಕೋದ್ಯಮ / ಗ್ರಾಮೀಣ ಅಭಿವೃದ್ಧಿ / ಸಮಾಜಶಾಸ್ತ್ರದಲ್ಲಿ MA
    M.com / MSW
    ಅಥವಾ BBM/ BA / B.SC / B. COM ಹೆಚ್ಚುವರಿಯಾಗಿ B.ED / M.ED ವಿದ್ಯಾರ್ಹತೆಯನ್ನು ಹೋದಿರಬೇಕು.
  2. ಸಾಮಾನ್ಯ ಜ್ಞಾನ : ಇಂಗ್ಲೀಷ್ ಮತ್ತು ಕನ್ನಡದಲ್ಲಿ ಸುಲಲಿತವಾಗಿ ಓದಲು ಮತ್ತು ಬರೆಯಲು ಬರುವಂತವರಾಗಿರಬೇಕು ಹಾಗೂ ಹಿಂದಿ ಗೊತ್ತಿರುವವರಿಗೆ ಹೆಚ್ಚಿನ ಅರ್ಹತೆಯಾಗಿ ಪರಿಗಣಿಸಲಾಗುವುದು.
  3. ಸಂವಹನ ಕಲೆ : ಉತ್ತಮ ಸಂವಹನ ಕಲೆ ಹೊಂದಿದವರಿಗೆ ಆಧ್ಯತೆ ನೀಡಲಾಗುವುದು.
  4. ಕಂಪ್ಯೂಟರ್ ಜ್ಞಾನ : ಎಂ.ಎಸ್.ಆಫೀಸ್, ಇಂಟರ್‌ನೆಟ್ ತಿಳಿದಂತವರಾಗಿರಬೇಕು ಹಾಗೂ ಕನ್ನಡ ಮತ್ತು ಇಂಗ್ಲೀಷ್ ಟೈಪ್ ಮಾಡಲು ಬರಬೇಕು ಹಾಗೂ ಸಾಮಾನ್ಯ ಲೆಕ್ಕಚಾರ ಜ್ಞಾನ ತಿಳಿದಂತವರಾಗಿರಬೇಕು.

Canara Bank Rural Self-Employment Training Institute ಅರ್ಜಿಸಲ್ಲಿಸಲು ಆಸಕ್ತರಿರುವವರು ಸ್ವ-ವಿವರದ ಮಾಹಿತಿಯೊಂದಿಗೆ ಆಧಾರ್/ವಿಳಾಸದ ದಾಖಲೆ, ವಿದ್ಯಾಭ್ಯಾಸ ಮತ್ತು ಶೈಕ್ಷಣಿಕ ವಿದ್ಯಾರ್ಹತೆಯ ಅಂಕಪಟ್ಟಿಗಳ ಮತ್ತು ಅನುಭವದ ದಾಖಲೆಪತ್ರಗಳ ನಕಲು ಪ್ರತಿಯನ್ನು ಲಗತ್ತಿಸುವುದು.

ನೇರ ಸಂದರ್ಶನಕ್ಕೆ ಬರುವಾಗ ಮೂಲಪ್ರತಿಗಳನ್ನು ತರುವುದು.
ಉದ್ಯೋಗದ ಆಯ್ಕೆ : ನೇರ ಸಂದರ್ಶನ ಮತ್ತು ಲಿಖಿತ ಪರೀಕ್ಷೆ ನಡೆಸಲಾಗುವುದು ಎಂದು ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ
ಹೊಳಲೂರಿನ ನಿರ್ದೇಶಕರು ತಿಳಿಸಿದ್ದಾರೆ.

ಶಿವಮೊಗ್ಗ ದೂರವಾಣಿ – 9481955721,
9743429595 ಅನ್ನು ಸಂಪರ್ಕಿಸಬಹುದು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...