Kannada Rajyotsava ಗೋಪಾಲಗೌಡ ಬಡಾವಣೆಯ ಕ್ರೀಡಾ ಮೈದಾನದಲ್ಲಿ 68ನೇ ಕನ್ನಡ ರಾಜ್ಯೋತ್ಸವವನ್ನು ಗೋಪಾಲಗೌಡ ಬಡಾವಣೆ ನಿವಾಸಿಗಳ ಸಂಘ ಮತ್ತು ಶರಧಿ ಮಹಿಳಾ ಸಂಘ, ಗೋಪಾಲಗೌಡ ಬಡಾವಣೆ, ಶಿವಮೊಗ್ಗ ಇವರ ಸಂಯುಕ್ತ ಆಶ್ರಯದಲ್ಲಿ ವಿಜ್ರಂಭಣೆಯಿಂದ ಆಚರಿಸಲಾಯಿತು.
ಈ ಸಮಾರಂಭದಲ್ಲಿ ಕಮಲಾ ನೆಹರು ಕಾಲೇಜಿನ ನಿವೃತ್ತ ಪ್ರಾಧ್ಯಾಪಕರಾದ ಪ್ರೋ. ಕಿರಣ್ ದೇಸಾಯಿ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಕನ್ನಡ ಜಗ್ತತಿನ ಅತ್ಯಂತ ಪ್ರಾಚೀನ ಮತ್ತು ವೈಜ್ಞಾನಿಕ ಭಾಷೆಯಾಗಿರುತ್ತದೆ ಎಂದು, ಕನ್ನಡದಲ್ಲಿ ಮಾತನಾಡಿದಂತೆ ಬರೆಯುತ್ತೇವೆಂದು, ಬರೆದಂತೆಯೇ ಓದುತ್ತೇವೆಂದು, ಹೀಗಾಗಿ ಕನ್ನಡ ವೈಜ್ಞಾನಿಕ ಭಾಷೆಯಾಗಿರುತ್ತದೆಂದು, ಕನ್ನಡ ನುಡಿಯು ಸಂಸ್ಕೃತಿ, ಸಾಹಿತ್ಯ, ಕಲೆಗಳ ಸಂಗಮವೆಂದರು.
ಈ ಕಾರಣಕ್ಕಾಗಿಯೇ ಜಗತ್ತಿನ ಎಲ್ಲಿಯೂ ಕಾಣಸಿಗದ ಶಿಲ್ಪಕಲೆಗಳು ಕನ್ನಡ ನಾಡಿನಲ್ಲಿ ಅನಾವರಣಗೊಂಡಿವೆ. ಇಂದಿನ ಯುವ ಪೀಳಿಗೆಯವರು ಕನ್ನಡ ನಾಡಿನ ಇತಿಹಾಸ, ಸಾಹಿತ್ಯ, ಕಲೆಗಳ ಪರಂಪರೆಯ ಅರಿವನ್ನು ಮೂಡಿಸಿಕೊಳ್ಳಬೇಕು. ಇತಿಹಾಸ ತಿಳಿದುಕೊಳ್ಳದಿದ್ದರೆ ಇತಿಹಾಸ ನಿರ್ಮಿಸಲು ಸಾಧ್ಯವಿಲ್ಲವೆಂದು ತಿಳಿಸಿದರು.
ರಾಜ್ಯೋತ್ಸವವು ಒಂದು ದಿನದ ಉತ್ಸವವಾಗದೆ ಪ್ರತಿ ಮನೆ ಜನರ ಹೃದಯಾಂತರಾಳದಲ್ಲಿ ಸದಾ ಕನ್ನಡ ಭಾಷೆಯೂ ಉಸಿರಾಗಬೇಕೆಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ನಿವಾಸಿಗಳ ಸಂಘದ ಉಪಾಧ್ಯಕ್ಷರಾದ ಶ್ರೀ ಎಸ್.ಸಿ. ರಾಮಚಂದ್ರ ಇವರು ಮಾತನಾಡುತ್ತಾ, ಜಗತ್ತಿನಲ್ಲಿ ಸುಮಾರು 7000 ಭಾಷೆಗಳಿದ್ದು, ಇದೀಗ ಕನ್ನಡವನ್ನು ಒಳಗೊಂಡಂತೆ ಕೇವಲ 3000 ಭಾಷೆಗಳು ಉಳಿದಿದ್ದು, ಒಂದು ಭಾಷೆಯ ಅಳಿವು ಎಂದರೆ ಕೇವಲ ಭಾಷೆಯ ಅಳಿವಲ್ಲ ಬದಲಾಗಿ ಆ ಭಾಷೆಯಲ್ಲಿ ಬೆಸೆದುಕೊಂಡಿರುವ ಸಂಸ್ಕೃತಿ, ನಾಗರಿಕತೆಗಳ ಅಳಿವಾಗಿರುತ್ತದೆಂದರು.
Kannada Rajyotsava ಇಂಗ್ಲೀಷ್ ಭಾಷೆಯ ವ್ಯಾಮೋಹದಿಂದಾಗಿ ಕನ್ನಡ ಓದುವ ಮತ್ತು ಬರೆಯುವವರ ಸಂಖ್ಯೆ ಕಡಿಮೆಯಾಗುತ್ತಿದ್ದು, ಈ ಭಾಷೆಯನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ದೈನಂದಿನ ಆದ್ಯ ಕರ್ತವ್ಯವಾಗಬೇಕೆಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಭಾರತೀಯ ವಾಯುಸೇನೆ ನಿವೃತ್ತ ಸಾರ್ಜೇಂಟ್ ನಟರಾಜ್ ಅವರನ್ನು ಸನ್ಮಾನಿಸಲಾಗಿದ್ದು, ಸನ್ಮಾನ ಸ್ವೀಕರಿಸಿದ ಸಾರ್ಜೇಂಟ್ ನಟರಾಜ್ ಅವರು ಮಾತನಾಡುತ್ತಾ, ರಾಷ್ಟçದ ಅಖಂಡತೆ ಮತ್ತು ಭದ್ರತೆಗಾಗಿ ಸೇವೆ ಸಲ್ಲಿಸುವುದು ಅತ್ಯಂತ ಪುಣ್ಯದ ಕೆಲಸವೆಂದು, ಪ್ರತಿಯೊಬ್ಬರು ರಾಷ್ಟ್ರ ಭಕ್ತಿಯ ಜೊತೆಗೆ ರಾಷ್ಟçದ ಅಖಂಡತೆ ಮತ್ತು ಭದ್ರತೆಯೊಂದಿಗೆ ಯಾವತ್ತೂ ರಾಜೀಮಾಡಿಕೊಳ್ಳದೆ ರಾಷ್ಟç ಸೇವೆಯಲ್ಲಿಯೇ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದರು.
ಅದರಲ್ಲಿಯೂ ಯುವ ಜನತೆಯು ಸೇನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಮೂಲಕ ರಾಷ್ಟç ಭಕ್ತಿಯನ್ನು ಮೈಗೂಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಗೋಪಾಲಗೌಡ ಬಡಾವಣೆ ನಿವಾಸಿಗಳ ಸಂಘದ ಅಧ್ಯಕ್ಷರಾದ ಶ್ರೀ ಕೆ.ಹೆಚ್. ಮಹೇಶ್ ಇವರು ವಹಿಸಿದ್ದು, ಸಮಾರಂಭದಲ್ಲಿ ಶ್ರೀಮತಿ ಸುಗಂಧ ರಾಣಿ ಹೆಚ್., ಇವರು ಕೂಡ ಉಪಸ್ಥಿತರಿದ್ದರು.
ಇವರೊಂದಿಗೆ ಸಂಘದ ಕಾರ್ಯದರ್ಶಿಯಾದ ಶಶಿಧರ್, ಮಂಜುನಾಥ್, ಅಶೋಕ್ ಕುಮಾರ್, ನಿಕಟಪಪೂರ್ವ ಅಧ್ಯಕ್ಷರಾದ ಹೆಚ್.ಎಂ. ಸತ್ಯನಾರಾಯಣ ಮತ್ತು ನೂರಾರು ಸಂಖ್ಯೆಯಲ್ಲಿ ಬಡಾವಣೆಯ ನಾಗರೀಕರು ಭಾಗವಹಿಸಿ, ಸಮಾರಂಭ ಯಶಸ್ವಿಯಾಗಲು ರೊ. ವಿಜಯ್ ಕುಮಾರ್ ಜಿ., ಇವರು ಮಾರ್ಗದರ್ಶನ ನೀಡಿದರು.
ಕೊನೆಯಲ್ಲಿ ಭದ್ರಾವತಿ ವಾಸು ಮತ್ತು ತಂಡದವರಿಂದ ಕನ್ನಡ ಭಾವಗೀತೆಗಳು ಮತ್ತು ಸುಗಮ ಸಂಗೀತ ರಸಮಂಜರಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.