Sri Ramakrishna Residential Vidyalaya ಸಂಸ್ಕಾರವಂತ ಶಿಕ್ಷಣದಿಂದ ಮಾತ್ರ ಭವ್ಯ ಭಾರತದ ಕನಸು ನನಸಾಗಿಸಲು ಸಾಧ್ಯ ಎಂದು ತಾಳಗುಪ್ಪದ ಕೂಡಲಿಮಠದ ವಿದ್ವಾನ್ ಸಿದ್ದವೀರ ಮಹಾಸ್ವಾಮಿಗಳು ಹೇಳಿದರು.
ಅವರು ಸಾಗರದ ಎಂ.ಎಲ್.ಹಳ್ಳಿಯಲ್ಲಿರುವ ಶ್ರೀ ರಾಮಕೃಷ್ಣ ವಸತಿ ವಿದ್ಯಾಲಯದ ಆವರಣದಲ್ಲಿ ಶ್ರಿಮಾತೆ ಶಾರದಾದೇವಿ ಜಯಂತಿ ಹಾಗೂ ಶಾಲಾ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಆಶಿರ್ವಚನ ನೀಡಿದರು.
ಗುರುಕುಲ ಮಾದರಿಯ ಶಿಕ್ಷಣ ನೀಡುತ್ತಿರುವ ರಾಮಕೃಷ್ನ ವಸತಿ ಶಾಲೆಯ ವಾತಾವರಣವೇ ಹಸಿರೀಕರಣದಿಂದ ಆವರಿಸಿದೆ.ಜೊತೆಗೆ ಮಕ್ಕಳಿಗೆ ಸಂಸ್ಕೃತಿ,ಸಾಹಿತ್ಯ,ಕ್ರೀಡೆ ಹಾಗೂ ಸಂಸ್ಕಾರಯುತ ಗುಣಮಟ್ಟದ ಶಿಕ್ಷಣದ ಮೂಲಕ ಸಮಾಜಕ್ಕೆ ಗೌರವಯುತ ವ್ಯಕ್ತಿತ್ವದ ವಿದ್ಯಾರ್ಥಿಗಳನ್ನು ಸೃಷ್ಟಿಸಿ ಕೊಡುಗೆಯಾಗಿ ನೀಡುತ್ತಿರುವ ಕಾರಣ ಇಲ್ಲಿನ ವಿದ್ಯಾರ್ಥಿಗಳು ಗುರು ಹಿರಿಯರನ್ನು ಗೌರವಿಸುವ ಮೂಲಕ ಪೋಷಕರನ್ನು ವೃದ್ಧಾಶ್ರಮದತ್ತ ಕಳುಹಿಸದೇ ಜೀವಿತಾವಧಿಯ ಕೊನೆಯವರೆಗೂ ಶ್ರದ್ದಾ ಭಕ್ತಿಯಿಂದ ಬಾಂಧವ್ಯದಿಂದ ಪೋಷಿಸುತ್ತಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಮಾನವೀಯತೆಯ ಮೌಲ್ಯವನ್ನು ವೃದ್ದಿಸುತ್ತಿರುವ ಗುಣಾತ್ಮಕ ಶಿಕ್ಷಣ ನೀಡುತ್ತಿರುವ ರಾಮಕೃಷ್ಣ ವಸತಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳ ಸೌಭಾಗ್ಯದ ಜೊತೆಗೆ ಪೋಷಕರ ಪೂರ್ವಜನ್ಮದ ಪುಣ್ಯದ ಫಲ ಎಂದು ಇಲ್ಲಿನ ಶಿಕ್ಷಕ ವೃಂದ ಹಾಗೂ ಶಾಲೆಯ ಮುಖ್ಯಸ್ಥರಾದ ದೇವರಾಜ್ ಅವರ ಪರಿಶ್ರಮವನ್ನು ಶ್ಲಾಘಿಸಿದರು.
ಸಾಗರದ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಸ್ವಾಮಿ ಜ್ಞಾನಾನಂದ ಮಹಾರಾಜ್ ಮಾತನಾಡಿ ನವಭಾರತದ ನಿರ್ಮಾಣಕ್ಕೆ ಸಂಸ್ಕೃತಿ ಸಂಸ್ಕಾರವಂತ ವಿದ್ಯಾರ್ಥಿಗಳನ್ನು ಕೊಡುಗೆಯಾಗಿ ನೀಡುವಂತಹ ಶಿಕ್ಷಣ ನೀಡುತ್ತಿರುವ ರಾಮಕೃಷ್ಣ ವಸತಿ ಶಾಲೆಯಿಂದ ದೇಶಕ್ಕೆ ಉತ್ತಮ ಯುವ ಶಕ್ತಿಯ ಕೊಡುಗೆ ದೊರೆಯುತ್ತಿದೆ ಎಂದರು.
ಹಣ ಮತ್ತು ಅಧಿಕಾರ ದೊರೆಯುವಂತಹ ಶಿಕ್ಷಣ ಎಲ್ಲಾ ಕಡೆ ದೊರೆಯುತ್ತದೆ.ಆರ್ಥಿಕ ದಾಹದ ಹಿನ್ನೆಲೆಯಲ್ಲಿ ಮಾನವಿಯತೆಯನ್ನೇ ಮರೆಮಾಚಿ ಪೋಷಕರನ್ನು ಪೋಷಿಸುವ ಬದಲಿಗೆ ಹಣ ಕೊಟ್ಟರೇ ವೃದ್ಧಾಶ್ರಮದವರು ನೋಡಿಕೊಳ್ಳುತ್ತಾರೆ ಎಂಬ ತೀರ್ಮಾನಕ್ಕೆ ಬರುವಂತಹ ಅಮಾನವೀಯ ಹಾಗೂ ಬಾಂದವ್ಯರಹಿತ ವರ್ತನೆಗಳ ಯುವಕರ ಸಂಖ್ಯೆ ಹೆಚ್ಚುತ್ತಿರುವ ಕುರಿತು ಆತಂಕ ವ್ಯಕ್ತಪಡಿಸಿದರು.
ಬಲೀಷ್ಠ ಭಾರತದ ನಿರ್ಮಾಣಕ್ಕೆ ರಾಜಕೀಯ,ಆರ್ಥಿಕ ಮತ್ತು ಸೈನಿಕ ಶಕ್ತಿಗಿಂತ ಸಂಸ್ಕಾರಯುತ ಉತ್ತಮ ವ್ಯಕ್ತಿತ್ವದ ಯುವ ಸಮೂಹದ ಅಗತ್ಯ ಹೆಚ್ಚಿದೆ ಎಂದು ವಿದ್ಯಾರ್ಥಿಗಳಿಗೆ ಮತ್ತು ಪೋಷಕರುಗಳಿಗೆ ಕಿವಿಮಾತು ಹೇಳಿದರು.
ಶಿವಮೊಗ್ಗದ ದೊಡ್ಡಮ್ಮ ಮತ್ತು ಜಲದುರ್ಗಮ್ಮ ದೇವಿ ಉಪಾಸಕರಾದ ಸಿದ್ದಪ್ಪಾಜಿ ಮಾತನಾಡಿ ಶಾರದೆಯ ಕೃಪೆಯಿಂದ ಸುಶೀಕ್ಷಿತರಾಗಿ ಜ್ಞಾನದಿಂದ ವಿವೇಕಾಯುತ ಜೀವನ ನಿರ್ವಹಣೆಯ ಮೂಲಕವೇ ಜಗತ್ತನ್ನು ಸೆಳೆಯಲು ಸಾಧ್ಯ ಎಂದರು.
ವಿದ್ಯಾರ್ಥಿಗಳಿಗೆ ಏಕಾಗ್ರತೆ ಮುಖ್ಯವಾಗಿದ್ದು,ನಿರಂತರ ಪರಿಶ್ರಮದ ಮೂಲಕ ಶ್ರದ್ದೆಯಿಂದ ಜ್ಞಾನವಂತರಾದಲ್ಲಿ ಯಾವುದೇ ಆಯುದವಿಲ್ಲದೇ ಸನ್ಮಾರ್ಗದಲ್ಲಿ ಜಗತ್ತನ್ನೇ ಗೆಲ್ಲಲು ಸಾಧ್ಯ ಎನ್ನುವ ಮೂಲಕ ವಿದ್ಯಾರ್ಥಿಗಳಿಗೆ ಪಠ್ಯ ಮತ್ತು ಪಠೇತರ ಚಟುವಟಿಕೆಗಳ ಮೂಲಕ ಆದ್ಯಾತ್ಮದ ತಳಹದಿಯಲ್ಲಿ ಗುಣಾತ್ಮಕ ಮಾದರಿ ಜೀವನ ನಿರ್ವಹಿಸುವಂತಹ ವ್ಯಕ್ತಿತ್ವ ವಿಕಸನಕ್ಕೆ ಪ್ರಯತ್ನಿಸುವಂತೆ ಕರೆ ನೀಡಿದರು.
ಶ್ರೀ ರಾಮಕೃಷ್ಣ ವಸತಿ ವಿದ್ಯಾಲಯದ ಹಳೆಯ ವಿದ್ಯಾರ್ಥಿ ವೈದ್ಯಕೀಯ ಪ್ರಾಧ್ಯಾಪಕರಾದ ಡಾ.ಶರದ್ ಕುಮಾರ್ ಸನ್ಮಾನ ಸ್ವೀಕರಿಸಿ ಮಾತನಾಡಿ ರಾಮಕೃಷ್ಣ ವಸತಿ ಶಾಲೆಯಲ್ಲಿ ಪ್ರೌಢಶಾಲಾ ಹಂತದಲ್ಲಿ ನನಗೆ ದೊರೆತಿರುವ ಗುಣಾತ್ಮಕ ಹಾಗೂ ಸಂಸ್ಕಾರಯುತ ಶಿಕ್ಷಣ ನನ್ನ ಉನ್ನತ ಶಿಕ್ಷಣ ಹಾಗೂ ವೈದ್ಯಕೀಯ ಪ್ರಾಧ್ಯಪಕನಾಗುವವರೆಗೂ ಅತ್ಯಂತ ಪರಿಣಾಮಕಾರಿ ಅಡಿಪಾಯದಂತೆ ಸಹಕಾರಿಯಾಗಿದೆ ಎಂದು ಸ್ಮರಿಸಿದರು.
Sri Ramakrishna Residential Vidyalaya ಶ್ರೀ ರಾಮಕೃಷ್ಣ ಶಾಲೆಯ ಸಂಸ್ಥಾಪಕರಾದ ದೇವರಾಜ್ ಮಾತನಾಡಿ ವಿದ್ಯಾರ್ಥಿಗಳು ಮತ್ತು ಪೋಷಕರು ಬೇರೆಯವರ ಕೊಳಕನ್ನು ಮತ್ತು ಕೆಟ್ಟದನ್ನು ನೋಡದೇ ಕೇವಲ ಒಳಿತನ್ನು ನೋಡಿ ಒಳ್ಳೆಯವರಾಗುವತ್ತ ಕೇಂದ್ರೀಕೃತವಾಗಬೇಕು ಎಂದು ಕಿವಿಮಾತು ಹೇಳಿದರು.
ಜಗತ್ತಿನಲ್ಲಿ ಹೊಟ್ಟೆಪಾಡಿನ ವಿದ್ಯೆ ಬೇಡ.ಆದರೇ ಆತ್ಮಾನಂದ ನೀಡುವ ಉತ್ತಮ ಜೀವನಕ್ಕೆ ಮಾರ್ಗದರ್ಶನ ನೀಡುವ ಹಾಗೂ ಬೌದ್ಧಿಕ ಮಟ್ಟ ಹೆಚ್ಚಿಸುವ ವ್ಯಕ್ತಿತ್ವ ವಿಕಸನ ಹೊಂದುವಂತಹ ಮಾನವೀಯ ಮೌಲ್ಯಗಳ ಜಾಗೃತಿಗೊಳಿಸುವ ದಿಕ್ಕಿನಲ್ಲಿ ಉತ್ತಮ ಸಂಸ್ಕಾರ ಸಂಸ್ಕೃತಿಯ ತಳಹದಿಯ ಶಿಕ್ಷಣಕ್ಕಾಗಿ ಕಳೆದ 28 ವರ್ಷಗಳಿಂದ ರಾಮಕೃಷ್ಣ ವಿದ್ಯಾ ಸಂಸ್ಥೆ ಟೊಂಕಕಟ್ಟಿ ಶ್ರಮಿಸುತ್ತಿದೆ ಎಂದರು.
ಶಿಕ್ಷಣ ಸಂಸ್ಥೆಯ ನಿರ್ವಹಣೆ ಸುಲಭದ ತುತ್ತಲ್ಲ.ಸವಾಲುಗಳಿವೆ.ಈ ಎಲ್ಲಾ ಸಮಸ್ಯೆಗಳ ನಡುವೆಯೂ ಪೋಷಕರ ಸಹಕಾರವಿದ್ದಲ್ಲಿ ವಿದ್ಯಾರ್ಥಿಗಳಲ್ಲಿ ಕಲಿಯುವ ಆಸಕ್ತಿಯನ್ನು ಕೆರಳಿಸಿ ಸತತ ಶ್ರಮದಿಂದ ಕಲಿಸುವ ಮೂಲಕ ಪೋಷಕರ ನಿರೀಕ್ಷೆಗೂ ಮೀರಿದ ಉತ್ತಮ ವಿದ್ಯಾರ್ಥಿಗಳನ್ನಾಗಿ ಪರಿವರ್ತಿಸುವ ಮೂಲಕ ಸಮಾಜಮುಖಿ ಯುವ ಸಮೂಹವನ್ನು ಸೃಷ್ಟಿಸುವದೇ ನಮ್ಮ ವಿದ್ಯಾ ಸಂಸ್ಥೆಯ ತಪಸ್ಸು ಎಂದು ಘೋಷಿಸಿದರು.
ವೇದಿಕೆಯಲ್ಲಿ ಶಿವಮೊಗ್ಗ ರಾಮಕೃಷ್ಣ ವಿದ್ಯಾ ಸಂಸ್ಥೆಯ ಮುಖ್ಯಸ್ಥೆ ಶೋಭಾವೆಂಕಟರಮಣ,ಮಾತಾ ಭಾಗಿರಥಮ್ಮ,ಮುಖ್ಯ ಶಿಕ್ಷಕಿ ಸವಿತಾದೇವರಾಜ್,ಶಿಕ್ಷಕ ಮನಸೂರ್ ಮೊದಲಾದವರು ಉಪಸ್ಥಿತರಿದ್ದರು