B.Y.Raghavendra ಶಿವಮೊಗ್ಗದಲ್ಲಿ ಸಂಸದ ಬಿ.ವೈ. ರಾಘವೇಂದ್ರ ಅವರು ಮಾತನಾಡಿ, ಅಧಿವೇಶನದ ಸಮಯದಲ್ಲಿ ಶಿವಮೊಗ್ಗ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಬಹಳ ಚರ್ಚೆ ಆಗಿದೆ. ಪ್ರಧಾನಿಗಳ ಸಂಕಲ್ಪ ಇದೆ ಎಂದಿದ್ದಾರೆ.
ಬರುವಂತಹ 25 ವರ್ಷಗಳಲ್ಲಿ ಭಾರತ ಅಭಿವೃದ್ಧಿ ಹೊಂದಿದ ದೇಶ ಆಗಲಿದೆ. ಆ ನಿಟ್ಟಿನಲ್ಲಿ ಸಾಕಷ್ಟು ಅಭಿವೃದ್ಧಿಗಳು ನಡೆಯುತ್ತಿದೆ.
ಪ್ರಧಾನಿಗಳ ಅಪೇಕ್ಷೆಯಂತೆ ಅಭಿವೃದ್ಧಿ ಕಾರ್ಯಗಳು ಆಗುತ್ತಿದೆ ಎಂದರು.
ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿಗಳು ಆಗುತ್ತಿದೆ.
ನೀರಾವರಿ ಯೋಜನೆಗೆ 2 ಸಾವಿರ ಕೋಟಿ ರೂ. ಹಣ ಬಂದಿದೆ.ಜಿಲ್ಲೆಯಲ್ಲಿ ವಿಮಾನ ಹಾರಾಟ ಶುರುವಾಗಿದೆ ಎಂದರು.
ಆದರೆ ಹವಾಮಾನ ಬದಲಾವಣೆಯಿಂದ ವಿಮಾನಗಳ ಹಾರಾಟದಲ್ಲಿ ಸಮಸ್ಯೆ ಆಗಿದೆ.ಸರಿಯಾದ ಸಮಯಕ್ಕೆ ವಿಮಾನಗಳು ಬರುತ್ತಿಲ್ಲ.ಹಾಗಾಗಿ ಸಮಸ್ಯೆ ಬಗೆಹರಿಸಲು ಅಧಿಕಾರಿಗಳ ಜೊತೆ ಸಭೆ ನಡೆದಿದೆ.ಆದಷ್ಟು ಬೇಗ ಈ ಎಲ್ಲಾ ಸಮಸ್ಯೆಗಳು ಬಗೆಹರಿಯಲಿದೆ ಎಂದರು.
B.Y.Raghavendra ರಾತ್ರಿ ವೇಳೆ ವಿಮಾನ ಹಾರಾಟಕ್ಕೂ ಎಲ್ಲಾ ತಯಾರಿ ನಡೆಯುತ್ತಿದೆ.ವಿವಿಧ ಅಭಿವೃದ್ಧಿ ಕಾಮಗಾರಿಯ ಉದ್ಘಾಟನೆಗೆ ನಿತಿನ್ ಗಡ್ಕರಿ ಅವರಿಗೆ ಆಹ್ವಾನ ನೀಡಿದ್ದೇನೆ.ಜನವರಿ ಮೂರನೇ ವಾರದಲ್ಲಿ ಸಮಯ ಕೊಡುತ್ತೇವೆ ಅಂದಿದ್ದಾರೆ.
ನೆಟ್ವರ್ಕ್ ಸಮಸ್ಯೆ ಬಗೆಹರಿಸಲು ಸಚಿವರಿಗೆ ಭೇಟಿ ಮಾಡಿದ್ದೇನೆ.
ಏಪ್ರಿಲ್ ಒಳಗಡೆ ನೆಟ್ವರ್ಕ್ ಟವರ್ ಗಳ ಲೋಕಾರ್ಪಣೆ ಆಗಲಿದೆ.ಬರುವಂತಹ ದಿನಗಳಲ್ಲಿ ಶಿವಮೊಗ್ಗ ಮತ್ತಷ್ಟು ಅಭಿವೃದ್ಧಿ ಆಗಲಿದೆ ಎಂದರು.
ರೈಲ್ವೆ ನಿಲ್ದಾಣಕ್ಕೆ ಕೆಳದಿ ಶಿವಪ್ಪನಾಯಕರ ಹೆಸರು ನಾಮಕರಣ ಆಗಲಿದೆ ಎಂದು ತಿಳಿಸಿದರು.