Aam Aadmi Party ಬರದಛಾಯೆಯಲ್ಲಿ ಮುಳುಗಿರುವ ರೈತರಿಗೆ ಕಾಡುಪ್ರಾಣ ಗಳ ಹಾವಳಿ ಯಿಂದ ಸಾಕುಪ್ರಾಣಿಗಳು ಬಲಿಯಾಗಿ ಜೀವನ ದುಸ್ತರವಾಗುತ್ತಿದ್ದು ಸರ್ಕಾರ ಅಥವಾ ಸಂಬಂಧಿಸಿದ ಇಲಾಖೆ ಸೂಕ್ತ ಕ್ರಮ ವಹಿಸದಿದ್ದಲ್ಲಿ ಅರಣ್ಯ ಇಲಾಖೆ ಎದುರು ಧರಣ ನಡೆಸಲಾಗುವುದು ಎಂದು ಎಎಪಿ ಮಾಧ್ಯಮ ಪ್ರತಿ ನಿಧಿ ಡಾ|| ಕೆ.ಸುಂದರಗೌಡ ಎಚ್ಚರಿಸಿದ್ದಾರೆ.
ಈ ಸಂಬಂಧ ಹೇಳಿಕೆಯಲ್ಲಿ ತಿಳಿಸಿರುವ ಅವರು ಕಡೂರು ತಾಲ್ಲೂಕಿನ ಮಲ್ಲೇಶ್ವರ ಗ್ರಾಮದ ತೋಟದಲ್ಲಿದ್ದ ಕುರಿಮಂದೆ ಮೇಲೆ ಚಿರತೆ ದಾಳಿ ನಡೆಸಿದ ಪರಿಣಾಮ 14 ಮೇಕೆ ಮತ್ತು 17 ಕುರಿಮರಿಗಳು ಸಾವಪ್ಪಿದ ಹಿನ್ನೆಲೆಯಲ್ಲಿ ಬಯಲುಸೀಮೆ ರೈತರು ಕಂಗಾಲಾಗಿದ್ದಾರೆ ಎಂದು ಹೇಳಿದ್ದಾರೆ.
ಬಯಲುಸೀಮೆ ಪ್ರದೇಶದಲ್ಲಿ ಚಿರತೆ ದಾಳಿ ನಡೆಸಿ ಸಾಕುಪ್ರಾಣಿಗಳ ಬಲಿತೆಗೆದುಕೊಳ್ಳುತ್ತಿರುವುದು ರೈತರಲ್ಲಿ ಆತಂಕ ಒಂದೆಡೆಯಾದರೆ, ಇನ್ನೊಂದೆಡೆ ಕುಟುಂಬದ ನಿರ್ವಹಣೆಗೆ ಬಹಳಷ್ಟು ಕಷ್ಟವಾಗಿದೆ.
ಈಗಾಗಲೇ ಚಿರತೆ ಬಲಿ ತೆಗೆದುಕೊಂಡಿರುವ 31 ಕುರಿಗಳು ಬೆಲೆ ೪ ಲಕ್ಷ ಬೆಲೆಬಾಳಲಿರುವ ಹಿನ್ನೆಲೆಯಲ್ಲಿ ಇನ್ಸೂರೆನ್ಸ್ ಕಂಪನಿ ಅಥವಾ ಸರ್ಕಾರ ರೈತರಿಗೆ ಪರಿಹಾರ ಒದಗಿಸಿಕೊಡಬೇಕು ಎಂದಿದ್ದಾರೆ.
Aam Aadmi Party ಅರಣ್ಯ ಇಲಾಖೆಯವರು ವನ್ಯಜೀವಿಗಳು ಗ್ರಾಮಗಳಲ್ಲಿ ಅಡ್ಡಾಡದಂತೆ ಸುರಕ್ಷಿತ ಜಾಗದಲ್ಲಿ ಬಿಡುವ ವ್ಯವಸ್ಥೆ ಕೈಗೊಳ್ಳಬೇಕು. ಈ ಸಂಬಂಧ ಇಲಾಖೆ ವಿಫಲತೆ ತೋರಿಸಿದರೆ ರೈತರು ಬದುಕು ನಾಶವಾಗುವ ಜೊತೆಗೆ ಇಡೀ ಗ್ರಾಮವನ್ನೇ ತ್ಯಜಿಸಿ ಬೇರೆಡೆ ವಲಸೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಹೇಳಿದ್ದಾರೆ.
ಆ ನಿಟ್ಟಿನಲ್ಲಿ ಅರಣ್ಯ ಇಲಾಖೆ ಹಾಗೂ ಸಂಬಂಧಿಸಿದ ಅಧಿಕಾರಿಗಳು ವನ್ಯಜೀವಿ ಪ್ರಾಣ ಗಳಿಗೆ ಸಮರ್ಪಕ ಪ್ರದೇಶ ಗುರುತಿಸಿ ತಂಗುವ ವ್ಯವಸ್ಥೆ ಕಲ್ಪಿಸಿಕೊಡಬೇಕು. ಸರ್ಕಾರ ಕುರಿನಷ್ಟದಿಂದ ಕಂಗಾಲಾಗಿರುವ ರೈತರಿಗೆ ಪರಿಹಾರ ಒದಗಿಸಬೇಕು. ಮುಂಬರುವ ದಿನಗಳಲ್ಲಿ ಪ್ರಾಣ -ಸಾಕುಪ್ರಾಣ ಗಳ ಸಂಘರ್ಷ ಏರ್ಪಡದಂತೆ ಕ್ರಮ ವಹಿ ಸದಿದ್ದಲ್ಲಿ ಅರಣ್ಯ ಇಲಾಖೆ ಎದುರು ಧರಣ ಕುಳಿತು ಅಧಿಕಾರಿಗಳನ್ನು ಬಹಿಷ್ಕರಿಸಲಾಗುವುದು ಎಂದು ಎಚ್ಚರಿಸಿದ್ದಾರೆ.