Shivamogga Police ಶಿವಮೊಗ್ಗ ನಗರದ ಪೂರ್ವ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಬಿ.ಹೆಚ್.ರಸ್ತೆಯಲ್ಲಿ ಹೊಳೆಬಸ್ ಸ್ಟಾಪ್‍ನಿಂದ ಅಮೀರ್ ಅಹಮದ್ ಸರ್ಕಲ್‍ವರೆಗೆ ಸುಗಮ ಸಂಚಾರ ದೃಷ್ಟಿಯಿಂದ ದ್ವಿಚಕ್ರ ಮತ್ತು ಕಾರ್‍ಗಳಿಗೆ ಕೆಳಕಂಡಂತೆ ನಿಲುಗಡೆ ಮತ್ತು ನಿಷೇಧ ಮಾಡಿ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್ ಆದೇಶಿಸಿದ್ದಾರೆ.
ವಾಹನ ನಿಲುಗಡೆ ನಿಷೇಧ:
- ಅಮೀರ್ ಅಹಮದ್ ಸರ್ಕಲ್‍ನಿಂದ ಮಹಾನಗರಪಾಲಿಕೆ ಕಾಂಪ್ಲೆಕ್ಸ್‍ವರೆಗೆ(ಕುಚಲಕ್ಕಿ ಕೇರಿ ಕ್ರಾಸ್ ಎದುರು) ಎಡಬದಿಯಲ್ಲಿ ಎಲ್ಲಾ ವಿಧದ ವಾಹನಗಳ ನಿಲುಗಡೆ ನಿಷೇಧ.
- ಅಮೀರ್ ಅಹಮದ್ ಸರ್ಕಲ್‍ನಿಂದ ಶಿವಪ್ಪನಾಯಕ ಸರ್ಕಲ್ ಬಿಎಸ್‍ಕೆ ಪ್ರೆಸ್ಟೀಜಿಯಸ್ ಬಟ್ಟೆ ಅಂಗಡಿಯ ಬಲಬದಿಯ್ಲಿ ಎಲ್ಲಾ ವಿಧದ ವಾಹನಗಳ ನಿಲುಗಡೆ ನಿಷೇಧ.
- ಸಾವರ್ಕರ್ ನಗರ ಕ್ರಾಸ್(ಡಯಟ್ ಕಾಲೇಜ್ ಕ್ರಾಸ್) ನಿಂದ ಯೂನಿಲೆಟ್ ಮಳಿಗೆವರೆಗೆ ಬಲಬದಿ ಎಲ್ಲಾ ವಿಧದ ವಾಹನಗಳು ನಿಲುಗಡೆ ನಿಷೇಧ.
- ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜ್ ಗೇಟ್‍ನಿಂದ ಮೆಡ್‍ಪ್ಲಸ್ ಮೆಡಿಕಲ್ ಶಾಪ್‍ವರೆಗೆ ಎಡಬದಿಯಲ್ಲಿ ಎಲ್ಲಾ ವಿಧದ ವಾಹನಗಳ ನಿಲುಗಡೆ ನಿಷೇಧ
- ಲೂರ್ದುನಗರ ಕ್ರಾಸ್‍ನಿಂದ ಸೇಕ್ರೆಡ್ ಹಾರ್ಟ್ ಚರ್ಚ್ 2ನೇ ಗೇಟ್‍ವರೆಗೆ ಎಡಬದಿಯಲ್ಲಿ ಎಲ್ಲ ವಿಧದ ವಾಹನಗಳ ನಿಲುಗಡೆ ನಿಷೇಧ.
- ಕರ್ನಾಟಕ ಸಂಘ ಸಿಗ್ನಲ್ ಸರ್ಕಲ್‍ನ 50 ಮೀ ಸುತ್ತ ಎಲ್ಲಾ ವಿಧದ ವಾಹನಗಳ ನಿಲುಗಡೆ ನಿಷೇಧ.
ದ್ವಿಚಕ್ರ ವಾಹನ ನಿಲುಗಡೆ:
- Shivamogga Police ಕೋಕಿಲಾ ರೇಡಿಯೋ ಕ್ರಾಸ್‍ನಿಂದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜ್ ಗೇಟ್‍ವರೆಗೆ ಎಡಬದಿ ದ್ವಿಚಕ್ರ ವಾಹನಗಳ ನಿಲುಗಡೆ
- ಸಂಗಮ್ ಟೈಲರ್ ಶಾಪ್‍ನಿಂದ ಬಿಎಸ್‍ಕೆ ಪ್ರೆಸ್ಟೀಜಿಯಸ್ ಬಟ್ಟೆ ಅಂಗಡಿಯವರೆಗೆ ಬಲಬದಿ ದ್ವಿಚಕ್ರ ವಾಹನಗಳ ನಿಲುಗಡೆ
- ಮೆಡ್‍ಪ್ಲಸ್ ಮೆಡಿಕಲ್ ಶಾಪ್‍ನಿಂದ ಅಯ್ಯ ಆರ್ಕೇಡ್(ಲೂರ್ದುನಗರ ಕ್ರಾಸ್)ವರೆಗೆ ಎಡಬದಿ ದ್ವಿಚಕ್ರಮ ವಾಹನಗಳ ನಿಲುಗಡೆ
- ಸೇಕ್ರೆಡ್ ಹಾರ್ಟ್ ಚರ್ಚಿನಿಂದ ಕರ್ನಾಟಕ ಪಬ್ಲಿಕ್ ಶಾಲೆ ಗೇಟ್‍ವೆಗೆ ಎಡಬದಿ ದ್ವಿಚಕ್ರ ವಾಹನಗಳ ನಿಲುಗಡೆ.
- ಮೀನಾಕ್ಷಿ ಭವನ ಕ್ರಾಸ್‍ನಿಂದ ಗಿರಿಯಾಸ್ ಶೋ ರೂಂವರೆಗೆ ಎಡಬದಿ ದ್ವಿಚಕ್ರಮ ವಾಹನಗಳ ನಿಲುಗಡೆ.
- ಅರವಿಂದ್ ಮೋಟಾರ್‍ನಿಂದ ಗಣೇಶಪ್ರಸಾದ್ ಹೋಟೆಲ್ ಕ್ರಾಸ್‍ವರೆಗೆ ಬಲಬದಿ ದ್ವಿಚಕ್ರಮ ವಾಹನಗಳ ನಿಲುಗಡೆ.
- ಹರ್ಷ ಕ್ರಾಸ್‍ನಿಂದ ಕಾಸರವಳ್ಳಿ ಕಾಂಪ್ಲೆಕ್ಸ್‍ವರೆಗೆ ಬಲಬದಿ ದ್ವಿಚಕ್ರ ವಾಹನಗಳ ನಿಲುಗಡೆ
ನಾಲ್ಕು ಚಕ್ರ ವಾಹನಗಳ ನಿಲುಗಡೆ :
- ಮಹಾನಗರಪಾಲಿಕೆ ಕಾಂಪ್ಲೆಕ್ಸ್ ಪ್ರಾರಂಭದಿಂದ(ಕುಚಲಕ್ಕಿ ಕೇರಿ ಎದುರಿನಿಂದ) ಕೋಕಿಲಾ ರೇಡಿಯೋ ಅಂಗಡಿಯವರೆಗೆ ಎಡಬದಿಯಲ್ಲಿ ಕಾರ್ ಪಾರ್ಕಿಂಗ್.
- ಸುಗಮ್ ಟೈಲರ್ ಶಾಪ್‍ನಿಂದ ಡಯಟ್ ಕಾಲೇಜ್ ಕ್ರಾಸ್‍ವರೆಗೆ ಬಲಬದಿಯಲ್ಲಿ ಕಾರ್ ಪಾರ್ಕಿಂಗ್
- ಗಿರಿಯಾಸ್ ಶೋ ರೂಂನಿಂದ ಮಾತಾ ಮಾಂಗಲ್ಯ ಮಂದಿರ ಗೇಟ್‍ವರೆಗೆ ಎಡಬದಿಯಲ್ಲಿ ಕಾರ್ ಪಾರ್ಕಿಂಗ್.
- ನಂದನ್ ಟವರ್ ಎದುರಿನಿಂದ ಪೆನ್ಶನ್ ಮೊಹಲ್ಲಾ 2ನೇ ಕ್ರಾಸ್ ವರೆಗೆ ಬಲಬದಿಯಲ್ಲಿ ಕಾರ್ ಪಾರ್ಕಿಂಗ್.
- ಪೆನ್ಶನ್ ಮೊಹಲ್ಲಾ 1ನೇ ಕ್ರಾಸ್‍ನಿಂದ ಡಿಹೆಚ್‍ಓ ಆಫೀಸ್‍ವರೆಗೆ ಬಲಬದಿಯಲ್ಲಿ ಕಾರ್ ಪಾರ್ಕಿಂಗ್.
- ಕೃಷ್ಣ ಕೆಫೆ ಕ್ರಾಸ್‍ನಿಂದ ದೀಪಕ್ ಪೆಟ್ರೋಲ್ ಬಂಕ್ ವೆಗೆ ಬಲಬದಿಯಲ್ಲಿ ಕಾರ್ ಪಾರ್ಕಿಂಗ್.