DC Chikkamagaluru ಪ್ರತಿನಿತ್ಯ ದಿನಗೂಲಿ ಕೆಲಸ ಮಾಡುವ ಅಮಾಯಕ ಹಾಗೂ ಮುಗ್ದ ಕಾರ್ಮಿಕರಿಗೆ ಸಾಲ ಕೊಡಿಸುವುದಾಗಿ ಹೇಳಿ ವಂಚನೆವೆಸಗಿರುವ ಸೊಸೈಟಿ ವಿರುದ್ಧ ಕಾನೂನು ಕ್ರಮ ಕೈಗೊಂಡು ಕ್ರಿಮಿನಲ್ ಮೊಕದ್ದಮೆ ಹೂಡಬೇಕು ಎಂದು ನೊಂದ ಫಲಾನುಭವಿಗಳು ಜಿಲ್ಲಾಡಳಿತವನ್ನು ಒತ್ತಾಯಿಸಿದರು.
ಈ ಸಂಬಂಧ ಅಪರ ಜಿಲ್ಲಾಧಿಕಾರಿ ನಾರಾಯಣಕನಕರಡ್ಡಿ ಅವರಿಗೆ ಶುಕ್ರವಾರ ಫಲಾನುಭವಿಗಳು ಬಿಎಸ್ಪಿ ನೇತೃತ್ವದಲ್ಲಿ ಮನವಿ ಸಲ್ಲಿಸಿ ಜ್ಯೋತಿನಗರ ಸಮೀಪದ ಯುವ ಕರುನಾಡು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಮ್ಯಾನೇಜರ್ ಹಾಗೂ ಕಾರ್ಯದರ್ಶಿ ಫಲಾನುಭವಿಗಳಿಗೆ 50 ಸಾವಿರ ಸಹಾಯಧನ ಕೊಡಿಸುವುದಾಗಿ ಹೇಳಿ ಹಣ ಪಡೆದುಕೊಂಡು ವಂಚಿಸಿದ್ದಾರೆ ಎಂದು ಆರೋಪಿಸಿದರು.
ಬಳಿಕ ಮಾತನಾಡಿದ ಬಿಎಸ್ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಪ್ರತಿ ಕಾರ್ಮಿಕರು 15250 ರೂ.ಗಳಂತೆ ಷೇರು ಇರಿಸಿದರೆ ಮುಂಬರುವ ದಿನ ಸಬ್ಸಿಡಿಯಲ್ಲಿ ಒಬ್ಬರಿಗೆ 50 ಸಾವಿರ ಸಹಾಯಧನ ಕೊಡಿಸುವುದಾಗಿ ಹೇಳಿ ಸೊಸೈಟಿ ಮ್ಯಾನೇಜರ್ ಮತ್ತು ಕಾರ್ಯದರ್ಶಿ ಬಹುದೊಡ್ಡ ವಂಚನೆವೆಸಗಿದ್ದು ಈ ಸುಳಿಯಲ್ಲಿ ಸುಮಾರು 17 ಮಂದಿ ಹಣ ಕಟ್ಟಿ ಸಹಾಯಧನವಿಲ್ಲದೇ ಹಾಗೂ ಅಸಲಿಲ್ಲದೇ ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ ಎಂದರು.
ಈ ಸಮಸ್ಯೆಯಲ್ಲಿ ಸಿಲುಕಿ ಸುಮಾರು ಮೂರು ತಿಂಗಳ ಬಳಿಕವು ಕಚೇರಿಗೆ ತೆರಳಿ ವಿಚಾರಿಸಿದರೆ ಅವಾಚ್ಯ ಶಬ್ದಗಳಿಂದ ನಿಂದಿಸುವುದು, ಪೋನ್ ಮೂಲಕ ಸಂಪರ್ಕಿಸಿದರೆ ಹಣದ ಬಗ್ಗೆ ಚಕಾರವೆತ್ತದೇ ಜಾತಿ ಬಗ್ಗೆ ಹಿಯ್ಯಾ ಳಿಸುವ ರೀತಿಯಲ್ಲಿ ಮಾತನಾಡಲಾಗುತ್ತಿದೆ ಎಂದು ದೂರಿದರು.
DC Chikkamagaluru ಹಾಗಾಗಿ ಕರುನಾಡ ಸೊಸೈಟಿಯಲ್ಲಿ ಪ್ರಸ್ತುತ ಷೇರಿನಲ್ಲಿ ಹಣ ಇರಿಸಿದವರೆಲ್ಲಾ ಕೂಲಿ ಕಾರ್ಮಿಕರಾಗಿದ್ದು ಕಟ್ಟಿದ ಹಣವನ್ನು ವಾಪಸ್ ಕೊಡಿಸುವ ಮೂಲಕ ಮುಂದೆ ಯಾವುದೇ ಅಮಾಯಕರಿಗೆ ಅನ್ಯಾಯವಾಗದಂತೆ ಸಂಸ್ಥೆಯನ್ನು ಮುಚ್ಚಿಸಿ ಮ್ಯಾನೇಜರ್ ಹಾಗೂ ಕಾರ್ಯದರ್ಶಿ ವಿರುದ್ಧ ಕ್ರಿಮಿನಲ್ ಮೊಖದ್ದಮೆ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಕೆ.ಬಿ.ಸುಧಾ, ಲೋಕಸಭಾ ಕ್ಷೇತ್ರದ ಸಂಯೋಜಕ ಗಂಗಾ ಧರ್, ಫಲಾನುಭವಿಗಳಾದ ಜಗದೀಶ್, ರಾಮಸ್ವಾಮಿ, ಉಮೇಶ್, ಕಿರಣ್‌ಕುಮಾರ್, ರೇಖಾ, ಶಾಂತಮ್ಮ, ಮಾಲತೇಶ್, ಹನುಮಮ್ಮ, ರಾಜಮ್ಮ ಮತ್ತಿತರರು ಹಾಜರಿದ್ದರು.