Devaraja Arasu ದೇಶದ ಗಡಿ ರಕ್ಷಣೆಯಲ್ಲಿ ಸೈನಿಕರ ಪ್ರಾಮುಖ್ಯತೆ, ದೇಶದೊಳಗೆ ಕಾನೂನು,ಶಿಸ್ತು,ಶಾಂತಿ ಪಾಲನೆಯಲ್ಲಿ ಪೊಲೀಸರ ಪಾತ್ರ ಹೇಗೋ ಹಾಗೆಯೇ ಸಾಮಾಜಿಕ ಸುವ್ಯವಸ್ಥೆಯ ಸಾಕಾರದಲ್ಲಿ ಗೃಹರಕ್ಷಕರ ಸೇವೆಯೂ ಪೂರಕವಾಗಿದೆ ಎಂದು ಹಿರಿಯ ಪತ್ರಕರ್ತ ಎಚ್ ಬಿ ಮಂಜುನಾಥ ಅಭಿಪ್ರಾಯ ಪಟ್ಟರು.
ದಾವಣಗೆರೆ ನಗರದ ದೇವರಾಜ ಅರಸು ಬಡಾವಣೆಯಲ್ಲಿರುವ ಜಿಲ್ಲಾ ಗೃಹರಕ್ಷಕ ದಳದ ಕಚೇರಿಯ ಆವರಣದಲ್ಲಿ ಗ್ರಹ ರಕ್ಷಕರ ಜಿಲ್ಲಾ ಮಟ್ಟದ ಕ್ರೀಡಾಕೂಟದ ಸಮಾರೋಪ ಹಾಗೂ ಬಹುಮಾನ ವಿತರಣಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ ಕ್ರೀಡೆ ಸಾಹಿತ್ಯ ಕಲೆ ಸಂಗೀತ ಇವುಗಳಿಗೆ ದೇಶ ದೇಶಗಳ ನಡುವಿನ ವೈರತ್ವ ಮರೆಸಿ ಬಾಂಧವ್ಯ ಬೆಸೆಯುವ ಸಾಮರ್ಥ್ಯವಿದೆ, ಕ್ರೀಡಾಕೂಟಗಳಲ್ಲಿ ಭಾಗವಹಿಸುವುದರಿಂದ ದೈಹಿಕ ಸಾಮರ್ಥ್ಯದ ಪ್ರಕಟಣೆಯೊಂದಿಗೆ ಮಾನಸಿಕ ಸ್ವಾಸ್ತ್ಯವೂ ನ ಲಭ್ಯವಾಗುತ್ತದೆ ಎಂದರಲ್ಲದೇ 1940 ರಲ್ಲಿ ಇಂಗ್ಲೆಂಡ್ ಮತ್ತು ಜರ್ಮನಿ ನಡುವೆ ಸಮರ ನಡೆಯುತ್ತಿದ್ದಾಗ ಬ್ರಿಟನ್ ಸೈನ್ಯದ ಸಹಕಾರಕ್ಕೆ ಸ್ವಯಂ ಪ್ರೇರಣೆಯಿಂದ ಸಾರ್ವಜನಿಕರು ಬರುವಂತೆ ಸೇನೆಯ ಕಾರ್ಯದರ್ಶಿ ಆಂತೋನಿ ಈಡನ್ ಕರೆ ಕೊಟ್ಟಿದ್ದು ‘ಲೋಕಲ್ ಡಿಫೆನ್ಸ್ ವಾಲೆಂಟೈರ್ಸ್’ ಹುಟ್ಟಿಗೆ ಕಾರಣವಾಗಿದ್ದು ಮುಂದೆ ಇದೇ ‘ಹೋಂ ಗಾರ್ಡ್’ ಎಂಬ ಹೆಸರನ್ನು ಪಡೆದದ್ದು ನಮ್ಮ ದೇಶದಲ್ಲೂ ರೂಢಿಗೆ ಬಂದದ್ದು ಪ್ರಸ್ತುತ ನಮ್ಮ ದೇಶದಲ್ಲಿ ಸುಮಾರು 5,74,000 ಹೋಮ ಗಾರ್ಡ್ ಗಳು ಕಾರ್ಯನಿರ್ವಹಿಸುತ್ತಿದ್ದು 1962ರ ಹೋಮ್ ಗಾರ್ಡ್ ಕಾಯ್ದೆ 35ರಂತೆ ನಮ್ಮ ರಾಜ್ಯದಲ್ಲೂ ಸುಮಾರು 420 ಘಟಕಗಳಲ್ಲಿ ಗೃಹರಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ, ಪ್ರಕೃತಿ ವಿಕೋಪ, ಸಾಂಕ್ರಾಮಿಕ ರೋಗ, ಬೃಹತ್ ಸಭೆ ಸಮಾವೇಶ, ಉತ್ಸವ ಜಾತ್ರೆಗಳು ಮುಂತಾದ ಸಂದರ್ಭಗಳಲ್ಲೆಲ್ಲ ಪೊಲೀಸರ ಜೊತೆಗೆ ಸಹಕಾರಿಯಾಗಿ ಕಾರ್ಯನಿರ್ವಹಿಸುವ ಗ್ರಹ ರಕ್ಷಕರು ಅಭಿನಂದನಾರ್ಹರು ಎಂದು ಎಚ್ ಬಿ ಮಂಜುನಾಥ್ ಹೇಳಿದರು.
Devaraja Arasu ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ದಾವಣಗೆರೆ ಜಿಲ್ಲಾ ಗೃಹರಕ್ಷಕ ದಳದ ಕಮಾಂಡೆಂಟ್ ಡಾ. ಸುಜಿತ್ ಕುಮಾರ್ ಎಸ್.ಹೆಚ್. ಉತ್ಸವ ಜಾತ್ರೆ ಹಬ್ಬಗಳಲ್ಲಿ ಸಾರ್ವಜನಿಕರು ಸಂಭ್ರಮಿಸುವಾಗಲೂ ಶಾಂತಿ ಸುವ್ಯವಸ್ಥೆಯ ಕಾಪಾಡು ಕಾಪಾಡುವಿಕೆಯಲ್ಲಿ ತೊಡಗಿಕೊಳ್ಳುವ ಗ್ರಹರಕ್ಷಕ ದಳದವರು ತ್ಯಾಗ ಮತ್ತು ಸೇವಾ ಮನೋಭಾವದವರು ಎಂದರಲ್ಲದೆ ದಾವಣಗೆರೆ ಜಿಲ್ಲೆಯ ಕ್ರೀಡಾಕೂಟದಲ್ಲಿ ವಿಜಯಿಗಳಾದವರು ರಾಜ್ಯಮಟ್ಟದಲ್ಲೂ ಜಯಶೀಲರಾಗಲೆಂದು ಹಾರೈಸಿದರು.
ಅಂಬರೀಶ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಆಶಾ ಪ್ರಾರ್ಥನೆಯನ್ನು ಹಾಡಿದರು, ಶೋಭಾ ಸ್ವಾಗತ ಕೋರಿದರು. ಸರಸ್ವತಿ, ಮನ್ಸೂರ್ ಅಹಮದ್, ತಿಪ್ಪೇಸ್ವಾಮಿ ಮುಂತಾದವರು ಉಪಸ್ಥಿತರಿದ್ದು ಕ್ರೀಡಾಕೂಟದ ವಿಜಯಿಗಳಿಗೆ ಪ್ರಮಾಣ ಪತ್ರ ವಿತರಣೆಯ ನಂತರ ವಿಜಯಲಕ್ಷ್ಮಿ ವಂದಿಸಿದರು.ಎಚ್.ಬಿ.ಮಂ
ಜುನಾಥರನ್ನು ಸನ್ಮಾನಿಸಿ ಗೌರವಿಸಿದರು