Shivamogga Airport ರಾಜ್ಯ ವಿಧಾನ ಸಭೆಯ ಬೆಳಗಾವಿ ಅಧಿವೇಶನದಲ್ಲಿ ರಾಜ್ಯದ ವಿಮಾನ ನಿಲ್ದಾಣಗಳಿಗೆ ನಾಮಕರಣ ಮಾಡುವ ಬಗ್ಗೆ ನಿರ್ಣಯಗಳಾಗಿವೆ.
ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ (ಕುವೆಂಪು) ಕೆ.ವಿ.ಪುಟ್ಟಪ್ಪ.
ಹುಬ್ಬಳ್ಳಿಯ ನಿಲ್ದಾಣಕ್ಕೆ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ,ಬೆಳಗಾವಿ ನಿಲ್ದಾಣಕ್ಕೆ ವೀರ ರಾಣಿ ಚೆನ್ನಮ್ಮ ಹಾಗೂ ವಿಜಯಪುರಕ್ಕೆ ಜಗಜ್ಯೋತಿ ಬಸವೇಶ್ವರ ಹೆಸರಿಡಲು ಉಭಯ ಸದನಗಳಲ್ಲಿ ಸರ್ವಾನುಮತದ ನಿರ್ಣಯ ಮಾಡಲಾಗಿದೆ.ಈ ನಡುವೆ ಮಂಗಳೂರಿನ ವಿಮಾನ ನಿಲ್ದಾಣದ ಹೆಸರು ಹೆಸರು ಸೇರಿರಲಿಲ್ಲ.
ಶಾಸಕ ಸುನೀಲ್ ಕುಮಾರ್ ಈ ಬಗ್ಗೆ ಕೋಟಿ ಚೆನ್ನಯ ಹೆಸರಿಡಲು ಅನಿಸಿಕೆ ತಿಳಿಸಿ ಎಲ್ಲರ ಗಮನ ಸೆಳೆದರು. ಆಗ ಸಭಾಧ್ಯಕ್ಷ ಯು.ಟಿ.ಖಾದರ್ ಅವರು ಈ ಬಗ್ಗೆ ರಾಣಿ ಅಬ್ಬಕ್ಕ ಹೆಸರಿಡಬಹುದು ಎಂದು ತಮ್ಮ ಸಲಹೆ ನೀಡಿದರು.
ಮೈಸೂರಿನ ವಿಮಾನ ನಿಲ್ದಾಣಕ್ಕೆ ಟಿಪ್ಪು ಸುಲ್ತಾನ್ ಹೆಸರಿಡಲು ಶಾಸಕ ಅಬ್ಬಯ್ಯ ಪ್ರಸಾದ್ ಸಲಹೆ ನೀಡಿದರು.
Shivamogga Airport ತಕ್ಷಣ ಬಹಳ ಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ನಡುವೆ ಈ ಬಗ್ಗೆ ಮಾತಿನ ಚಕಮಕಿ ನಡೆಯಿತು.
Shivamogga Airport ಅಧಿವೇಶನದಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕುವೆಂಪು ಹೆಸರಿಡಲು ಅನುಮೋದನೆ
Date: