Sunday, December 7, 2025
Sunday, December 7, 2025

Scheduled Caste and Scheduled Tribe Community ಆಲ್ದೂರಿಗೆ ಸ್ಮಶಾನ ಜಾಗ ಮೀಸಲಿಗೆ ಗ್ರಾಮಸ್ಥರ ಒತ್ತಾಯ

Date:

Scheduled Caste and Scheduled Tribe Community ಪರಿಶಿಷ್ಟ ಜಾತಿ ಹಾಗೂ ಪ.ಪಂಗಡದ ಸಮುದಾಯಕ್ಕೆ ಸ್ಮಶಾನ ಜಾಗ ವನ್ನು ಗ್ರಾಮದಲ್ಲಿ ಮೀಸಲಿರಿಸಬೇಕು ಎಂದು ಒತ್ತಾಯಿಸಿ ಆಲ್ದೂರಿನ ಗ್ರಾಮಸ್ಥರು ಜಿಲ್ಲಾಡಳಿತವನ್ನು ಒತ್ತಾಯಿಸಿದರು.

ಈ ಸಂಬಂಧ ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ಅವರಿಗೆ ಮನವಿ ಸಲ್ಲಿಸಿದ ಗ್ರಾಮಸ್ಥರು ಶವಸಂಸ್ಕಾರಕ್ಕೆ ಜಾಗವಿಲ್ಲದೇ ತೀವ್ರ ತೊಂದರೆಯಾಗಿರುವ ಹಿನ್ನೆಲೆಯಲ್ಲಿ ಜಾಗವನ್ನು ಜನಾಂಗದ ಸ್ಮಶಾನಕ್ಕೆ ಮಾತ್ರ ಮೀಸಲಿಡಬೇಕು ಎಂದು ಆಗ್ರಹಿಸಿದರು.

ಬಳಿಕ ಮಾತನಾಡಿದ ಭೀಮ್ ಆರ್ಮಿ ಅಧ್ಯಕ್ಷ ಗಿರೀಶ್ ತಾಲ್ಲೂಕಿನ ಆಲ್ದೂರು ಹೋಬಳಿ ಚಿಕ್ಕಮಾಗರವಳ್ಳಿ ಗ್ರಾಮದ ಸ.ನಂ.೧೦೮ರ ಬೀರಂಜಿ ಹೊಳೆ ಸಮೀಪ ೨.೩೨ ಎಕರೆ ಪ.ಜಾತಿ ಮತ್ತು ವರ್ಗದವರ ಸ್ಮಶಾನ ಜಾಗವಿದ್ದು ಈ ಜಾಗವನ್ನು ಆಲ್ದೂರು ಗ್ರಾ.ಪಂ.ನವರು ಒಕ್ಕಲಿಗರ ನಿವೇಶನಕ್ಕೆ ಮೀಸಲಿಟ್ಟು ಕಂದಾಯ ಪಾವತಿಸಲಾಗುತ್ತಿದೆ ಎನ್ನುತ್ತಿದ್ದಾರೆ.
ಕಳೆದ ಹಲವಾರು ವರ್ಷಗಳಿಂದ ಜನಾಂಗದ ಶವಸಂಸ್ಕಾರ ನಡೆಸಲು ತೀವ್ರ ಸಮಸ್ಯೆಯಾಗಿದೆ. ಬಿರಂಜಿ ಹೊಳೆ ಸಮೀಪದ ಸ್ಮಶಾನದ ಜಾಗದ ವಿಚಾರವಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಕೂಡಾ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ಹೊರಹಾಕಿದರು.

Scheduled Caste and Scheduled Tribe Community ಆ ನಿಟ್ಟಿನಲ್ಲಿ ಜಿಲ್ಲಾಡಳಿತ ಪ.ಜಾತಿ ಮತ್ತು ಪ.ಪಂಗಡದವರಿಗೆ ಆಲ್ದೂರು ಗ್ರಾಮದಲ್ಲಿ ೨.೩೨ ಎಕರೆ ಸ್ಮಶಾನ ಜಾಗವನ್ನು ಜನಾಂಗಕ್ಕೆ ಮಿಸಲಿಟ್ಟು ಶವಸಂಸ್ಕಾರಕ್ಕೆ ಅನುವು ಮಾಡಿಕೊಡಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಆಲ್ದೂರು ಗ್ರಾಮಸ್ಥರಾದ ಮನು, ವೆಂಕಟೇಶ್, ಎ.ಎಸ್.ನಿಂಗಪ್ಪ, ಪುನೀತ್, ಚಂದ್ರಶೇಖರ್ ಹಾಜ ರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಡಿಸೆಂಬರ್ 6. ಸಾಮಾಜಿಕ ಭದ್ರತಾ ಸೌಲಭ್ಯ ವಿಸ್ತರಣೆ ಅರಿವು ಕಾರ್ಯಾಗಾರ

Shivamogga District Chamber of Commerce and Industry ಶಿವಮೊಗ್ಗ ಜಿಲ್ಲಾ...

Madhu Bangarappa ಹವಾಮಾನಾಧಾರಿತಬೆಳೆವಿಮೆ ಮೊತ್ತ ಪಾವತಿ ನ್ಯೂನತೆ ಸರಿಪಡಿಸಲು ಶೀಘ್ರ ಕ್ರಮ- ಮಧು ಬಂಗಾರಪ್ಪ

Madhu Bangarappa ಅತಿವೃಷ್ಟಿ, ಅನಾವೃಷ್ಟಿ, ತಾಪಮಾನದ ಏರಿಳಿತದಂತಹ ಹವಾಮಾನ ವೈಪರಿತ್ಯಗಳಿಂದ ತೋಟಗಾರಿಕೆ...

DC Shivamogga ಕೆಎಸ್ಎಫ್ ಸಿ ಎಸ್ ಸಿ ಮಳಿಗೆಗಳಲ್ಲಿ ಸಗಟು ಭತ್ತ ಖರೀದಿ ವ್ಯವಸ್ಥೆ- ಗುರುದತ್ತ ಹೆಗಡೆ

DC Shivamogga 2025-26 ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಟ ಬೆಂಬಲ...