Sandipani English Medium School ಸಾಂದೀಪನಿ ಆಂಗ್ಲ ಶಾಲೆಯಲ್ಲಿ ನಡೆದ ಅಡುಗೆ ಸ್ಪರ್ಧೆಯಲ್ಲಿ ಮಕ್ಕಳು ವಿವಿಧ ರೀತಿಯ ಆಹಾರ ಪದಾರ್ಥಗಳನ್ನು ತಾವೇ ಸ್ವತಃ ಸಿದ್ಧಪಡಿಸಿದ್ದರು.
1 ರಿಂದ 6 ನೇ ತರಗತಿಯ ಮಕ್ಕಳಿಗೆ ಬೆಂಕಿ ರಹಿತ, 7 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಒಲೆಯಲ್ಲಿ ಅಡುಗೆಯನ್ನು ಮಾಡುವ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು.
ಮಕ್ಕಳಂತು ಬಹಳ ಉತ್ಸಾಹದಿಂದ ಭಾಗವಹಿಸಿದ್ದರು. ಹುಡುಗರು ಕೂಡ ತಾವೇನು ಕಡಿಮೆ ಇಲ್ಲ ಎಂಬುವಂತೆ ಕೊಟ್ಟೆಕಡುಬು, ಗಿಣ್ಣ, ಪಾನಕ, ಕ್ಯಾರೆಟ್ ಹಲ್ವಾ, ರೊಟ್ಟಿ, ಚಪಾತಿ ಹೀಗೆ ನಾನಾ ವಿಧದ ಖಾದ್ಯಗಳನ್ನು ಸಿದ್ಧಪಡಿಸಿದ್ದರು.
ಬಾಲಕಿಯರು ಕೂಡ ತಾವೇನೂ ಕಮ್ಮಿ ಇಲ್ಲ ಎನ್ನುವಂತೆ ಸಾಬೂದಾನ್ ಇಡ್ಲಿ, ವಡಾಪಾವ್, ರಾಗಿ ಅಂಬಲಿ, ಜೋಳದ ಅಂಬಲಿ, ಚಪಾತಿ-ಮುಳಗಾಯಿ ಬಜ್ಜಿ, ಕೂರ್ಮ, ಚನ್ನಮಸಾಲ, ರಾಗಿ ರೊಟ್ಟಿ, ಹೋಳಿಗೆ ಹೀಗೆ ನಾನಾವಿಧಧ ಅಡುಗೆಗಳನ್ನು ಸಿದ್ಧಪಡಿಸಿದ್ದರು.
ಎಲ್ಲರೂ ಅದನ್ನು ತಯಾರಿಸಿ ಪ್ರಸಕ್ತ ಪಡಿಸಿದ ರೀತಿ, ಒಂದು ತಂಡವಾಗಿ ಅಡುಗೆ ಮಾಡುವುದು, ಅದರ ತಯಾರಿ, ಸ್ವಚ್ಛಗೊಳಿಸುವ ಪರಿ, ತಾವು ಮಾಡಿರುವ ಅಡುಗೆಯಲ್ಲಿ ಇರುವ ಸತ್ವಗಳು, ಮಾಡುವ. ವಿಧಾನ ಎಲ್ಲವನ್ನೂ ಬಂದವರಿಗೆ ತಿಳಿಸುತ್ತಿದ್ದದ್ದು ನಿಜವಾಗಿಯೂ ಮಕ್ಕಳೋ ಅಥವಾ ಬಾಣಿಸಿಗರೋ ಎನ್ನುವಂತೆ ಸೋಜಿಗ ಹುಟ್ಟಿಸುವ ರೀತಿಯಲ್ಲಿತ್ತು.
Sandipani English Medium School ಪುಸ್ತಕ, ಓದು-ಬರಹದಲ್ಲಿ ತೊಡಗಿಸಿಕೊಂಡಿರುತ್ತಿದ್ದ ಮಕ್ಕಳು ಇಂದು ಅದರಿಂದ ಬಿಡುವು ಪಡೆದು ಶಾಲೆಯಲ್ಲಿ ಅಡುಗೆ ಮನೆಯನ್ನೇ ಸಿದ್ಧಪಡಿಸಿದ್ದರು.
ಬಂದಿದ್ದ ಎಲ್ಲಾ ಪೋಷಕರು ಶಾಲೆಯ ಈ ಕಾರ್ಯಕ್ರಮವನ್ನು ಮೆಚ್ಚಿಕೊಂಡರು. ಈ ರೀತಿಯ ಕಾರ್ಯಕ್ರಮ ನಿರಂತರವಾಗಿರಲಿ, ಮಾದರಿಯಾಗಿರಲಿ ಎಂಬುದು ಎಲ್ಲರ ಅನಿಸಿಕೆಯಾಗಿತ್ತು.