Aam Admi Party ರಾಜ್ಯಸರ್ಕಾರ ನಿರಂತರವಾಗಿ ಕೃಷಿಕರ ಸೌಲಭ್ಯಗಳಿಗೆ ಕತ್ತರಿಹಾಕಿ ಯಾವುದೇ ಸವಲತ್ತುಗಳನ್ನು ಒದಗಿಸದೇ ಕಂಗಾಲಾಗಿಸಿರುವ ರೈತರ ನೆರವಿಗೆ ರೈತ ಸಂಘವು ಚಳುವಳಿ ಹಮ್ಮಿ ಕೊಂಡಿದ್ದು ಇದಕ್ಕೆ ಆಮ್‌ಆದ್ಮಿ ಪಕ್ಷವು ಸಂಪೂರ್ಣ ಬೆಂಬಲ ಸೂಚಿಸಿದೆ ಎಂದು ಮಾಧ್ಯಮ ಪ್ರತಿನಿಧಿ ಡಾ|| ಕೆ.ಸುಂ ದರಗೌಡ ತಿಳಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುವ ಅವರು ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ನೇತೃತ್ವದಲ್ಲಿ ಡಿ.13 ರಂದು ರೈತಪರ ಹೋರಾಟದಲ್ಲಿ ಸಹಕಾರ ನೀಡಿ ಬೆಂಬಲ ಸೂಚಿಸುವ ಮೂಲಕ ಸಮರ್ಪಕವಾಗಿ ರೈತರ ಸೌಲಭ್ಯಕ್ಕೆ ಒತ್ತಾಯಿಸಲಾಗುವುದು ಎಂದು ಹೇಳಿದ್ದಾರೆ.
ಇಡೀ ರಾಜ್ಯವನ್ನು ಬರಗಾರ ಪ್ರದೇಶವೆಂದು ಘೋಷಿಸಿರುವ ಸರ್ಕಾರ ಕೇವಲ ಎರಡು ಸಾವಿರ ಹೊರತು ಪಡಿಸಿದರೆ ಬರ‍್ಯಾವ ಸೌಲಭ್ಯ ಒದಗಿಸದೇ ಹಸಿದವನಿಗೆ ಮಜ್ಜಿಗೆ ಊಟ ಬಡಿಸುತ್ತಿದೆ. ಜನತೆಗೆ ಎಲ್ಲವು ಉಚಿತ ವೆಂದು ಗ್ಯಾರಂಟಿಗಳಲ್ಲಿ ಘೋಷಿಸಿದೆ. ಆದರೆ ಕೃಷಿ ಕ್ಷೇತ್ರವು ಅತ್ಯಂತ ಸಂಕಷ್ಟದ ಸ್ಥಿತಿಯಲ್ಲಿರುವ ವೇಳೆಯಲ್ಲಿ ರಾಜ್ಯ ಸರ್ಕಾರ ಪರಿಹಾರ ಒದಗಿಸದೇ ವಿಫಲತೆಯನ್ನು ಕಾಣುತ್ತಿದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಬಹುತೇಕ ತಾಲ್ಲೂಕುಗಳನ್ನು ಬರಪೀಡಿತ ಘೋಷಣೆಯಾಗಿದ್ದರೂ ಚಿಕ್ಕಮಗಳೂರು ತಾಲ್ಲೂಕ ನ್ನು ಮಾತ್ರ ಘೋಷಿಸಿಲ್ಲ. ಇದಕ್ಕೆಲ್ಲಾ ಸ್ಥಳೀಯ ತಾಲ್ಲೂಕು ದಂಡಾಧಿಕಾರಿಗಳು ಹಾಗೂ ರೆವಿನ್ಯೂ ಇಲಾಖೆಯ ಅವ್ಶೆಜ್ಞಾನಿಕ ಸಮೀಕ್ಷೆಯ ಮೂಲ ಕಾರಣವೇ ಎಂದು ದೂರಿದ್ದಾರೆ.
Aam Admi Party ಕೃಷಿಕರು ಭಿತ್ತಿನ ಬೀಜದ ನಷ್ಟವನ್ನು ಸರಿದೂಗಿಸಲಾಗದ ಸಂಕಷ್ಟಕ್ಕೆ ಸಿಲುಕಿದ್ದಾರೆ. ತೀವ್ರ ಬರಗಾಲದಿಂದ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವಿನ ಕೊರತೆಯ ಅಭಾವ ಉಂಟಾಗಿದೆ. ಕೂಲಿ ಕಾರ್ಮಿಕರು ನಿಗಧಿತ ಕೆಲಸವಿಲ್ಲದೇ ಬಡತನಬೇಗೆಯಲ್ಲಿ ಬೇಯಿಸುತ್ತಿದ್ದು ಇದಕ್ಕೆಲ್ಲಾ ಸರ್ಕಾರಗಳ ದುರಾಡಳಿತವೇ ನೇರಹೊಣೆ ಎಂದಿದ್ದಾರೆ.
ಕೃಷಿ ಉತ್ಪತಿಗೆ ಸರ್ಕಾರಿ ನೌಕರರ ವೇತನದ ಸ್ಥಾನಮಾನ ನೀಡಬೇಕು. ಪ್ರತಿವರ್ಷ ವೇತನ ಏರಿಕೆಯಂತೆ ಕೃಷಿ ಉತ್ಪತ್ತಿಯ ಬೆಲೆ ಏರಿಸಬೇಕು. ಇನ್ಸೂರೆನ್ಸ್ ಸರ್ಕಾರವೇ ಭರಿಸಬೇಕು. ೬೦ ವರ್ಷ ಪೂರೈಸಿದ ರೈತರಿಗೆ ಸರ್ಕಾರಿ ನೌಕರರ ಮಾದರಿಯಲ್ಲೇ ಪಿಂಚಣ ವ್ಯವಸ್ಥೆ ಕಲ್ಪಿಸಬೇಕು. ಪ್ರತಿನಿತ್ಯ 07 ಗಂಟೆಗಳ ಕಾಲ ಗುಣಮಟ್ಟದ ವಿದ್ಯುತ್ ಪೂರೈಕೆಗೆ ಒತ್ತಾಯಿಸಿ ಚಳುವಳಿಯಲ್ಲಿ ಭಾಗಿಯಾಗುವುದು ಎಂದು ಹೇಳಿದ್ದಾರೆ.