Saturday, December 6, 2025
Saturday, December 6, 2025

Actress Leelavati ತಾರೆ ಲೀಲಾವತಿ ಅವರ ಅಭಿನಯ ಅಜರಾಮರ- ಪಿ.ಸಿ.ರಾಜೇಗೌಡ

Date:

Actress Leelavati ಕನ್ನಡ ಸಿನಿಮಾರಂಗದ ಹಿರಿಯ ಕಲಾವಿದೆ ನಟಿ ಲೀಲಾವತಿ ಅವರು ವಯೋಸಹಜವಾಗಿ ನಿಧನರಾದ ಹಿನ್ನೆಲೆಯಲ್ಲಿ ಕನ್ನಡಸೇನೆ ವತಿಯಿಂದ ನಗರದ ರಾಮಮಂದಿರ ಸಮೀಪ ದೇವೇಗೌಡ ವೃತ್ತದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಶ್ರದ್ದಾಂಜಲಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕನ್ನಡಸೇನೆ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ ಡಾ|| ರಾಜ್‌ಕುಮಾರ್ ಕಾಲದಿಂದಲೂ ಹಲವಾರು ಪಾರಂಪರಿಕ ಚಿತ್ರಗಳಲ್ಲಿ ಅಭಿನಯಿಸಿ ಜನಮನ್ನಣೆ ಗಳಿಸಿದ ಮನೆ ಮತಾಗಿದ್ದರು. ಜೊತೆಗೆ ಕನ್ನಡ ಬಹು ತೇಕ ಹಿರಿಯ ಕಲಾವಿದರೊಂದಿಗೆ ಬೆಳ್ಳಿಪರದೆಯಲ್ಲಿ ಪಯಣ ಬೆಳೆಸಿದವರು ಎಂದು ಹೇಳಿದರು.

ಇವರ ನಟನೆಯ ಭಕ್ತಕುಂಬಾರ, ವಸಂತಗೀತ, ಕುಲವಧು, ನಾಗರಹಾವು, ಗಂಗೆಗೌರಿ ಸೇರಿದಂತೆ ಅನೇಕ ಚಿತ್ರಗಳು ಶತದಿನವನ್ನು ಆಚರಿಸಿ ಮುನ್ನೆಡೆದಿದ್ದವು. ಪ್ರತಿ ಸಿನಿಮಾದಲ್ಲೂ ವಿಭಿನ್ನ ರೀತಿಯ ಪಾತ್ರಗಳಲ್ಲಿ ಕಾಣ ಸಿಕೊಳ್ಳುವ ಜೊತೆಗೆ ಹಿರಿಯ ಕಲಾವಿದರಾದ ಡಾ|| ರಾಜ್‌ಕುಮಾರ್, ಕಲ್ಯಾಣ್‌ಕುಮಾರ್, ಬಾಲಕೃಷ್ಣ, ವಿಷ್ಣು ವರ್ಧನ್, ಅಂಬರೀಶ್, ರವಿಚಂದ್ರನ್ ಸೇರಿದಂತೆ ಬಹುತೇಕರೊಂದಿಗೆ ಬೆಳ್ಳಿಪರದೆ ಹಂಚಿಕೊಂಡಿದ್ದರು ಎಂದರು.

ಸುಮಾರು 45 ವರ್ಷ ಪೂರೈಸಿದ್ದ ದಿ|| ಲೀಲಾವತಿ ಅವರು ಕಳೆದ ಹಲವಾರು ವರ್ಷಗಳಿಂದ ವಯೋ ಸಹಜ ಸಮಸ್ಯೆಯಿಂದ ಬಳಲುತ್ತಿದ್ದು ಇವರ ಸಾವು ಇಡೀ ಕನ್ನಡ ಚಿತ್ರರಂಗಕ್ಕೆ ಹಾಗೂ ನಾಡಿನ ಸಮಸ್ತ ಜನತೆಗೆ ನೋವುಂಟು ಮಾಡಿದೆ. ಕನ್ನಡ ನಾಡು ಕ್ಷೇತ್ರಕ್ಕೆ ನಟನೆಯ ಮೂಲಕ ಲೀಲಾವತಿ ಸಲ್ಲಿಸಿರುವ ಸೇವೆ ಅಜಾರಾಮರ ಎಂದು ಬಣ್ಣಿಸಿದರು.

Actress Leelavati ಈ ಸಂದರ್ಭದಲ್ಲಿ ಸೇನೆಯ ಆಟೋ ಘಟಕದ ಅಧ್ಯಕ್ಷ ಜಯಪ್ರಕಾಶ್, ಮುಖಂಡರುಗಳಾದ ಆನಂದ್, ಸತೀಶ್, ಪಾಲಾಕ್ಷಿ, ಅಶೋಕ್, ಗುರು, ಲಿಟ್ಟು, ಶಾಕೀಬ್, ಆಕಾಶ್, ಶಿವಕುಮಾರ್ ಅಭಿಜಿತ್ ಮತ್ತಿತರರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...