Millionaire Farmer of India ಕೃಷಿ ಚಟುವಟಿಕೆ ಜೊತೆಗೂಡಿ ಇತರೆ ಉಪಕಸುಬಾಗಿ ಮೌಲ್ಯವರ್ಧನೆ ಕಾರ್ಯದಲ್ಲಿ ಕೆಲಸ ಮಾಡಿ ಆಧಾಯ ದ್ವಿಗುಣಗೊಳಿಸಿದ ಹಿನ್ನೆಲೆಯಲ್ಲಿ ತಾಲ್ಲೂಕಿನ ಕುನ್ನಾಳು ಗ್ರಾಮದ ಕೆ.ಹೆಚ್. ಕುಮಾರಸ್ವಾಮಿ ಹಾಗೂ ಮೂಡಿಗೆರೆಯ ಅಮರ್ ಡಿಸೋಜಾ ಅವರನ್ನು ಕೇಂದ್ರ ಸರ್ಕಾರ ಸಾಮ್ಯದ ಕೃಷಿ ಜಾಗ ರಣ್ ಸಂಸ್ಥೆ ಗುರುತಿಸಿ ನ್ಯಾಷನಲ್ ಮಿಲಿಯನೇರ್ ಫಾರ್ಮರ್ ಆಫ್ ಇಂಡಿಯಾ ಪ್ರಶಸ್ತಿ ನೀಡಿ ಗೌರವಿಸಿದೆ.
ಕುನ್ನಾಳು ಗ್ರಾಮದ ಕುಮಾರಸ್ವಾಮಿ ಅವರು ಕೃಷಿ ಚಟುವಟಿಕೆ ಜೊತೆಗೆ ಹಸು, ಕುರಿ ಸಾಕಾಣ ಕೆ ಹಾಗೂ ಮೂಡಿಗೆರೆಯ ಅಮರ್ ಡಿಸೋಜಾ ಅವರು ಕೋಳಿ, ಹಂದಿ ಸಾಕಾಣ ಕೆಯಲ್ಲಿ ಸಾಧನೆಗೈದ ಹಿನ್ನೆಲೆಯಲ್ಲಿ ಕೃಷಿ ಜಾಗರಣ್ ಹಾಗೂ ಮಹೇಂದ್ರ ಟ್ಯಾಕ್ಟರ್ ಸಹಯೋಗದಲ್ಲಿ ದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಅವರನ್ನು ಪ್ರಶಸ್ತಿ ನೀಡಿ ಪುರಸ್ಕಾರಿಸಲಾಗಿದೆ.
Millionaire Farmer of India ನಮ್ಮ ಜಿಲ್ಲೆಯ ಕೃಷಿಕರಾದ ಕುಮಾರಸ್ವಾಮಿ ಹಾಗೂ ಅಮರ್ ಡಿಸೋಜಾ ಅವರು ನಮಗೆಲ್ಲಾ ಹೆಮ್ಮೆಯ ಹಾಗೂ ಸಂಭ್ರಮದ ಸಂಗತಿಯಾಗಿದ್ದು ಈ ಪ್ರಶಸ್ತಿ ಗಳಿಸಲು ನಿಮ್ಮ ಪರಿಶ್ರಮ ಹಾಗೂ ಕೃಷಿಯ ಮೇಲೆ ನಿಮಗಿ ರುವ ಆಸಕ್ತಿ ಕಾರಣವಾಗಿದೆ. ನಿಮ್ಮಂತಹ ಸಾಧಕರನ್ನು ಇನ್ನೂ ಹಲವಾರು ರಾಷ್ಟ್ರೀಯ ಹಾಗೂ ಅಂತರರಾ ಷ್ಟ್ರೀಯ ಪ್ರಶಸ್ತಿಗಳು ಲಭಿಸಲಿ ಎಂದು ಗ್ರಾಮಸ್ಥರು ಶುಭ ಹಾರೈಸಿದ್ದಾರೆ.