Kanaka Youth Association ಗ್ರಾಮೀಣ ಕ್ರೀಡೆಗಳು ನಶಿಸುತ್ತಿರುವ ಇಂದಿನ ಕಾಲಘಟ್ಟದಲ್ಲಿ ಜೋಡೆ ಎತ್ತಿನ ಸ್ಫರ್ಧೆ ಆಯೋಜಿಸಿ ಯಶಸ್ವಿಯಾಗಿ ಮುನ್ನೆಡೆಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಬಿಜೆಪಿ ನಗರ ಉಪಾಧ್ಯಕ್ಷ ಕಿಟ್ಟಿ ಹೇಳಿದರು.
ಚಿಕ್ಕಮಗಳೂರು ತಾಲ್ಲೂಕಿನ ಕೆಂಪನಹಳ್ಳಿ ಸಮೀಪದಲ್ಲಿ ಕನಕ ಯುವಕರ ಸಂಘ ಹಾಗೂ ದೋಸ್ತಿ ದರ್ಬಾರ್ ವತಿಯಿಂದ ಎರಡನೇ ವರ್ಷದ ರಾಜ್ಯಮಟ್ಟದ ಜೋಡೆಎತ್ತಿನ ಸ್ಪರ್ಧೆಗೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.
ಸ್ಥಳೀಯ ಯುವಕರು ಹಾಗೂ ಹಲವಾರು ದಾನಿಗಳ ಸಹಕಾರದಿಂದ ಸ್ಪರ್ಧೆ ಆಯೋಜಿಸಿ ಗ್ರಾಮೀಣ ಕ್ರೀಡೆ ಗಳನ್ನು ಪ್ರಚಲಿತಕ್ಕೆ ತರುತ್ತಿರುವುದು ಖುಷಿಯ ಸಂಗತಿ. ಇದರಿಂದ ಹಲವಾರು ಜೋಡೆತ್ತಿನ ಸ್ಪರ್ಧಾಳುಗಳು ಭಾಗವಹಿಸಲು ಅನುಕೂಲವಾಗಲಿದೆ ಎಂದು ಹೇಳಿದರು.
ಚಿಕ್ಕಮಗಳೂರಿನಲ್ಲೂ ಹಲವಾರು ಗ್ರಾಮಗಳಲ್ಲಿ ಗ್ರಾಮೀಣ ಕ್ರೀಡಾಪಟುಗಳು ಬಹಳಷ್ಟಿದ್ದು ಪ್ರೋತ್ಸಾಹಿಸಿ ಬೆಳೆಸುವ ಅವಶ್ಯವಿದೆ. ಆ ನಿಟ್ಟಿನಲ್ಲಿ ಕೆಂಪನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಯುವಕರಿಗೆ ಸಹಕಾರ ನೀಡಿ ಕ್ರೀಡೆ ಪರಂಪರೆಯನ್ನು ಇಡೀ ರಾಜ್ಯಾದ್ಯಂತ ಪಸರಿಸುವ ಕೆಲಸಕ್ಕೆ ಇಂದು ಕೈಹಾಕಿದೆ ಎಂದರು.
ಕನಕ ಯುವಕರ ಸಂಘದ ಮುಖ್ಯಸ್ಥ ಸುನೀಲ್ ಮಾತನಾಡಿ ಕಳೆದ ಎರಡು ವರ್ಷಗಳಿಂದ ಜೋಡೆಎತ್ತಿನ ಸ್ಫರ್ಧೆ ಆಯೋಜಿಸಲಾಗಿದೆ. ಇಂದಿನ ಸ್ಪರ್ಧೆಯಲ್ಲಿ ಚಿತ್ರದುರ್ಗ, ಮಂಡ್ಯ, ಹಾಸನ ಸೇರಿದಂತೆ ಒಟ್ಟು ೫೦ಕ್ಕೂ ಸ್ಪರ್ಧಾಳುಗಳು ರಾಜ್ಯಾದ್ಯಂತದಿಂದ ಭಾಗವಹಿಸಿದ್ದಾರೆ ಎಂದರು.
Kanaka Youth Association ಸ್ಪರ್ಧೆಯು ಇಂದಿನಿಂದ ಬೆಳಿಗಿನ ಜಾವದವರೆಗೂ ನಡೆಯಲಿದ್ದು ಪ್ರಥಮ ಬಹುಮಾನ 40 ಸಾವಿರ ನಗದು ಪಾರಿತೋಷಕ, ದ್ವಿತೀಯ 30 ಸಾವಿರ ನಗದು ಪಾರಿತೋಷಕ, ತೃತೀಯ 20 ಸಾವಿರ ನಗದು ಪಾರಿತೋಷಕ ಹಾಗೂ ನಾಲ್ಕನೇ ಸ್ಥಾನಕ್ಕೆ 10 ಸಾವಿರ ಪಾರಿತೋಷಕವನ್ನು ಬಹುಮಾನ ವಿತರಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಉದಯ್‌ಕುಮಾರ್, ರಘು, ವರಲಕ್ಷ್ಮಿ ಫೈನಾನ್ಸ್ ಮಾಲೀಕ ಪುನೀತ್, ಬಿಲ್ಡಿಂಗ್ ಕಂಟ್ರಾಕ್ಟರ್ ಆನಂದ್, ಬಿಜೆಪಿ ಕಾರ್ಯದರ್ಶಿ ಕುಮಾರ್, ಕನಕ ಯುವಕರ ಸಂಘದ ಲಿಖಿತ್, ಚರಣ್, ಮನು, ಚಂದನ್, ರಮೇಶ್, ಅರುಣ್ ಮತ್ತಿತರರು ಹಾಜರಿದ್ದರು.