Veterinary College Shivamogga ಕುಮಾರಿ ಪೂರ್ವಿಕಾ ಆರ್ ತೇಲ್ಕರ್ ಮತ್ತು ಕುಮಾರಿ ಮೇಘನಾ ಎಂ ಬೂದಿಗೆರೆ, ಇವರು ಬೇಸಿಗೆಯಲ್ಲಿ ಜಾನವಾರುಗಳಿಗೆ ಉಂಟಾಗುವ ಮೇವಿನ ಸಮಸ್ಯೆಗೆ ಪರಿಹಾರವನ್ನು ಕೊಡಲು, ರೈತರ ಮನೆಗಳಿಗೆ ಭೇಟಿಕೊಟ್ಟು ಪ್ರಶ್ನಾವಳಿ ಸಿದ್ದಪಡಿಸಿಕೊಂಡು, ಮಾಹಿತಿ ಸಂಗ್ರಹಿಸಿ ಬೇಸಿಗೆಯಲ್ಲಿ ಜಾನವಾರುಗಳಿಗೆ ಉಂಟಾಗುವ ಮೇವಿನ ಸಮಸ್ಯೆಗೆ ಕಾರಣವನ್ನು ಪತೇಹಚ್ಚಲು ಸಮೀಕ್ಷೆ ನಡೆಸಿದ್ದಾರೆ. ಪರಿಹಾರ ಕೊಡಲು ಈ ಭಾಗದಲ್ಲಿ ಹೆಚ್ಚಾಗಿ ಬೆಳೆಯುವ ಮೆಕ್ಕೇಜೋಳದ ಓಣಜೀವರಾಶಿಯನ್ನು ಪೌಷ್ಟಿಕ ಮೇವಾಗಿ ಪರಿವರ್ತಿಸಲು ಸಂಬಂಧಿಸಿ ಪ್ರಯೋಗಗಳನ್ನು ನಡೆಸಿ ಕಡಿಮೆ ವೆಚ್ಚದಲ್ಲಿ ತಯಾರಿಸಿದ ಪೌಷ್ಟಿಕ ಮೇವು ಜಾನುವಾರುಗಳಿಗೆ ಉಪಯುಕ್ತವಾಗಿದೆ. ಡಾ.ತಿರುಮಲೇಶ್.ಟಿ ಪ್ರಾಧ್ಯಾಪಕರು ಮತ್ತು ಮುಖ್ಯಸ್ಧರು ಮತ್ತು ನುರಿತ ಉಪನ್ಯಾಸಕರು. ಪಶು ವೈದ್ಯಕೀಯ ಮಹಾವಿದ್ಯಾಲಯ ಶಿವಮೊಗ್ಗ ಇವರ ಮಾರ್ಗದರ್ಶನದಲ್ಲಿ ಸಿದ್ದಪಡಿಸಿದ್ದ ‘ಒಣಜೀವರಾಶಿಯ ಸಮಗ್ರ ಅಧ್ಯಯನ ಮತ್ತು ಒಣಜೀವರಾಶಿಯಿಂದ ಪಶುಗಳಿಗೆ ವರ್ಷವಿಡೀ ಪೌಷ್ಟಿಕ ಮೇವು” ಎಂಬ ಸಂಶೋಧನಾ ಪ್ರಬಂಧವು 31 ನೇ ರಾಜ್ಯ ಮಟ್ಟದ ಮಕ್ಕಳ ವಿಜ್ಞಾನ ಸಮಾವೇಶಕ್ಕೆ ಆಯ್ಕೆಯಾಗಿದೆ.
Veterinary College Shivamogga ಕಿರಣ್ ಜಿವಾಜಿ ಶಿಕ್ಷಕರು ಯೋಜನೆ ಸಿಧ್ದಪಡಿಸಲು ಸಹಕಾರ ನೀಡಿರುತ್ತಾರೆ . ಡಾ . ಚಂದ್ರಪ್ಪ ನರಸಗೊಂಡರ ಮುಖ್ಯ ವೈಧ್ಯಾಧಿಕಾರಿಗಳಯ ಕೊಮ್ಮನಾಳು ಇವರು ಒಣಮೇವಿನಲ್ಲಿ ಸಹಜವಾಗಿ ಪೌಷ್ಟಿಕತೆ ಕಡಿಮೆ ಇರುತ್ತದೆ. ಈ ತಂತ್ರಜ್ಞಾನದಿಂದ ಒಣ ಮೇವಿನಲ್ಲಿನ ಪೌಷ್ಠಿಕಾಂಶ ಉತ್ತಮವಾಗುವುದರ ಜೊತೆಗೆ ಜಾನುವಾರುಗಳ ಉತ್ಪಾದನೆ ಸುಧಾರಿಸಬಹುದಾಗಿದೆೆ ಎಂದು ತಿಳಿಸಿದ್ದಾರೆ.