Saturday, December 6, 2025
Saturday, December 6, 2025

Hazrat Syed Shah Aleem Diwan Sandal and Urusಸಂತ ಹಜ್ರತ್ ಸೈಯದ್ ದಿವಾನ್ ಅಲೈ ಬಾಬಾರವರ ಉರುಸ್

Date:

Hazrat Syed Shah Aleem Diwan Sandal and Urus ಶಿವಮೊಗ್ಗ ನಗರದ ಮಹಾವೀರ ವೃತ್ತದ ಬಳಿ ಇರುವ ಶಿವಮೊಗ್ಗ ಜಿಲ್ಲೆಯ ಇತಿಹಾಸ ಪ್ರಸಿದ್ದ ಸೂಫಿ ಸಂತರಾದ ಹಜ್ರತ್‌ ಸೈಯದ್ ಷಾ ಅಲೀಂ ದಿವಾನ್ (ರ) ಅಲೈ ಬಾಬಾರವರ ಸಂದಲ್ ಮತ್ತು ಉರುಸ್ ಸಮಾರಂಭವನ್ನು ಪ್ರತಿ ವರ್ಷದಂತೆ ಈ ವರ್ಷವೂ ಸಹ ಭಾರಿ ವಿಜೃಂಭಣೆಯಿಂದ ಸಂದಲ್ ಮತ್ತು ಉರುಸ್‌ ಸಮೀತಿಯ ಅಧ್ಯಕ್ಷರಾದ ಜೆಪುಲ್ಲಾ ಖಾನ್ ರವರ ಅಧ್ಯಕ್ಷತೆಯಲ್ಲಿ ಇದೇ ಡಿಸೆಬರ್ ತಿಂಗಳಿನ ದಿನಾಂಕ 05, 06 ಮತ್ತು 07 ನೇ ತಾರೀಕಿನಂದು ನಡೆಸಲು ನಿರ್ಧರಿಸಲಾಗಿದೆ.

ಈ ಉತ್ಸವದಲ್ಲಿ ದಿನಾಂಕ: 05/12/2023 ರ ಮಂಗಳವಾರ ಸಂದಲ್ ಕಾರ್ಯಕ್ರಮವಿರುತ್ತದೆ. ನಗರದ ಪ್ರಮುಖ ಬೀದಿಗಳಲ್ಲಿ ಸಂದಲ್ ಮೆರವಣಿಗೆಯನ್ನು ಏರ್ಪಡಿಸಲಾಗಿದೆ. ರಾತ್ರಿ 8.00 ಗಂಟೆಯಿಂದ 12.30 ರ ಮಧ್ಯರಾತ್ರಿಯವರೆಗೆ ದರ್ಗಾ ಆವರಣದಲ್ಲಿ ಸ್ವಚನ ಕಾರ್ಯಕ್ರಮವಿರುತ್ತದೆ. ದಿನಾಂಕ: 06/12/2023 ರ ಬುಧವಾರ ಬೆಳಿಗ್ಗೆ 10.00 ಗಂಟೆಯಿಂದ ಮಧ್ಯನ 2.00 ಗಂಟೆಯವರೆಗೆ ಮುಸ್ಲಿಮ್ ವಧುವರರ ಸಾಮೂಹಿಕ ವಿವಾಹ ಕಾರ್ಯಕ್ರಮವಿರುತ್ತದೆ. ಹಾಗೂ 11.00 ಗಂಟೆಯಿಂದ ಸಂಜೆ 5.00 ಗಂಟೆಯವರೆಗೆ ಸರ್ವಧರ್ಮದ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಕಾರ್ಯಕ್ರಮವಿರುತ್ತದೆ.

Hazrat Syed Shah Aleem Diwan Sandal and Urus ದಿನಾಂಕ: 07/12/2023 ರ ಗುರುವಾರ ದಂದು ರಾತ್ರಿ 9.00 ಗಂಟೆಯಿಂದ ತಡರಾತ್ರಿಯವರೆಗೆ ಕವಾಲಿ ಕಾರ್ಯಕ್ರಮವಿರುತ್ತದೆ. ಈ ಮೂರು ದಿವಸ ನಡೆಯುವ ಕಾರ್ಯಕ್ರಮಗಳಿಗೆ ಶ್ರೀಶ್ರೀಶ್ರೀ ಅಲ್‌ಹಾಜ್ ಹಜ್ರತ್ ಗ್ವಾಜ ಸೈಯದ್ ಷಾ ಸಾನಿ ಜೈನುಲ್‌ಆದ್ದೀನ್ (ಮನ್ನ ಸಾಹೆಬ್), ಹಜ್ರತ್ ಸ್ವಾಜ ನೂರ್ ಬಾಬಾ ಹುಸೈನಿ ಮದನ್ ಪಲ್ಲಿ (ಎ.ಪಿ), ಹಜ್ರತ್ ಸೈಯದ್ ಗೌಸ್ ಮುಹಿನುದ್ದೀನ್ ಷಾ ಖಾದ್ರಿ, ಹಜ್ರತ್ ಸೈಯದ್ ದಾದಾ ಹಯಾತ್ ಮೀರ್ ಖಲಂದರ್ ಸದ್ರ ಸಲವಾತಿ ಕೂಚೆ ದಾದಾ ಪಹಡ್, ಹಜ್ರತ್ ಸೈಯದ್ ಪೀರ್ ಪಾಷಾ ಹಫೀಜ್ ಖಾದ್ರಿ ಬಡೆ ಷಾ ಪಾಳ್ಯ ತುಮಕೂರು, ಹಜ್ರತ್ ಸೈಯದ್‌ ಸೂಪಿ ಹಸನ್ ಷಾ ಚಿಸ್ತಿ ಸರ್ಕಾರ್ ಕಾಪ್ ಮತ್ತು ಹಜ್ರತ್ ಮೌಲಾನ ಸೈಯದ್ ಷಾ ಅಷ್ಟೇ ಮುಸ್ತಫಾ ಖಾದ್ರಿ ಅಲ್ ಮುಸನ್ವಿ ಅಲ್ ಜೀಲಾನಿ ಅಲ್ ಮಾರೂಫ್ ಅಲಿ ಪಾಷ ಸಾಹೆಬ್ ಇವರು ಪ್ರವಚನ ನೀಡಲಿದ್ದಾರೆ ಮುಖ್ಯ ಅಥಿತಿಗಳಾಗಿ ಆಗಮಿಸುತ್ತಾರೆ.
ಸಂದಲ್ ಮತ್ತು ಉರುಸ್ ಸಮೀತಿಯ ಉಸ್ತುವಾರಿಯಲ್ಲಿ ಕಾರ್ಯಕ್ರಮಗಳು ನಡೆಯಲಿವೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...