Friday, December 5, 2025
Friday, December 5, 2025

Chamber of Commerce Shivamogga ವರ್ತಕರು ಕಡ್ಡಾಯವಾಗಿ ಕಾರ್ಮಿಕ ಇಲಾಖೆಯ ಪರವಾನಗಿ ಪಡೆದಿರಬೇಕು- ಎನ್.ಗೋಪಿನಾಥ್

Date:

Chamber of Commerce Shivamogga ವಾಣಿಜ್ಯ ಉದ್ದಿಮೆ, ವ್ಯವಹಾರ ನಡೆಸುತ್ತಿರುವ ವರ್ತಕರು ಕಾರ್ಮಿಕ ಇಲಾಖೆಯಿಂದ ಕಡ್ಡಾಯವಾಗಿ ಕಾರ್ಮಿಕ ಪರವಾನಗಿ ಪಡೆದುಕೊಳ್ಳಬೇಕು ಎಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಹೇಳಿದರು.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಕಾರ್ಮಿಕ ಇಲಾಖೆಯ ಸಹಯೋಗದಲ್ಲಿ ಕೈಗಾರಿಕಾ ಸಂಘದ ಶಾಂತಲಾ ಸ್ಪೇರೋಕಾಸ್ಟ್ ಸಭಾಂಗಣದಲ್ಲಿ ಆಯೋಜಿಸಿದ್ದ ಲೇಬರ್ ಲೈಸೆನ್ಸ್ ಮೇಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವರ್ತಕರಿಗೆ ಅನುಕೂಲ ಒದಗಿಸುವ ದೃಷ್ಠಿಯಿಂದ ಹಾಗೂ ವರ್ತಕರ ಸಮಸ್ಯೆಗಳನ್ನು ಕಾರ್ಮಿಕ ಇಲಾಖೆ ಸಹಯೋಗದಲ್ಲಿ ಪರಿಹರಿಸಿಕೊಳ್ಳುವ ಆಶಯದಿಂದ ಇಂತಹ ಮೇಳಗಳು ಸಹಕಾರಿ ಆಗುತ್ತವೆ. ವರ್ತಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಮಿಕ ನಿರೀಕ್ಷಕಿ ಸುಖಿತಾ ಮಾತನಾಡಿ, ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ನೊಂದಣಿ ಕಡ್ಡಾಯವಾಗಿದ್ದು, ಡಿಸೆಂಬರ್ 4 ಮತ್ತು 5ರಂದು ಎರಡು ದಿನಗಳ ಕಾಲ ನಡೆಯುವ ಲೇಬರ್ ಲೈಸೆನ್ಸ್ ಮೇಳದ ಸದುಪಯೋಗ ಪಡೆದುಕೊಳ್ಳಬೇಕು. ವರ್ತಕರಿಗೆ, ಉದ್ಯಮಿಗಳಿಗೆ ಅಗತ್ಯವಾಗಿ ಬೇಕಾಗಿರುವ ಕಾರ್ಮಿಕ ಪರವಾನಗಿ (ಲೇಬರ್ ಲೈಸೆನ್ಸ್) ಅನ್ನು ಮೇಳದಲ್ಲಿ ಪಡೆದುಕೊಳ್ಳಬಹುದಾಗಿದೆ ಎಂದು ಹೇಳಿದರು.

ಕಾರ್ಮಿಕ ನೀರಿಕ್ಷಕ ಭೀಮೇಶ್ ಮಾತನಾಡಿ, ಎಲ್ಲಾ ಅಂಗಡಿ, ವಾಣಿಜ್ಯ ಸಂಸ್ಥೆಗಳ ಮಾಲಿಕರು ಸಂಸ್ಥೆಯ ಅಗತ್ಯ ದಾಖಲೆಗಳೊಂದಿಗೆ ಪೂರ್ಣ ವಿವರ ಸಲ್ಲಿಸಿ ಮತ್ತು ಫೀ ಪಾವತಿಸಲು ಮೊಬೈಲ್ ಜೊತೆ ಆಗಮಿಸಿ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ಆನ್ ಲೈನ್ ಮುಖಾಂತರವು ಲೈಸೆನ್ಸ್ ಪಡೆಯಬಹುದಾಗಿದೆ ಎಂದು ತಿಳಿಸಿದರು.

Chamber of Commerce Shivamogga ಗಾಂಧಿಬಜಾರ್ ವರ್ತಕರ ಸಂಘದ ಅಧ್ಯಕ್ಷ ವಿಜಯ ದಿನಕರ್, ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಬಿ.ಗೋಪಿನಾಥ್, ಕಾರ್ಯದರ್ಶಿ ವಸಂತ ಹೋಬಳಿದಾರ್, ಸಹ ಕಾರ್ಯದರ್ಶಿ ಜಿ.ವಿಜಯ್ ಕುಮಾರ್, ಗಣೇಶ್ ಅಂಗಡಿ, ಪರಮೇಶ್ವರ್, ರಾಕೇಶ್ ಸಾಕ್ರೆ, ಉದ್ಯಮಿಗಳು, ವರ್ತಕರು ಹಾಗೂ ಸಂಘದ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...