BJP NewDelhi ಪಂಚರಾಜ್ಯಗಳ ಚುನಾವಣೆ ಫಲಿತಾಂಶ ಬಿಜೆಪಿ ಪಾಲಿಗೆ ಸಂಭ್ರಮ ತಂದಿದೆ.
ಭಾನುವಾರ ಪ್ರಕಟವಾದ ನಾಲ್ಕು ರಾಜ್ಯಗಳ ಫಲಿತಾಂಶದ ಪೈಕಿ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಬಿಜೆಪಿಗೆ ಅಧಿಕಾರ ಒಲಿದಿದೆ.
ಮಧ್ಯಪ್ರದೇಶ್
ಒಟ್ಟು 230 ಸ್ಥಾನಗಳು.
ಬಿಜೆಪಿ …163
ಕಾಂಗ್ರೆಸ್..66
ಇತರೆ…….._1
ರಾಜಾಸ್ತಾನ್
ಒಟ್ಟು 199 ಸ್ಥಾನಗಳು.
ಬಿಜೆಪಿ…115
ಕಾಂಗ್ರೆಸ್..69
ಇತರೆ….14
ಛತ್ತೀಸ್ ಗಢ
ಒಟ್ಟು 90 ಸ್ಥಾನಗಳು.
ಬಿಜೆಪಿ….54
ಕಾಂಗ್ರೆಸ್..35
ಇತರೆ ……1
ತೆಲಂಗಾಣ
ಒಟ್ಟು 119 ಸ್ಥಾನಗಳು.
ಕಾಂಗ್ರೆಸ್..64
ಬಿಆರ್ ಎಸ್..39
ಬಿಜೆಪಿ ..8
ಇತರೆ…7
BJP NewDelhi 2018ರ ಪಂಚರಾಜ್ಯ ಚುನಾವಣೆಯಲ್ಲಿ 3 ರಾಜ್ಯಗಳಲ್ಲಿ ಕಾಂಗ್ರೆಸ್ ಗೆಲುವು ಕಂಡು ಬಿಜೆಪಿ ಮುಖಭಂಗ ಅನುಭವಿಸಿತ್ತು.
ಸರಿಯಾಗಿ 5 ವರ್ಷಗಳ ಬಳಿಕ ಮತದಾರ ಬಿಜೆಪಿಗೆ 3 ರಾಜ್ಯಗಳ ಗೆಲುವು ನೀಡಿ, ಕಾಂಗ್ರೆಸ್ ಅನ್ನು ‘ಒಂಟಿ’ ಮಾಡಿದ್ದಾನೆ. 2024ರ ಸಾರ್ವತ್ರಿಕ ಚುನಾವಣೆಯ ಹಿನ್ನೆಲೆಯಲ್ಲಿ ಈ ಫಲಿತಾಂಶ ಮಹತ್ವ ಪಡೆದಿದ್ದು, ಬಿಜೆಪಿ ಈ ಗೆಲುವನ್ನು ‘ಹ್ಯಾಟ್ರಿಕ್’ ಗೆಲುವು ಎಂದು ಬಣ್ಣಿಸಿದೆ.
ನಾಲ್ಕು ರಾಜ್ಯಗಳ ಪೈಕಿ ಮೂರರಲ್ಲಿ ಬಿಜೆಪಿ ಗೆಲುವು ಸಾಧಿಸುವುದರೊಂದಿಗೆ ದೇಶದಲ್ಲಿ ಬಿಜೆಪಿ ಆಡಳಿತದ ರಾಜ್ಯಗಳ ಸಂಖ್ಯೆ 12ಕ್ಕೆ ಏರಿದೆ .
2018ರಲ್ಲಿ ಇದೆ ಐದು ರಾಜ್ಯಗಳಿಗೆ ಚುನಾವಣೆ ನಡೆದಾಗ ಕಾಂಗ್ರೆಸ್ ಆಡಳಿತ ಮೂರರಿಂದ ಐದು ರಾಜ್ಯಕ್ಕೆ ಜಿಗಿತ ಕಂಡಿತ್ತು. ಎರಡು ರಾಜ್ಯಗಳು ಬಿಜೆಪಿಯಿಂದ ಕಾಂಗ್ರೆಸ್ ಪಾಲಾಗಿದ್ದವು .
ಒಂದು ಲಕ್ಷ 5 ಸಾವಿರ ಮತಗಳ ದಾಖಲೆ ಅಂತರದಿಂದ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಗೆಲುವು ಸಾಧಿಸಿದ್ದಾರೆ.