World Navy Day ಪ್ರತಿ ವರ್ಷ ಡಿ.4ರಂದು ವಿಶ್ವ ನೌಕಾಪಡೆಯ ದಿನವನ್ನಾಗಿ ಆಚರಿಸಲಾಗುತ್ತದೆ.
ನೌಕಾಪಡೆಯ ಮಹತ್ವ ಮತ್ತು ವೀರಮರಣ ಹೊಂದಿದ ಯೋಧರನ್ನು ಸ್ಮರಿಸುವ ಉದ್ದೇಶದಿಂದ ನೌಕಾಪಡೆಯ ದಿನವನ್ನು ಆಚರಿಸಲಾಗುತ್ತದೆ.
ಭಾರತೀಯ ಜಲಗಡಿಗಳಲ್ಲಿ ದೇಶ ಕಾಯುವ ಯೋಧರನ್ನು ಸ್ಮರಿಸುವ ಉದ್ದೇಶ ಈ ದಿನದ ಹಿಂದಿದೆ.
1971ರ ಡಿಸೆಂಬರ್ ರಂದು ಭಾರತ ಹಾಗೂ ಪಾಕಿಸ್ತಾನ ನಡುವಿನ ಯುದ್ಧದ ಸಮಯದಲ್ಲಿ ಕರಾಚಿ ಗಡಿಯಲ್ಲಿ ಭಾರತೀಯ ನೌಕಪಡೆಯ ಯೋಧರು ಕೆಚ್ಚೆದೆಯ ದೇಶಕ್ಕಾಗಿ ಹೋರಾಡಿದ್ದರು.
ಆಪರೇಷನ್ ಟ್ರೈಡೆಂಟ್ ಹೆಸರಿನ ಈ ಕಾರ್ಯಾಚರಣೆಯಲ್ಲಿ ಹಲವರು ವೀರಮರಣ ಹೊಂದಿದ್ದರು. ಅಂದು ಹೋರಾಡಿದ ಕೆಚ್ಚೆದೆಯ ವೀರಯೋಧರನ್ನು ಸ್ಮರಿಸುವ ಉದ್ದೇಶದಿಂದ ಭಾರತೀಯ ನೌಕಾಪಡೆಯ ದಿನವನ್ನು ಆಚರಿಸಲಾಗುತ್ತದೆ.
ಡಿಸೆಂಬರ್ 3 ರಂದು ಪಾಕಿಸ್ತಾನವು ಭಾರತದ ಜಲಗಡಿಗಳಲ್ಲಿ ಆಕ್ರಮಣ ಮಾಡಲು ಆರಂಭಿಸಿತ್ತು. ಆ ಸಮಯದಲ್ಲಿ ಭಾರತೀಯ ನೌಕಾಯೋಧರು ಧೈರ್ಯದಿಂದ ಹೋರಾಡಿ ಪಾಕಿಸ್ತಾನದ ನಾಲ್ಕು ಹಡುಗುಗಳನ್ನು ಹೊಡೆದುರುಳಿಸಿದರು.
ಭಾರತೀಯ ಸೇನೆ ಆಪರೇಷನ್ ಟ್ರೈಡೆಂಟ್ ಹೆಸರಿನ ಕಾರ್ಯಾಚರಣೆಯಲ್ಲಿ ಪಿಎನ್‌ಎಸ್ ಖೈಬರ್ ಸೇರಿದಂತೆ ನಾಲ್ಕು ಪಾಕಿಸ್ತಾನಿ ಹಡುಗುಗಳನ್ನು ಧೈರ್ಯದಿಂದ ಮುಳುಗಿಸಿತ್ತು. ಈ ಸಂದರ್ಭದಲ್ಲಿ ಹಲವರು ಪ್ರಾಣ ಕಳೆದುಕೊಂಡಿದ್ದರು.
ದೇಶ ರಕ್ಷಣೆಯ ವಿಚಾರದಲ್ಲಿ ನೌಕಾಪಡೆಯ ಕೊಡುಗೆಗಳ ಬಗ್ಗೆ ಜಾಗೃತಿ ಮೂಡಿಸುವುದು ಈ ದಿನದ ಉದ್ದೇಶವಾಗಿದೆ.
ಈ ದಿನದಂದು ಯುದ್ಧನೌಕೆಗಳು ಹಾಗೂ ವಿಮಾನಗಳ ಎಕ್ಸಿಬಿಷನ್ ನಡೆಯುತ್ತದೆ. ಸಾರ್ವಜನಿಕರು ಕೂಡ ಇವುಗಳನ್ನು ಕಣ್ತುಂಬಿಕೊಳ್ಳಬಹುದಾಗಿದೆ.
ಭಾರತದ ನೌಕಾಪಡೆಯು ದೇಶದ ಕರಾವಳಿ ತೀರ, ಸಮುದ್ರ ಗಡಿಯನ್ನು ಶತ್ರುಗಳಿಂದ ರಕ್ಷಣೆ ಮಾಡುವುದರ ಜತೆಗೆ ಬೇರೆ ದೇಶಗಳ ಜತೆ ಬಂದರು ಭೇಟಿ, ಜಂಟಿ ಕವಾಯತು, ವಿಪತ್ತು ಪರಿಹಾರ ಮುಂತಾದ ರೀತಿಯಲ್ಲಿ ಅಂತಾರಾಷ್ಟ್ರೀಯ ಸಂಬಂಧವನ್ನು ವೃದ್ಧಿಸುವ ಕೆಲಸ ಮಾಡುತ್ತಿದೆ.
World Navy Day ಭಾರತದ ನೌಕಾಪಡೆಯು 67,252 ಸಿಬ್ಬಂದಿ, 75,000 ಮೀಸಲು ಸಿಬ್ಬಂದಿ, 150 ಶಿಪ್‌ಗಳನ್ನೂ ಹೊಂದಿದೆ.
2022ರ ಲೆಕ್ಕದ ಪ್ರಕಾರ ಭಾರತದ ನೌಕಾಪಡೆಯು 2 ವಿಮಾನ ವಾಹಕಗಳನ್ನು, 8 ಲ್ಯಾಂಡಿಂಗ್ ಶಿಪ್ ಟ್ಯಾಂಕ್‌ಗಳು, 11, ನಿರ್ದೇಶಿತ ವಿಧ್ವಂಸಕ ಕ್ಷಿಪಣಿಗಳು, 19 ಕಾರ್ವೆಟ್‌ಗಳು, 19 ಸಾಂಪ್ರದಾಯಿಕ ಜಲಾಂತರ್ಗಾಮಿಗಳು, 2 ಪರಮಾಣು ದಾಳಿಯ ಜಲಾಂತರ್ಗಾಮಿ, 30 ಗಸ್ತು ಹಡಗುಗಳು, 5 ಫ್ಲೀಟ್ ಟ್ಯಾಂಕರ್‌ಗಳು ಸೇರಿದಂತೆ ಹಲವು ಬಗೆಯ ಹಡಗುಗಳು, ಯುದ್ಧ ನೌಕೆಗಳು, ನೌಕಾ ವಾಹನಗಳನ್ನೂ ಹೊಂದಿದೆ.
ನೌಕಾಪಡೆಯ ಸೇವೆ ಅನನ್ಯವಾಗಿದೆ.
