Vidhana Sabha Elecetion ತೀರ್ಥಹಳ್ಳಿಯಲ್ಲಿ ಇಂದು ಬಿಜೆಪಿ ಕಾರ್ಯಕರ್ತರ ಪಾಲಿಗೆ ಸಂಭ್ರಮದ ದಿನ. ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶದಲ್ಲಿ ಮೂರು ರಾಜ್ಯಗಳಲ್ಲಿ ಬಿಜೆಪಿ ಅತ್ಯುತ್ತಮ ಲೀಡ್ ನಲ್ಲಿ ಇದೆ. ಇಂಡಿಯನ್ ಅಲೆಯನ್ಸ್ ನೆಲ ಕಚ್ಚುತ್ತಿದೆ. ಗ್ಯಾರೆಂಟಿ ನೀಡಿದರು ಜನ ಒಪ್ಪದೇ ಕಾಂಗ್ರೆಸ್ ಗೆ ತಪರಾಕಿ ಹೊಡೆದಿದ್ದಾರೆ ಎಂದು ಮಾಜಿ ಗೃಹಸಚಿವ, ಶಾಸಕರಾದ ಆರಗ ಜ್ಞಾನೇಂದ್ರ ಹೇಳಿದರು.
ಪಂಚರಾಜ್ಯಗಳ ಚುನಾವಣಾ ಫಲಿತಾಂಶದಲ್ಲಿ ಮೂರು ರಾಜ್ಯ ಬಿಜೆಪಿ ಪರವಾಗಿ ಬಂದಿದ್ದ ಕಾರಣ ತೀರ್ಥಹಳ್ಳಿಯಲ್ಲಿ ಕಾರ್ಯಕರ್ತರ ಜೊತೆ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು ತೆಲಂಗಾಣದಲ್ಲಿ ಕರ್ನಾಟಕದ ಹಣವನ್ನು ತೆಗೆದುಕೊಂಡು ಹೋಗಿ ಸುರಿದು ಇಲ್ಲಿನ ನಾಯಕರು ಅಲ್ಲಿ ಪ್ರಚಾರ ಮಾಡಿ ಮಾಡಬಾರದ ಅನೈತಿಕ ಕೆಲಸವನ್ನು ಈ ಚುನಾವಣೆಯಲ್ಲಿ ಮಾಡಿದ್ದರಿಂದ ಸ್ವಲ್ಪ ಕಾಂಗ್ರೆಸ್ ಮುನ್ನಡೆ ಪಡೆದಿದೆ. ಇಲ್ಲದಿದ್ದರೆ ಬಿಆರ್ ಎಸ್ ಗೆಲ್ಲುವ ಪರಿಸ್ಥಿತಿ ಇತ್ತು ಎಂದರು.
ಛತ್ತಿಸ್ ಘಡ ದಲ್ಲಿ ಅತಂತ್ರ ಎನ್ನುವ ಸಮೀಕ್ಷೆ ಬಂದಿತ್ತು. ಆದರೆ ಊಹೆಗೂ ನಿಲುಕದ ಮತದಾರನ ತೀರ್ಪು ಹೊರ ಬೀಳುತ್ತಿದೆ.ಅದು ಬಿಜೆಪಿ ಪರವಾಗಿ ಬೀಳುತ್ತಿದೆ. ದೇಶ ಮೊದಲು ಎನ್ನುವ ತತ್ವದ ಪರವಾಗಿ ಬೀಳುತ್ತಿರುವುದು ನಾವೆಲ್ಲ ಹೆಮ್ಮೆ ಪಡುವ ವಿಷಯ. ಇಡೀ ದೇಶದಲ್ಲಿ ಅತೀ ದೊಡ್ಡ ರಾಜ್ಯಗಳಾದ ರಾಜಸ್ತಾನ್ ಹಾಗೂ ಮಧ್ಯಪ್ರದೇಶ ದಲ್ಲಿ ಅಭೂತ ಪೂರ್ವ ಬೆಂಬಲ ಗಳಿಸಿದೆ.
ತೆಲಂಗಾಣದಲ್ಲೂ ನಮ್ಮ ಮತ ಇಮ್ಮಡಿಯಾಗಿದೆ, ಅಷ್ಟೇ ಅಲ್ಲದೆ ಇದು 2024 ರ ಲೋಕಸಭಾ ಚುನಾವಣೆಯ ಮುನ್ಸೂಚನೆ ಎಂದರು.
Vidhana Sabha Elecetion ಈ ಚುನಾವಣೆಯನ್ನು ಸೆಮಿಫೈನಲ್ ಎಂದು ಹೇಳಲಾಗುತ್ತಿತ್ತು. ಇದರಲ್ಲಿ ಗೆದ್ದಿದ್ದೇವೆ, ಖಂಡಿತವಾಗಿ ಫೈನಲ್ ಮೋದಿಯದ್ದೆ, ಮೋದಿ ಫೈನಲ್ ನಲ್ಲಿ ಗೆಲುವು ಪಡೆಯುತ್ತಾರೆ ಎನ್ನುವ ಸಂದೇಶ ಹಾಗೂ ವಿಶ್ವಾಸ ಈ ಐದು ರಾಜ್ಯಗಳ ಜನ ವ್ಯಕ್ತಪಡಿಸಿದ್ದಾರೆ. ತೀರ್ಥಹಳ್ಳಿಯಿಂದ ಕೂಡ ಮುಂದಿನ ಲೋಕಸಭೆಯಲ್ಲಿ ಗೆಲ್ಲಿಸೋಣ, ಮೋದಿಯವರ ಕೈ ಬಲಪಡಿಸೋಣ. ಶತಮಾನಗಳ ಕಾಲ ಆಡಳಿತ ನೆಡೆಸಿದ್ದ ಕಾಂಗ್ರೆಸ್ ಇಂದು ಸಾಧನೆ ಹೇಳಿಕೊಳ್ಳಲು ನಾಚಿಕೆಪಟ್ಟು ಗೆಲ್ಲಲು ಗ್ಯಾರೆಂಟಿ ಮೊರೆ ಹೋಗುತ್ತಿದೆ, ಇದಕ್ಕೆ ಜನ ತಕ್ಕ ಉತ್ತರ ನೀಡಿದ್ದಾರೆ ಎಂದರು.