Sahyadri Narayana Multi Specialty Hospital ಸಹ್ಯಾದ್ರಿ ನಾರಾಯಣಾ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಶಂಕರ ಕಣ್ಣಿನ ಆಸ್ಪತ್ರೆ, ಯೂನಿಟಿ ಆಸ್ಪತ್ರೆ ಶಿವಮೊಗ್ಗ, ಭದ್ರಾವತಿ ತಾಲ್ಲೂಕು ಆರೋಗ್ಯ ಕೇಂದ್ರ ಮತ್ತು ಮಂಗೋಟ್ಟೆ ಗ್ರಾಮಪಂಚಾಯಿತಿ ಇವರುಗಳ ಸಹಯೋಗದಲ್ಲಿ ಭದ್ರಾವತಿ ತಾಲ್ಲೂಕಿನ ಮಂಗೋಟ್ಟೆ ಗ್ರಾಮದಲ್ಲಿ ಸಾಮಾಜಿಕ ಸಾಂಸ್ಥಿಕ ಹೊಣೆಗಾರಿಕೆ ಕಾರ್ಯಕ್ರಮದ ಅಡಿಯಲ್ಲಿ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು ಸಾಮಾನ್ಯ ಆರೋಗ್ಯ, ಹೃದಯ, ಕಣ್ಣಿನ, ಮೂಳೆ, ದಂತ, ಮಕ್ಕಳ ಮತ್ತು ಸ್ತ್ರೀರೋಗ ಚಿಕಿತ್ಸೆಯ ತಪಾಸಣೆಯನ್ನು ಮತ್ತು ಉಚಿತ ಔಷಧಿಯ ವಿತರಣೆಯನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮವನ್ನು ವಿಐಎಸ್ ಎಲ್ ಕಾರ್ಯಪಾಲಕ ನಿರ್ದೇಶಕರಾದ ಶ್ರೀ ಬಿ.ಎಲ್. ಚಂದ್ವಾನಿ, ಉದ್ಘಾಟಿಸಿದರು, ಈ ಸಂದರ್ಭದಲ್ಲಿ ಶ್ರೀ ಕೆ.ಎಸ್. ಸುರೇಶ್, ಮುಖ್ಯ ಮಹಾಪ್ರಬಂಧಕರು (ಸ್ಥಾವರ), ಶ್ರೀಮತಿ ಶೋಭಶಿವಶಂಕರನ್, ಮಹಾಪ್ರಬಂಧಕರು (ಹಣಕಾಸು) ಹಾಗೂ ಶ್ರೀಮತಿ ಎಮ್.ಆರ್. ಶೃತಿ, ಅಧ್ಯಕ್ಷರು, ಮಂಗೊಟ್ಟೆ ಗ್ರಾಮ ಪಂಚಾಯಿತಿ, ಡಾ|| ಸುಜೀತ್ ಕುಮಾರ್, ಮುಖ್ಯ ವೈಧ್ಯಾಧಿಕಾರಿ, ಶ್ರೀ ಎಸ್.ಎನ್. ಸುರೇಶ್, ವೈಧ್ಯಾಧಿಕಾರಿಗಳು, ಶ್ರೀ ನವೀನ್ ರಾಹುಲ್, ಹಿರಿಯ ಪ್ರಬಂಧಕರು (ಸಿಬ್ಬಂದಿ) ಶ್ರೀಮತಿ ಕೆ.ಎಸ್. ಶೋಭ, ಸಹಾಯಕ ಪ್ರಬಂಧಕರು (ಸಿಬ್ಬಂದಿ), ಸಹ್ಯಾದ್ರಿ ನಾರಾಯಣ ಹೃದಯಾಲಯದ ಹಾಗೂ ಶಂಕರ ಕಣ್ಣಿನ ಆಸ್ಪತ್ರೆ, ಯೂನಿಟಿ ಆಸ್ಪತ್ರೆ ಡಾ|| ಅಶೋಕ್ ಮತ್ತು ಡಾ|| ಜಗದೀಶ್ ಪಾಟೀಲ್, ಭದ್ರಾವತಿ ತಾಲ್ಲೂಕು ವೈಧ್ಯಕೀಯ ತಂಡ ಮತ್ತು ಮಂಗೊಟ್ಟೆ ಗ್ರಾಮಪಂಚಾಯಿತಿಯ ಸದಸ್ಯರು ಉಪಸ್ಥಿತರಿದ್ದರು.
Sahyadri Narayana Multi Specialty Hospital ಆಸ್ಪತ್ರೆಯ ತಜ್ಞರಾದ ಡಾ|| ಕೆ.ಎಸ್. ಸುಜೀತ್ ಕುಮಾರ್ ಮತ್ತು ಡಾ|| ಎಸ್.ಎನ್. ಸುರೇಶ್, ಸಾಮಾನ್ಯ ಆರೋಗ್ಯ ಮತ್ತು ದಂತ ಸಮಸ್ಯೆಗಳ ಬಗ್ಗೆ ಸಲಹೆಯನ್ನು ನೀಡಿದರು. ಶ್ರೀಮತಿ ಅಪರ್ಣ, ಶ್ರೀ ಟಿ.ಎನ್. ಕೃಷ್ಣ, ಶ್ರೀ ಅಲೆನ್ ಜುಡೊ ಪಿಂಟೊ, ಶ್ರೀ ಮಧುಕರ್, ಶ್ರೀ ಶಿವು, ಶ್ರೀಮತಿ ಅನಿತ, ಮತ್ತು ಶ್ರೀ ಆರ್. ಮಂಜುನಾಥ್ ಸಹಕರಿಸಿದರು.
ಶಂಕರ ಕಣ್ಣಿನ ಆಸ್ಪತ್ರೆಯ ತಜ್ಞರಾದ ಡಾ|| ಬೃಂದಾ, ಶ್ರೀ ಶಾಹಿಮ್, ಕು. ಅರ್ಪಿತ, ಮತ್ತು ಶ್ರೀ ಮಹೇಶ್ ರಾಯ್ಕರ್ ನೇತ್ರ ಪರೀಕ್ಷೆಗಳನ್ನು ನಡೆಸಿ ನೇತ್ರ ಆರೈಕೆಯ ಬಗ್ಗೆ ಸಲಹೆಯನ್ನು ನೀಡಿದರು.