Saturday, December 6, 2025
Saturday, December 6, 2025

Female Foeticide ಹೆಣ್ಣು ಭ್ರೂಣಹತ್ಯೆ ವಿರೋಧಿಸಿ ಹೊನ್ನಾಳಿ ಚನ್ನೇಶ್ ಪಾದಯಾತ್ರೆ ಸ್ತುತ್ಯರ್ಹ- ಎಚ್.ಕೆ.ವಿವೇಕಾನಂದ

Date:

Female Foeticide ಹೆಣ್ಣು ಭ್ರೂಣ ಹತ್ಯೆ ಮತ್ತು ಹೊನ್ನಾಳಿಯ ಚನ್ನೇಶ್ ಎಂ. ಜಕ್ಕಾಳಿಯವರ ದೆಹಲಿ ಪಾದಯಾತ್ರೆ……

ರಾಜ್ಯದಲ್ಲಿ ಹೆಣ್ಣು ಭ್ರೂಣ ಹತ್ಯೆ ಪ್ರಕರಣಗಳು ವರದಿಯಾಗಿ ಅದರ ಬಗ್ಗೆ ವ್ಯಾಪಕವಾಗಿ ಚರ್ಚೆಗಳು ಆರಂಭವಾಗಿರುವ ಈ ಸಂದರ್ಭದಲ್ಲಿ ವ್ಯಕ್ತಿಯೊಬ್ಬರು ಇದೇ ವಿಷಯವನ್ನು ಕೇಂದ್ರವಾಗಿಟ್ಟುಕೊಂಡು ಕನ್ಯಾಕುಮಾರಿಯಿಂದ ದೆಹಲಿಯವರೆಗೆ ಪಾದಯಾತ್ರೆ ಪ್ರಾರಂಭಿಸಿದ್ದಾರೆ. ಅವರೇ ಕರ್ನಾಟಕದ ದಾವಣಗೆರೆ ಜಿಲ್ಲೆಯ ಹೊನ್ನಾಳಿಯ ಆತ್ಮೀಯ ಗೆಳೆಯರಾದ ಶ್ರೀ ಚನ್ನೇಶ್ ಎಂ ಜಕ್ಕಾಳಿ……

ಸುಮಾರು 44 ವರ್ಷ ವಯಸ್ಸಿನ ಇವರು ಇದೇ ವರ್ಷದ ಸೆಪ್ಟೆಂಬರ್ 24 ರಂದು ಭಾರತದ ದಕ್ಷಿಣದ ತುದಿ ಕನ್ಯಾಕುಮಾರಿಯಿಂದ ಪಾದಯಾತ್ರೆ ಪ್ರಾರಂಭಿಸಿದ್ದಾರೆ. …

ಈ ಪಾದಯಾತ್ರೆಯ ಮೂಲ ಉದ್ದೇಶ
ಹೆಣ್ಣು ಭ್ರೂಣ ಹತ್ಯೆ ನಿಯಂತ್ರಣ ಮತ್ತು ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ತಾಯಿ ಭ್ರೂಣಕ್ಕೆ ಅಥವಾ ಗರ್ಭಿಣಿಯರಿಗೆ ಡಿಜಿಟಲ್ ಕೋಡ್ ನೀಡಬೇಕು ಎಂಬುದು. ಅದರಿಂದಾಗಿ
ಮಕ್ಕಳ ಲೆಕ್ಕ ಸಿಗುತ್ತದೆ.
ತಾಯಿ ಭ್ರೂಣದಿಂದ ಮಣ್ಣು ಸೇರುವವರೆಗೆ ಮಾಹಿತಿ ಇರುತ್ತದೆ……

ಚನ್ನೇಶ್ ಅವರು ಈಗಾಗಲೇ ಹಲವಾರು ವರ್ಷಗಳಿಂದ ಈ ಬಗ್ಗೆ ಕೇಂದ್ರ ಸರ್ಕಾರದ ಮಟ್ಟದಲ್ಲಿ ಸಾಕಷ್ಟು ಹೋರಾಟಗಳನ್ನು ಮಾಡಿಕೊಂಡು ಬಂದಿದ್ದಾರೆ. ಆದರು ಯಾವುದೇ ಹೆಚ್ಚಿನ ಪ್ರಗತಿಯಾಗಿಲ್ಲ. ಈ ಬಾರಿ ವಿವಿಧ ರಾಜ್ಯಗಳಲ್ಲಿ ಸಂಚರಿಸಿ ಸುಮಾರು 3000 ಕಿಲೋಮೀಟರ್ ಕ್ರಮಿಸಿ‌ ಡಿಸೆಂಬರ್ 10 ರಂದು ದೆಹಲಿ ತಲುಪುವ ನಿರೀಕ್ಷೆ ಇದೆ. ಅಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ವಿವರಿಸಲು ಸಮಯ ನಿಗದಿಗಾಗಿ ಪರಿಚಯಿಸಿದರ ಸಹಕಾರದಿಂದ ಪ್ರಯತ್ನಿಸುತ್ತಿದ್ದಾರೆ……

ಇಷ್ಟೊಂದು ಆಧುನಿಕತೆ ಬೆಳೆದು, ಜನರಿಗೆ ತಿಳಿವಳಿಕೆ ಮೂಡಿ, ಮಹಿಳೆಯರಿಗೆ ರಾಜಕೀಯದಲ್ಲಿ 33% ಮೀಸಲಾತಿ ಒದಗಿಸಿದ ನಂತರವೂ ಹೆಣ್ಣು ಭ್ರೂಣ ಹತ್ಯೆಯ ದೊಡ್ಡ ಜಾಲಗಳೇ ಕೆಲಸ ಮಾಡುತ್ತಿವೆ ಎಂದರೆ ಹೆಣ್ಣಿನ ಹುಟ್ಟಿನ ಬಗ್ಗೆ ಸಮಾಜದಲ್ಲಿ ಯಾವ ರೀತಿಯ ಕೀಳರಿಮೆ ಇದೆ ಎಂಬುದು ನಮಗೆ ಮನವರಿಕೆಯಾಗುತ್ತದೆ…

Female Foeticide ಮೊದಲಿಗಿಂತ ಈಗಿನ ಪರಿಸ್ಥಿತಿ ಉತ್ತಮವಾಗಿದೆ ಎಂಬುದು ನಿಜ, ಆದರೆ ಸಂಪೂರ್ಣ ತೊಡೆದು ಹಾಕಲು ಸಾಧ್ಯವಾಗಲಿಲ್ಲ ಎಂಬ ವಿಫಲತೆಯನ್ನು ಮರೆಯಬಾರದು. ಚನ್ನೇಶ್ ಅವರನ್ನು ಈ ಬಗ್ಗೆ ಮಾತನಾಡಿಸಿದಾಗ ಒಮ್ಮೆ ಭ್ರೂಣದ ದಾಖಲಾತಿಯಾಗಿ ಡಿಜಟಲೀಕರಣವಾದರೆ ಹುಟ್ಟಿನ ನಂತರ ಸಹಜವಾಗಿಯೇ ಅದಕ್ಕೆ ಆಧಾರ್ ಸಹಿತ ಎಲ್ಲಾ ದಾಖಲೆಗಳನ್ನು ಅದರ ಆಧಾರದ ಮೇಲೆಯೇ ದಾಖಲು ಮಾಡಬಹುದು. ಆ ಭ್ರೂಣ ಗಂಡು ಅಥವಾ ಹೆಣ್ಣಾಗಿ ಮಣ್ಣು ಸೇರಿವವರೆಗೂ ಒಂದೇ ಐಡೆಂಟಿಟಿ ಇರುತ್ತದೆ. ಜನಸಂಖ್ಯೆ ಅಥವಾ ಇನ್ಯಾವುದೇ ಮಾಹಿತಿ ಸುಲಭವಾಗಿ ಸಿಗುತ್ತದೆ ಮತ್ತು ಅನೇಕ ಯೋಜನೆಗಳನ್ನು ಅದರ ಆಧಾರದ ಮೇಲೆಯೇ ರೂಪಿಸಬಹುದು…..

ಈಗ ಹುಟ್ಟಿನ ನಂತರ ದಾಖಲೆ ಸೃಷ್ಟಿಸಲಾಗುತ್ತದೆ. ಭ್ರೂಣದಲ್ಲಿಯೇ ಆದರೆ ಭ್ರೂಣ ಹತ್ಯೆಯನ್ನು ಸುಲಭವಾಗಿ ಪತ್ತೆ ಹಚ್ಚಬಹುದು. ಹೇಗೆಂದರೆ, ತಾಯಿಯ ಭ್ರೂಣ ದಾಖಲಾದರೆ ಮುಂದೆ ಅದು ಮಗುವಾಗಲೇ ಬೇಕು. ಬೇರೆ ವೈದ್ಯಕೀಯ ಕಾರಣದಿಂದಾಗಿ ಭ್ರೂಣ ನಾಶವಾದರೆ ಅದಕ್ಕೆ ಸೂಕ್ತ ಕಾರಣವಿರುತ್ತದೆ. ಅದನ್ನು ಹೊರತುಪಡಿಸಿ ಭ್ರೂಣ ಮಗುವಾಗದಿದ್ದರೆ ಅದನ್ನು ಹತ್ಯೆ ಎಂದೇ ಪರಿಗಣಿಸಬಹುದು ಎಂಬುದು ಲೆಕ್ಕಾಚಾರ…..

ಭ್ರೂಣವನ್ನು ಯಾವ ಹಂತದಲ್ಲಿ ದಾಖಲು ಮಾಡಬೇಕು ಎಂಬುದನ್ನು ವೈದ್ಯಕೀಯ ಕ್ಷೇತ್ರ ನಿರ್ಧರಿಸಬೇಕು. ಅದರ ಪಾಲನೆ ಪೋಷಣೆ ಬೆಳವಣಿಗೆಯನ್ನು ನಿರಂತರವಾಗಿ ದಾಖಲಿಸಬೇಕು. ತಾಯಿಯ ಹೊಟ್ಟೆಯಲ್ಲಿ ಇರಬೇಕಾದರೆಯೇ ದೇಹದ ಅಂಗಾಂಗಗಳ ಕಾರ್ಯನಿರ್ವಾಹಣೆಯ ಮಾಹಿತಿಯೂ ದಾಖಲಾಗಿರುತ್ತದೆ….

ಇದು ಒಂದಷ್ಟು ಸಲಹೆಗಳು ಮಾತ್ರ. ವಿವಿಧ ಹಂತಗಳ ಚರ್ಚೆಯಲ್ಲಿ ಇದರ ಸಾಧಕ ಬಾಧಕಗಳನ್ನು ಕುರಿತು ಮತ್ತಷ್ಟು ಆಳವಾಗಿ ಅಧ್ಯಯನ ಮಾಡಿ ಕಾನೂನು ರೂಪಿಸಬಹುದು..

ಏನೇ ಆಗಲಿ ನಮ್ಮ ಕನ್ನಡದ ಯುವಕರೊಬ್ಬರ ಈ ಕಾಳಜಿ ಮತ್ತು ಸಾಹಸಕ್ಕೆ ಅವರಿಗೆ ಹೃದಯ ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತಾ….

ನಮ್ಮ ಮಾಧ್ಯಮಗಳು ಈ‌ ರೀತಿಯ ವಿಷಯಗಳಿಗೆ ತೋರುವ ದಿವ್ಯ ನಿರ್ಲಕ್ಷ್ಯಕ್ಕೆ ಅವರನ್ನು ಶಪಿಸುತ್ತಾ……

ಈಗ ಬಹುತೇಕ ದೆಹಲಿಯ ಸಮೀಪ ಈ ತೀವ್ರ ಚಳಿಯಲ್ಲಿ ಪಾದಯಾತ್ರೆ ‌ಮುಂದುವರಿಸುತ್ತಿರುವ ಚನ್ನೇಶ್ ಅವರನ್ನು ಸಂಪರ್ಕಿಸಲು ಅವರ ಮೊಬೈಲ್ ಸಂಖ್ಯೆ…
+91 80731 03680……

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,

ಲೇಖಕ: ವಿವೇಕಾನಂದ ಎಚ್ ಕೆ,

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...