Saturday, September 28, 2024
Saturday, September 28, 2024

Kanakadasa Jayanthi ನಾನೆಂಬುದಳಿದರೆ ಮೋಕ್ಷ-ಕನಕದಾಸರ ಸಂದೇಶ

Date:

Kanakadasa Jayanthi ಭಕ್ತಿ ಪಂಥದ ಹರಿದಾಸರಲ್ಲಿ
ಶ್ರೇಷ್ಠ ಹರಿದಾಸರು
ಶ್ರೀ ಕನಕದಾಸರು
ಹರಿದಾಸರ ಪಂಕ್ತಿಯಲ್ಲಿ ಶ್ರೇಷ್ಠ ಹರಿದಾಸರ ಸಾಲಿಗೆ ಸೇರಿದ ಶ್ರೀ
ಕನಕದಾಸರ ಜಯಂತಿ ಇದೇ ತಿಂಗಳ 30ರಂದು ಆಚರಿಸಲಾಗುತ್ತದೆ.

ಇವರು ಶ್ರೀ ವ್ಯಾಸರಾಯರ ಪರಮಾಪ್ತ ಶಿಷ್ಯರು. ಶ್ರೀ ವ್ಯಾಸರಾಯ
ಗುರುಗಳಿ೦ದ ಅ೦ಕಿತ ಪಡೆದ ಹರಿದಾಸರು ಕನಕದಾಸರು.
ಪ್ರಹ್ಲಾದರಾಜರು ಹೇಗೆ ತನ್ನ ತಂದೆಯಾದ ಹಿರಣ್ಯಕಶಿಪುವಿಗೆ ದೇವರು
ಎಲ್ಲ ಕಡೆಯೂ ಇದ್ದಾನೆಎಂಬುದನ್ನು ತೋರಿಸಿಕೊಟ್ಟರೋ ಹಾಗೆಯೇ
ಕನಕದಾಸರೂ ಕೂಡ ಲೋಕಕ್ಕೆ ದೇವರಿಲ್ಲದ ಜಾಗವೇ ಇಲ್ಲಎಂದು
ಮನವರಿಕೆ ಮಾಡಿಕೊಟ್ಟ ಮಹಾನುಭಾವರು.
ಅವರು ಕಡಲ ತಡಿಯಲ್ಲಿರುವ
ಉಡುಪಿ ಕ್ಷೇತ್ರಕ್ಕೆ ಬಂದಾಗ
ಕೃಷ್ಣದೇವರು ಅವರ ಭಕ್ತಿಗೆ
ಓಗೊಟ್ಟು ಕಿಂಡಿಯಲ್ಲಿ ದರ್ಶನ
ಕೊಡುತ್ತಾನರೆ. ಕನಕದಾಸರಿಗೆ
ಶ್ರೀಕೃಷ್ಣ ದರ್ಶನ ಕೊಟ್ಟ ಕಿಂಡಿಯು
`ಕನಕನ ಕಿ೦ಡಿ” ಎಂದೇ ಹೆಸರು
ಪಡೆದಿದೆ. ಇವರು ಆನೇಕ
ಕೀರ್ತನೆಗಳನ್ನು,
ಉಗಾಭೋಗಗಳನ್ನು
ಮುಂಡಿಗೆಗಳನ್ನು ರಚಿಸಿದ್ದಾರೆ.

ಇವರು ರಚಿಸಿರುವ ಐದು
ಮುಖ್ಯ ಕಾವ್ಯ ಕೃತಿಗಳೆಂದರೆ ಮೋಹನ ತರಂಗಿಣಿ, ನಳಚರಿತ್ರೆ, ರಾಮ
ಧಾನ್ಯ ಚರಿತೆ, ಹರಿಭಕ್ತಿಸಾರ, ಮೋಹನ ತರಂಗಿಣಿ ಮತ್ತು ನರಸಿಂಹಸ್ತವ.
ಕೇಶವನಾಮದ “ಈಶ ನಿನ್ನ ಚರಣ ಭಜನೆ ‘ಎಂಬ ಕೀರ್ತನೆಯೂ ಇವರ
ರಚನೆಯಾಗಿದೆ.
ಕನಕದಾಸರು ಸಂಗೀತ ಕ್ಷೇತ್ರಕ್ಕೆ ಕೊಟ್ಟಿರುವ ಕೊಡುಗೆ
ಅನನ್ಯವಾದುದು. ಶ್ರೀ ವ್ಯಾಸರಾಯರು, ಶ್ರೀ ವಾದಿರಾಜರು, ಶ್ರೀ
ಕೃಷ್ಣದೇವರಾಯ, ಶ್ರೀ ಪುರಂದರದಾಸರು, ಶ್ರೀ ವೈಕುಂಠದಾಸರ
ಸಮಕಾಲೀನರು ಶ್ರೀ ಕನಕದಾಸರು. ಇವರ ಜನ್ಮನಾಮ ತಿಮ್ಮಪ್ಪ
ನಾಯಕನೆಂದು. ತನ್ನ ಚಿಕ್ಕ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡು
ತಾಯಿಯಿಂದಲೇ ಪೋಷಿಸಲ್ಪಟ್ಟು ಕತ್ತಿವರಸೆ, ಬೇಟೆ, ಕಲಿತು
ಪಾಳೇಗಾರರಾಗಿದ್ದರು.

Kanakadasa Jayanthi ವಿಜಯನಗರ ರಾಜರ ಸಂಸ್ಥಾನದಲ್ಲಿ ಕಾರ್ಯ
ನಿರ್ವಹಿಸುತ್ತಿದ್ದರು. ಒಮ್ಮೆ ಇವರ ನೇತೃತ್ವದಲ್ಲಿ ಭೂಮಿಯನ್ನು
ಅಗೆಯುತ್ತಿದ್ದಾಗ ಅಲ್ಲಿ ಭಾರೀ ಬಂಗಾರದ ನಿಧ ಸಿಕ್ಕಿತು. ಆದ್ದರಿಂದ
ತಿಮ್ಮಪ್ಪ ಕನಕಪ್ಪನಾಗುತ್ತಾನೆ. ಕಾಗಿನೆಲೆಯಲ್ಲಿ ಶ್ರೀಆದಿಕೇಶವ ಸ್ವಾಮಿಯ
ದೇವಸ್ಥಾನ ಕಟ್ಟಿಸುತ್ತಾರೆ.

ಶ್ರೀ ಆದಿಕೇಶವನು ಅವರ ಕನಸಿನಲ್ಲಿ ಹಲವಾರು ಸಾರಿ ಬಂದು ನನ್ನ
ದಾಸನಾಗು ಎಂದರೂ ಇವರ ಮನಸ್ಸು ಒಪ್ಪಿರಲಿಲ್ಲ. ಅವರ ಹೆಂಡತಿ
ಮತ್ತು ತಾಯಿ ತೀರಿಕೊಂಡಾಗಲೂ ಅವರಿಗೆ ವೈರಾಗ್ಯ ಬಂದಿರಲಿಲ್ಲ.
ಒಮ್ಮೆ ತಿಮ್ಮಪ್ಪನಾಯಕರು ವಿಜಯನಗರ ಸಾಮ್ರಾಜ್ಯದ ಪರವಾಗಿ
ಯುದ್ಧ ಮಾಡುತ್ತಿದ್ದಾಗ, ಶತೃಪಡೆಯಿಂದ ಇವರಿಗೆ ಭಾರೀ
ಆಘಾತವಾಯಿತು. ಕೈಯಲ್ಲಿ ಹಿಡಿದ ಕತ್ತಿಯೂ ಕೆಳಗೆ ಬಿತ್ತು. ಬಹಳವಾಗಿ
ಏಟು ಬಿದ್ದದ್ದರಿಂದ ರಕ್ತಸ್ರಾವವಾಗುತ್ತಿತ್ತು. ಶತೃ ಪಡೆಯವರು ಇವರು
ಮೂರ್ಛ ಹೋಗಿದ್ದನ್ನು ನೋಡಿ ಸತ್ತೇ ಹೋಗಿರಬಹುದೆಂದು ಊಹಿಸಿ
ಹೊರಟು ಹೋಗುತ್ತಾರೆ. ಆಗ ಆದಿಕೇಶವ ಸ್ವಾಮಿಯು ಒಬ್ಬ ಸಾಮಾನ್ಯ
ಮನುಷ್ಯನ ವೇಷದಲ್ಲಿ ಬಂದು ಇವನ ಆರೈಕೆ ಮಾಡಿ ಹೋಗುತ್ತಾನೆ. ಆಗ
ಕನಕಪ್ಪನಿಗೆ ತಾನು ಉಳಿದದ್ದು ಆದಿಕೇಶವನ ಅನುಗ್ರಹದಿಂದ ಎಂದು
ತಿಳಿದು ಪೂರ್ಣ ವೈರಾಗ್ಯ ತಾಳುತ್ತಾನೆ. ಆದಿಕೇಶವನು ಇವನ ಕನಸಿನಲ್ಲಿ
ಶ್ರೀವ್ಯಾಸರಾಯರ ಬಳಿ ಹೋಗಿ ಹರಿದಾಸ ದೀಕ್ಷೆ ಪಡೆಯುವಂತೆ
ಸೂಚಿಸುತ್ತಾನೆ.

ಸ್ವಪ್ನಸೂಚನೆಯಂತೆ ಕನಕಪನು ಶ್ರೀವ್ಯಾಸರಾಯರನ್ನು
ಭೇಟಿಯಾಗಿ ಅವರಿಂದ ದಾಸ
ದೀಕ್ಷೆಯನ್ನು ಪಡೆದು, ಕನಕದಾಸರೆಂದಾಗುತ್ತಾರೆ. ಇವರ ಅಂಕಿತ
ಆದಿಕೇಶವ, ಕನಕದಾಸರು ಚಿನ್ನದ ಬದುಕಿಗೆ ದಾಸರಾಗದೆ ಎಲ್ಲ
ಮೋಹವನ್ನೂ ತ್ಯಾಗಮಾಡಿ ಶ್ರೀ ಕೃಷ್ಣ ಪರಮಾತ್ಮನನ್ನೇ ಒಲಿಸಿಕೊಂಡ
ಅಪ್ಪಟ ಚಿನ್ನವಾದವರು. ನುಡಿದಂತೆ ನಡೆ ಇದೇ ಜನ್ಮ ಕಡೆ ,ಬಾಗಿ ನಡೆದರೆ
ಬಾಳು ಬಂಗಾರ ನಾನು ನೀನು ಎನ್ನದಿರು ಹೀನಮಾನವ. “ನಾನು”
ಹೋದರೆ ಹೋದೇನು. ಎಂದರೆ ನಾನು ನನ್ನದು ಎಂಬ ಅಹಂಕಾರ
ಹೋಗಬೇಕು ಎಂಬುದು ದಾಸರ ಅಭಿಪ್ರಾಯ. ತಮ್ಮ ಜೀವನದ
ಅನುಭವ ಮತ್ತು ಅನುಭಾವಗಳ ಮೂಲಕ ನಡೆ-ನುಡಿಗಳೊಂದಿಗೆ
ಸಾಮಾಜಿಕ, ವೈಚಾರಿಕ, ಆಧ್ಯಾತ್ಮಿಕ, ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಸಮಾಜ
ತಿದ್ದುವ ಕೈಂಕರ್ಯವನ್ನು ತಿದ್ದುವ ಕೆಲಸ ಮಾಡಿದವರು ಶ್ರೀ ಕನಕದಾಸರು.
ಶ್ರೀ ಕನಕದಾಸರ ಜಯಂತಿಯಂದು, ಶ್ರೀದಾಸರ ಸ್ಮರಣೆಮಾಡಿ, ಭಕ್ತಿಯ
ನಮನಗಳನ್ನು ಸಲ್ಲಿಸೋಣ.

ಲೇ: ಎನ್.ಜಯಭೀಮ್ ಜೋಯ್

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Sri Adhichunchanagiri Mahasamsthana Math ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ನವರಾತ್ರಿ ಸಂಭ್ರಮ

Sri Adhichunchanagiri Mahasamsthana Math ಶರನ್ನವರಾತ್ರಿ ಉತ್ಸವದ ಪ್ರಯುಕ್ತ ಪ್ರತಿ ವರ್ಷದಂತೆ...

Department of Fisheries ಮತ್ಸ್ಯಸಂಪದ ಮತ್ತು ನೀಲಿಕ್ರಾಂತಿ ಯೋಜನೆಯಡಿ ಅರ್ಜಿ ಆಹ್ವಾನ

Department of Fisheries ಮೀನುಗಾರಿಕೆ ಇಲಾಖೆಯು 2022-23 ರಿಂದ 2024-25 ನೇ...

National Open Athletic Championship ಬಿಹಾರದ ಓಪನ್ ಅಥ್ಲೇಟಿಕ್‌ನಲ್ಲಿ ಶಿವಮೊಗ್ಗ ಜಿಲ್ಲೆಯ ಕ್ರೀಡಾಪಟು

National Open Athletic Championship ಬಿಹಾರದ ಪಾಟ್ನದಲ್ಲಿ ಸೆ. 28 ರಿಂದ...

Bhadravati Police ಅನಾಮಧೇಯ ಗಂಡಸ್ಸಿನ ಶವ ಪತ್ತೆ

Bhadravati Police ಭದ್ರಾವತಿ ಶಿವಪುರ ಗ್ರಾಮದಲ್ಲಿ ಭದ್ರಾ ಬಲದಂಡೆ ನಾಲೆಯಲ್ಲಿ ಸುಮಾರು...