Thursday, March 19, 2026
Thursday, March 19, 2026

B. Y. Vijayendra ಮತ್ತೆ ಮೋದೀಜಿ ಪ್ರಧಾನಿ: ರಾಜ್ಯದಲ್ಲಿ 28 ಕ್ಕೆ 28 ಲೋಕಸಭಾ ಸ್ಥಾನ ಗೆಲುವು ನಮ್ಮ ಗುರಿ- ಬಿ.ವೈ.ವಿಜಯೇಂದ್ರ

Date:

B. Y. Vijayendra “ಮತ್ತೆ ಮೋದಿ ಜೀ
ನಮ್ಮ ಸಂಕಲ್ಪ-28ಕ್ಕೆ 28 ಬಿಜೆಪಿ ಗುರಿ”
ಶಿವಮೊಗ್ಗದ ಪ್ರೇರಣಾ ಸಭಾಂಗಣದಲ್ಲಿ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದ ಬೃಹತ್ ಸಮಾರಂಭವನ್ನು ಬಿಜೆಪಿ ರಾಜ್ಯಾಧ್ಯಕ್ಷರಾದ ಬಿವೈ ವಿಜಯೇಂದ್ರ ಅವರು ಉದ್ಘಾಟಿಸಿ ಮಾತನಾಡಿದರು.

ರಾಷ್ಟ್ರದ ರಾಜಕೀಯ ಭೂಪಟದಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತರಿಸುವ ನಿಟ್ಟಿನಲ್ಲಿ ಭಾರತೀಯ ಜನತಾ ಪಾರ್ಟಿಗೆ ದಕ್ಷಿಣ ಭಾರತದಲ್ಲಿ ಹೆಬ್ಬಾಗಿಲು ತೆರೆದೆಕೊಡುವಲ್ಲಿ ಗಟ್ಟಿಅಡಿಪಾಯ ಹಾಕಿಕೊಟ್ಟಿದ್ದು ನಮ್ಮ ಶಿವಮೊಗ್ಗ ಜಿಲ್ಲೆ. ಶಿವಪ್ಪ ನಾಯಕರ ಇತಿಹಾಸ ಹಿನ್ನೆಲೆಯ ಈ ನೆಲದಲ್ಲಿ ನಿಂತು, ಇವತ್ತು ನನಗೆ ದೊರೆತಿರುವ ಈ ಜವಾಬ್ದಾರಿಯನ್ನು ನಾನು ಸಾಮಾನ್ಯ ಕಾರ್ಯಕರ್ತ ಎಂಬ ಭಾವನೆಯಿಂದ ಕಾರ್ಯಕರ್ತರ ಜೊತೆಗೂಡಿ ಯಶಸ್ವಿಯಾಗಿ ನಿರ್ವಹಿಸಬೇಕೆಂಬ ಸಂಕಲ್ಪ ತೊಟ್ಟಿದ್ದೇನೆ. ಸನ್ಮಾನ್ಯ ಪ್ರಧಾನಿ ಮೋದಿಯವರ ಸಮರ್ಥ ಆಡಳಿತ ಹಾಗೂ ದೇಶ ಕಟ್ಟುವ ಕಾರ್ಯ ಸಮರೋಪಾದಿಯಲ್ಲಿ ಸಾಗಿದೆ, ಅವರು ಮಗದೊಮ್ಮೆ ಈ ದೇಶದ ಪ್ರಧಾನಿಯಾಗಬೇಕಾಗಿರುವುದು ಈ ರಾಷ್ಟ್ರದ ಸುರಕ್ಷತೆಯಿಂದ ಅತ್ಯಂತ ಅನಿವಾರ್ಯವಾಗಿದೆ ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಕಾರ್ಯಕರ್ತರೂ ವಿರಮಿಸದೇ ಶ್ರಮಿಸುವ ಸಂಕಲ್ಪ ತೊಡಬೇಕೆಂಬ ಕರೆ ನೀಡಲಾಯಿತು ಎಂದು ಹೇಳಿದರು.

ಈ ಸಂಧರ್ಭದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಶ್ರೀ. Bs ಯಡಿಯೂರಪ್ಪ
, ಮಾಜಿ ಸಚಿವರಾದ ಶ್ರೀ. ಕೆ.ಎಸ್ ಈಶ್ವರಪ್ಪ
, ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಟಿ ಡಿ ಮೇಘರಾಜ್, ಸಂಸದರಾದ ಶ್ರೀ. B.Y. ಯಡಿಯೂರಪ್ಪ, ತೀರ್ಥಹಳ್ಳಿ
ಶಾಸಕರುಗಳಾದ ಶ್ರೀ ಅರಗ ಜ್ಞಾನೇಂದ್ರ, ಶ್ರೀ ಚೆನ್ನಬಸಪ್ಪ, ವಿಧಾನ ಪರಿಷತ್ ಸದಸ್ಯರುಗಳಾದ ಶ್ರೀ ರುದ್ರೇಗೌಡ, ಶ್ರೀಮತಿ ಭಾರತಿ ಶೆಟ್ಟಿ, ಶ್ರೀ ಡಿ.ಎಸ್.ಅರುಣ್, ಮಾಜಿ ಶಾಸಕರುಗಳಾದ ಶ್ರೀ ಕೆ ಬಿ ಅಶೋಕ್ ನಾಯ್ಕ್, ಶ್ರೀ ಹರತಾಳು ಹಾಲಪ್ಪ, ಪ್ರಕೋಷ್ಠಗಳ ರಾಜ್ಯ ಸಂಯೋಜಕರಾದ ಶ್ರೀ ಭಾನುಪ್ರಕಾಶ್,
B. Y. Vijayendra ಪಕ್ಷದ ಹಿರಿಯ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Channabasappa “ಸಹ್ಯಾದ್ರಿ ಉತ್ಸವ” ಕ್ಕೆ ಸರ್ಕಾರವು ಮತ್ತೆ ಚಾಲನೆ ನೀಡಲು ಒತ್ತಾಯಿಸುತ್ತೇನೆ- ಶಾಸಕ ಎಸ್.ಎನ್. ಚನ್ನಬಸಪ್ಪ

S.N. Channabasappa ಶಿವಮೊಗ್ಗ ಜಿಲ್ಲೆಯ ಸಮೃದ್ಧ ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಯನ್ನು...

Madhu Bangarappa ಎಸ್ಎಸ್ಎಲ್ ಸಿ ಪರೀಕ್ಷಾರ್ಥಿಗಳಿಗೆ ಶುಭ ಹಾರೈಸಿದ ಸಚಿವ ಮಧು ಬಂಗಾರಪ್ಪ

Madhu Bangarappa ರಾಜ್ಯಾದ್ಯಂತ ಇಂದಿನಿಂದ 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1...

Jawahar Navodaya Vidyalaya ಕುಂದಗಸವಿಯ ಎಂ.ಎನ್.ಅಪೂರ್ವ ನವೋದಯ ವಿದ್ಯಾಲಯಕ್ಕೆ ಆಯ್ಕೆ

Jawahar Navodaya Vidyalaya ಜವಾಹರ ನವೋದಯ ವಿದ್ಯಾಲಯ ನಡೆಸುವ ಪ್ರಸಕ್ತ ಸಾಲಿನ...