Kannada Rajyotsava ಕನ್ನಡ ನಾಡು ಹಾಗೂ ಭಾಷೆಯ ಪರಂಪರೆಗೆ ವಿಶಿಷ್ಟ ಹಿನ್ನೆಲೆಯಲ್ಲಿದೆ. ಕವಿ, ದಾಸರು ಸೇರಿದಂತೆ ಅನೇಕ ಮಹನೀಯರ ಶ್ರಮದಿಂದ ಕನ್ನಡ ಭಾಷೆ ಎಲ್ಲೆಡೆ ಪಸರಿಸಲು ಸಾಧ್ಯವಾಗಿದೆ ಎಂದು ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಟಿ.ರಾಜಶೇಖರ್ ಹೇಳಿದರು.
ಚಿಕ್ಕಮಗಳೂರು ನಗರದ ಕೆಂಪನಹಳ್ಳಿ ಸಮೀಪ ಬೀರಲಿಂಗೇಶ್ವರ ಆಟೋ ನಿಲ್ದಾಣದಲ್ಲಿ ಕನ್ನಡಸೇನೆ ವತಿಯಿಂದ ಏರ್ಪ ಡಿಸಿದ್ದ 68ನೇ ಕನ್ನಡ ರಾಜ್ಯೋತ್ಸವ ಹಾಗೂ ಕನಕ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಧ್ವಜಾರೋಹಣ ನೆರವೇರಿಸಿ ಬುಧವಾರ ಅವರು ಮಾತನಾಡಿದರು.
ಕೃತಿ, ವಚನಗಳ ಮೂಲಕ ಕವಿಸಂತರು ನಾಡಿನ ಪರಂಪರೆಯನ್ನು ಪುಸ್ತಕದಲ್ಲಿ ಪ್ರಕಟಿಸಿದ್ದು. ಇವುಗಳ ಅಭ್ಯಾಸಿಸದೇ ಇಂದಿನ ಯುವಪೀಳಿಗೆ ಕೇವಲ ಮೋಜುಮಸ್ತಿ ಜೀವನದಲ್ಲಿ ಪಯಣಿಸುತ್ತಿದೆ. ಇದರಿಂದ ಹೊರ ಬಂದು ನಾಡಿನ ಇತಿಹಾಸವನ್ನು ತಿಳಿಸುವ ಪುಸ್ತಕವನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದು ಹೇಳಿದರು.
ಭಾಷೆಯ ಬೆಳವಣಿಗೆ ಪ್ರತಿಯೊಬ್ಬ ಕನ್ನಡಿಗನು ಶ್ರಮವಹಿಸುವ ಅಗತ್ಯವಿದೆ. ಇತ್ತೀಚೆಗೆ ಬೆಂಗಳೂರಿನ ಮಹಾ ನಗರಗಳಲ್ಲಿ ಕನ್ನಡ ನಶಿಸುವಂತಹ ಹಂತಕ್ಕೆ ತಲುಪಿದೆ. ಕನ್ನಡದಲ್ಲಿ ವ್ಯವಹರಿಸಿದರೆ ಅವಮಾನವಾಗಲಿದೆ ಎಂಬ ಮನೋಭಾವ ಮೂಡುತ್ತಿದೆ. ಅದಲ್ಲದೇ ಬೆಂಗಳೂರು ಪ್ರಥಮ ಬಾರಿ ತೆರಳುವವರು ಹೊರದೇಶದಲ್ಲಿದ್ದೇವೆ ಎಂಬ ಭಾವನೆ ಮೂಡುತ್ತಿದೆ ಎಂದರು.
ಕನ್ನಡ ಸೇನೆ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ ಮಾತನಾಡಿ ಸೇನೆ ರಾಜ್ಯಾಧ್ಯಕ್ಷ ಕೆ.ಆರ್.ಕುಮಾರ್ ಆದೇಶದ ಅನ್ವಯ ಇಡೀ ರಾಜ್ಯಾದ್ಯಂತ ಕನ್ನಡ ರಾಜ್ಯೋತ್ಸವ ಆಚರಿಸಲಾಗುತ್ತಿದೆ. ಅದೇ ರೀತಿಯಲ್ಲಿ ಚಿಕ್ಕಮಗಳೂರಿನಲ್ಲೂ ಕನ್ನಡ ಸೇನೆ ವಿವಿಧ ಆಟೋ ಸಂಘಗಳ ಜೊತೆಗೂಡಿ ತಿಂಗಳಾತ್ಯದವರೆಗೂ ಕನ್ನಡ ಕಂಪನ್ನು ನಾಗರೀಕರಿಗೆ ಮುಟ್ಟಿ ಸುವ ಕರ್ತವ್ಯ ನಿಭಾಯಿಸುತ್ತಿದೆ ಎಂದರು.
ರಾಜ್ಯದಲ್ಲಿ ಕನ್ನಡ ಧ್ವನಿಯಾಗಿ ಆಟೋ ಸಂಘಗಳು ಅನೇಕ ಜನಪರ ಕಾರ್ಯಕ್ರಮ ರೂಪಿಸಿ ಮುನ್ನೆಡೆಯು ತ್ತಿದೆ. ಜೊತೆಗೆ ನಾಡು, ನುಡಿಗೆ ಧಕ್ಕೆಯುಂಟಾದ ಸಂದರ್ಭದಲ್ಲಿ ಮೊದಲ ಸಾಲಿನಲ್ಲಿ ಹೋರಾಟಕ್ಕೆ ಮುಂದಾಗು ತ್ತಿರುವುದು ಅವರ ಭಾಷಾಭಿಮಾನ ತೋರ್ಪಡಿಸುತ್ತದೆ ಎಂದು ಹೇಳಿದರು.
Kannada Rajyotsava ಬಿಜೆಪಿ ಮಹಿಳಾ ಮೋರ್ಚಾದ ಮುಖಂಡರಾದ ಪಲ್ಲವಿ ಸಿ.ಟಿ.ರವಿ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಕನ್ನಡ ಭಾಷೆ ಮಾತನಾಡಿದರೆ ಅವಮಾನ ಎಂಬoತೆ ಕೆಲವರು ಭಾವಿಸಲಾಗುತ್ತಿದೆ. ಕನ್ನಡ ಎಂದರೆ ಸಾವಿರಾರು ವರ್ಷ ಗಳು ಹಿಂದೆ ನಮ್ಮ ಪೂರ್ವಿಕರು ಉಳಿಸಿ ಬೆಳೆಸಿದಂತಹ ಭಾಷೆ. ಇದನ್ನು ಹೊರತುಪಡಿಸಿ ಆಂಗ್ಲವ್ಯಾಮೋಹಕ್ಕೆ ಒಳಗಾಬಾರದು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಬಳಿಕ ಆಶಾಕಿರಣ ಅಂಧಮಕ್ಕಳ ಶಾಲೆಯ ಮಕ್ಕಳಿಂದ ಕನ್ನಡಗೀತಾ ಗಾಯನ ಹಾಗೂ ಮನರಂಜನಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ನಗರಸಭಾ ಉಪಾಧ್ಯಕ್ಷ ಅಮೃತೇಶ್ ಚೆನ್ನಕೇಶವ, ಪತ್ರಕರ್ತರಾದ ಪಿ.ರಾಜೇಶ್, ಅನಿಲ್‌ಆನಂದ್, ಕನ್ನಡಸೇನೆ ಆಟೋ ಘಟಕದ ಅಧ್ಯಕ್ಷ ಜಯಪ್ರಕಾಶ್, ಉಪಾಧ್ಯಕ್ಷ ಸತೀಶ್‌ಶೆಟ್ಟಿ, ವಕ್ತಾರ ಕಳವಾಸೆ ರವಿ, ಮುಖಂಡರಾದ ವಿನಯ್, ನಿಸಾರ್ ಅಹ್ಮದ್, ಶಾಹೀದ್, ಸತೀಶ್, ಲಕ್ಷ್ಮಣ್, ಹರೀಶ್, ಅಶೋಕ್, ಟೋನಿ, ಹೇಮಂತ್, ನವೀನ್, ಪ್ರವೀಣ್ ಮತ್ತಿತರರು ಉಪಸ್ಥಿತರಿದ್ದರು.