Friday, November 22, 2024
Friday, November 22, 2024

Amrita Yojana ಅಮೃತ ಯೋಜನೆಯಲ್ಲಿ ಅವ್ಯವಹಾರ: ಸೂಕ್ತ ತನಿಖೆಗೆ ಒತ್ತಾಯ

Date:

Amrita Yojana ಅಮೃತ ಯೋಜನೆಯಡಿಯಲ್ಲಿ ನಡೆದಿರುವ ನೂರಾರು ಕೋಟಿ ಅವ್ಯವ ಹಾರದ ಕಾಮಗಾರಿಯನ್ನು ಪತ್ತೆಹಚ್ಚಿ ಸೂಕ್ತ ತನಿಖೆ ನಡೆಸಬೇಕು ಎಂದು ನಗರಸಭಾ ಮಾಜಿ ಅಧ್ಯಕ್ಷ ಮುನೀರ್ ಅಹ್ಮದ್ ಅವರು ನ್ಯಾಯಮೂರ್ತಿ ಹೆಚ್.ಎಸ್.ನಾಗಮೋಹನ್‌ದಾಸ್‌ಗೆ ಒತ್ತಾಯಿಸಿದ್ದಾರೆ.

ಈ ಸಂಬoಧ ಪತ್ರಿಕಾ ಹೇಳಿಕೆ ನೀಡಿರುವ ಅವರು ಅವ್ಯವಹಾರ ಸಂಬoಧ ನ್ಯಾಯಮೂರ್ತಿಗಳಿಗೆ ಅಂಚೆ ಮೂಲಕ ಅರ್ಜಿ ಸಲ್ಲಿಸಲಾಗಿದ್ದು ಕಾಮಗಾರಿ ಉಲ್ಲೇಖ ಸಂಬAಧ ಮೂರು ವರ್ಷಕ್ಕೆ ಗುತ್ತಿಗೆ ತೆಗೆದುಕೊಂಡಿದ್ದರೂ ಏಳು ವರ್ಷವಾದರೂ ಕಾಮಗಾರಿ ಮುಗಿಸದೇ ಇರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ ಎಂದಿದ್ದಾರೆ.

ಇಷ್ಟೆಲ್ಲಾ ಸಮಯ ಬಳಸಿಕೊಂಡಿರುವುದು ಗಮನಿಸಿದರೆ ಮೇಲ್ನೋಟಕ್ಕೆ ಅವ್ಯವಹಾರ ನಡೆದಿರುವುದು ಸ್ಪಷ್ಟ ವಾಗಿ ಕಂಡುಬರುತ್ತಿದೆ. ಯೋಜನೆಗೆ ಇರಿಸಿದ ಅನುದಾನ ಬಹುತೇಕ ಬಿಡುಗಡೆಯಾಗಿದ್ದರೂ ಚಿಕ್ಕಮಗಳೂರು ನಗರದಲ್ಲಿ ಯಾವ ಭಾಗದಲ್ಲಿ ಸಮರ್ಪಕವಾಗಿ ನೀರು ಸರಬರಾಜಾಗುತ್ತಿಲ್ಲ. ಇದರಿಂದ ಸಾರ್ವಜನಿಕರ ಹಣ ದುರುಪಯೋಗಪಡಿಸಿ ಕೊಂಡಿರುವುದು ಸ್ಪಷ್ಟವಾಗಿದೆ ಎಂದು ಹೇಳಿದ್ದಾರೆ.

ಕಾಮಗಾರಿಯ ಯೋಜನೆಗೆ ಸಂಬoಧಿಸಿದoತೆ ಯಾವ ಹಂತದ ಕೆಲಸವೂ ಸ್ಥಳಪರಿಶೀಲನೆ ನಡೆಸಿದರೂ ಅಂದುಕೊoಡoತೆ ನಡೆದಿಲ್ಲ. ಕೇವಲ ಕಾಗದಪತ್ರಗಳಲ್ಲಿ ಯೋಜನೆ ಜಾರಿಯಾಗಿದೆ ಹೊರತು ಸಾರ್ವಜನಿಕರಿಗೆ ಸೌಲಭ್ಯ ದೊರೆಯದೇ ಅನುದಾನ ಮೊತ್ತ ನೀರಿನಂತೆ ಹರಿದು ಪಟ್ಟಭದ್ರ ಹಿತಾಸಕ್ತಿಗೆ ಸೇರಿಸುತ್ತಿರುವುದು ವಿಪ ರ್ಯಾಸ ಎಂದಿದ್ದಾರೆ.

Amrita Yojana ಕೂಡಲೇ ನ್ಯಾಯಾಮೂರ್ತಿಗಳು ಚಿಕ್ಕಮಗಳೂರು ನಗರದಲ್ಲಿ ಅಮೃತ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳನ್ನು ಪರಿಶೀಲನೆ ನಡೆಸಬೇಕು. ಸಂಬoಧಿಸಿದ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಂಡು ಸಾರ್ವಜನಿ ಕರ ತೆರಿಗೆ ಹಣಕ್ಕೆ ತಡೆಹಿಡಿಯಬೇಕು ಎಂದು ಒತ್ತಾಯಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Department of Cooperation ಹಿರಿಯ ಸಹಕಾರಿ ಧುರೀಣ ಕೊಪ್ಪದ ಎಸ್.ಎನ್.ವಿಶ್ವನಾಥ್ ಗೆ ‘ ಸಹಕಾರಿ ರತ್ನ’ ಪ್ರಶಸ್ತಿ.

Department of Cooperation ಕರ್ನಾಟಕ ಸರ್ಕಾರದ ಕರ್ನಾಟಕ ಸಹಕಾರ ಮಹಾಮಂಡಲ ದ...

Kasturba Girls Junior College ಮಕ್ಕಳ ಪ್ರತಿಭೆ ಅನಾವರಣಗೊಳಿಸುವ ಪ್ರತಿಭಾ ಕಾರಂಜಿಗೆ ಇನ್ನಷ್ಟು ಶಕ್ತಿ ತುಂಬೋಣ- ಶಾಸಕ ಚನ್ನಬಸಪ್ಪ

Kasturba Girls Junior College ವೈವಿಧ್ಯತೆಯನ್ನು ಹೊಂದಿರುವ ನಮ್ಮ ರಾಷ್ಟ್ರದ ಸಂಸ್ಕೃತಿಯನ್ನು...