Monday, December 15, 2025
Monday, December 15, 2025

Debate Competition ವಿದ್ಯಾರ್ಥಿಗಳು ಬಾಲ್ಯದಿಂದಲೇ ಮಾತೃಭಾಷೆಗೆ ಪ್ರಾಧಾನ್ಯತೆ ನೀಡಬೇಕು- ಸೂರಿ ಶ್ರೀನಿವಾಸ್

Date:

Debate Competition ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಯ ಜೊತೆಗೆ ಚರ್ಚಾಸ್ಪರ್ಧೆಗಳಲ್ಲಿ ಹೆಚ್ಚು ಮುತುವರ್ಜಿ ಭಾಗವಹಿಸಿದರೆ ಭವಿಷ್ಯದ ಜೀವನದಲ್ಲಿ ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳಲು ಸಾಧ್ಯ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಹೇಳಿದರು.

ಚಿಕ್ಕಮಗಳೂರಿನ ಜ್ಯೋತಿನಗರ ಸಮೀಪದ ಮಲೆನಾಡು ವಿದ್ಯಾಸಂಸ್ಥೆ ಪ್ರಾಯೋಗಿಕ ಪ್ರೌಢಶಾಲೆ ಸಹಯೋಗದಲ್ಲಿ ಮಂಗಳ ವಾರ ಬಿಇಡಿ ಕಾಲೇಜು ಸಭಾಂಗಣದಲ್ಲಿ ಏರ್ಪಡಿಸಿದ್ದ ನಗರ ಮಟ್ಟದ ಅಂತರ ಪ್ರೌಢಶಾಲಾ ಚರ್ಚಾ ಸ್ಪರ್ಧೆಯ ನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಚರ್ಚಾಸ್ಪರ್ಧೆ ಸೇರಿದಂತೆ ಬರ‍್ಯಾವುದೇ ಸ್ಪರ್ಧೆಗಳಲ್ಲಿ ಭಾಗವಹಿಸಿದರೆ ಕೇವಲ ಬಹುಮಾನಕ್ಕೆ ಮಾತ್ರ ಸೀಮಿ ತರಾಗ ಕೂಡದು. ಸ್ಪರ್ಧೆಗಳಲ್ಲಿ ಪಡೆದುಕೊಂಡ ಅನುಭವ ಹಾಗೂ ತಿಳಿಯದ ಪ್ರಶ್ನೆಗಳ ಕಲಿಕೆಗೆ ಅನುಕೂಲ ವಾಗಲಿದ್ದು ಹೆಚ್ಚು ಆಸಕ್ತಿಯಿಂದ ಪಾಲ್ಗೊಂಡು ಯಶಸ್ಸು ಗಳಿಸಬೇಕು ಎಂದು ಸಲಹೆ ಮಾಡಿದರು.

ವಿದ್ಯಾರ್ಥಿದೆಸೆಯಿಂದಲೇ ಮಕ್ಕಳು ಚರ್ಚಾಸ್ಪರ್ಧೆಯ ವಿಷಯಗಳ ಬಗ್ಗೆ ಹೆಚ್ಚು ಅಭ್ಯಾಸಿಸಬೇಕು. ಇದರಿಂದ ಭವಿಷ್ಯದ ಎಂತಹ ಸವಾಲುಗಳನ್ನು ಬಂದರೂ ಎದುರಿಸುವ ಆತ್ಮಸೆüöÊರ್ಯ ಮೂಡಲಿದೆ ಎಂದ ಅವರು ಒಂದು ಕಲ್ಲಿಗೆ ಹಲವಾರು ಏಟುಗಳು ತಿಂದು ವಿಗ್ರಹವಾಗುವ ರೀತಿಯಲ್ಲಿ ವಿದ್ಯಾರ್ಥಿಗಳು ಶತತ ಪ್ರಯತ್ನದಿಂದ ಮಾತ್ರ ಉತ್ತಮ ಹೆಸರು ಸಂಪಾದಿಸಬಹುದು ಎಂದರು.

ನವೆAಬರ್ ತಿಂಗಳು ಮಾತ್ರ ಕನ್ನಡಾಭಿಮಾನ ತೋರುವ ತಿಂಗಳಾಗದೇ ಬರವಣಿಗೆ, ಕನ್ನಡ ಪುಸ್ತಕ ಓದುವ ಹಾಗೂ ಇತರರೊಂದಿಗೆ ಮಾತೃಭಾಷೆಯಲ್ಲಿ ಮಾತನಾಡುವ ಕಲೆಯನ್ನು ರೂಢಿಸಿಕೊಂಡಾಗ ನಮ್ಮತನವನ್ನು ಉಳಿಸಿ ಬೆಳೆಸಲು ಸಾಧ್ಯ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಬಾಲ್ಯದಿಂದಲೇ ಮಾತೃಭಾಷೆಗೆ ಹೆಚ್ಚು ಪ್ರಾಧಾನ್ಯತೆ ನೀಡ ಬೇಕು ಎಂದು ಹೇಳಿದರು.
ಎಂ.ಇ.ಎಸ್ ಗೌರವ ಕಾರ್ಯದರ್ಶಿ ಡಾ. ಡಿ.ಎಲ್.ವಿಜಯ್‌ಕುಮಾರ್ ಮಾತನಾಡಿ ಸಮಾಜದಲ್ಲಿನ ಆಗು ಹೋಗುಗಳ ಬಗ್ಗೆ ಚಿಂತಿಸಿ Debate Competition ಚರ್ಚಾಸ್ಪರ್ಧೆಗಳಲ್ಲಿ ಪಾಲ್ಗೊಳ್ಳಬೇಕು. ಮುಂದೆ ಸಾಮಾಜಿಕ, ರಾಜಕೀಯ ಅಥವಾ ಇನ್ಯಾವುದೇ ಕ್ಷೇತ್ರಗಳಲ್ಲಿ ಬೆಳವಣಿಗೆ ಹೊಂದಲು ಸಾಧ್ಯ. ವಿವೇಕಾನಂದರು ಕೂಡಾ ವಿದೇಶದಲ್ಲಿ ನೀಡಿದ ದಿಕ್ಸೂಚಿ ಭಾಷಣದಿಂದಲೇ ಇಡೀ ಪ್ರಪಂಚ ಮಾತನಾಡುವಂತಾಯಿತು ಎಂದರು.

ಚರ್ಚಾಸ್ಪರ್ಧಾ ಆಯೋಜನೆಯಲ್ಲಿ ಎಂಇಎಸ್ ಸಂಸ್ಥೆ ಹಾಗೂ ಶಾಂತಕುಮಾರಿ ರಾಜು ಅವರ ಪ್ರಾಯೋ ಕತ್ವದಲ್ಲಿ ಹಲವಾರು ವರ್ಷಗಳಿಂದ ಕಾರ್ಯಕ್ರಮ ರೂಪಿಸಿದ್ದು ಇದೇ ಮೊದಲ ಬಾರಿಗೆ ಶಾಲೆಗೆ ಪ್ರಥಮ ಸ್ಥಾನ ಲಭಿಸಿರುವುದು ಖುಷಿ ನೀಡಿದೆ. ಇದೇ ರೀತಿ ಮಕ್ಕಳು ಹೆಚ್ಚೆಚ್ಚು ಸ್ಪರ್ಧೆಗಳಲ್ಲಿ ಭಾಗವಹಿಸಿ ಯಶಸ್ಸಿನ ಮೆಟ್ಟಿಲೇರ ಬೇಕು ಎಂದು ಆಶಿಸಿದರು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಂ.ಇ.ಎಸ್. ಅಧ್ಯಕ್ಷ ಎನ್.ಕೇಶವಮೂರ್ತಿ ಮಕ್ಕಳಿಗೆ ಚರ್ಚಾ ಸ್ಪರ್ಧೆಯಲ್ಲಿ ರಾಜಕೀಯ ಹೊರತುಪಡಿಸಿ ವೈಚಾರಿಕತೆ ಮೂಡಿಸುವ ವಿಷಯಗಳಿಗೆ ಹೆಚ್ಚು ಆದ್ಯತೆ ನೀಡಬೇಕು. ಇದರಿಂದ ಮಕ್ಕಳು ಬೌದ್ಧಿಕವಾಗಿ ಮುನ್ನೆಡೆಯಲು ಸಾಧ್ಯ ಎಂದು ಸಲಹೆ ಮಾಡಿದರು.

ಇದೇ ವೇಳೆ ಸುಮಾರು 15 ಶಾಲೆಗಳಿಂದ 30 ವಿದ್ಯಾರ್ಥಿಗಳು ಚರ್ಚಾಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಪರ- ವಿರುದ್ಧ ಸ್ಪರ್ಧೆಯಲ್ಲಿ ಎಂಇಎಸ್ ಪ್ರಥಮ ಸ್ಥಾನ ಗಳಿಸಿತು. ದ್ವಿತೀಯ ಸ್ಥಾನ ಸಂಜೀವಿನಿ ವಿದ್ಯಾಸಂಸ್ಥೆ ಹಾಗೂ ತೃತೀಯ ಸ್ಥಾನವನ್ನು ಮೊರಾರ್ಜಿ ವಸತಿ ಶಾಲೆ ಬೀಕನಹಳ್ಳಿ ಪಡೆದುಕೊಂಡಿತು.
ಈ ಸಂದರ್ಭದಲ್ಲಿ ಪ್ರಾಯೋಗಿಕ ಪ್ರೌಢಶಾಲೆ ಮುಖ್ಯಶಿಕ್ಷಕಿ ಕೌಸರ್ ಫಾತಿಮಾ, ವ್ಯವಸ್ಥಾಪಕಿ ಶ್ರೀಲಕ್ಷ್ಮೀ ಶಿಕ್ಷಕರಾದ ಸದಾಶಿವ, ಪ್ರತಿಮಾ, lಸುನೀತಾ, ತೀರ್ಪುಗಾರರಾದ ಹೇಮಾವತಿ, ಹನುಮಂತಪ್ಪ, ಪ್ರಭಾಕರ್ ಸೇರಿ ದಂತೆ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...