Saturday, December 6, 2025
Saturday, December 6, 2025

Shivamogga Bus Stand ಶಿವಮೊಗ್ಗ ಕೆಎಸ್ಸಾರ್ ಟಿಸಿ ನಿಲ್ದಾಣದಲ್ಲಿ ಸಿಸಿಟಿವಿ ಅಳವಡಿಸಲು ಕರವೇ ಯುವಸೇನೆ ಆಗ್ರಹ

Date:

Shivamogga Bus Stand ಕರವೇ ಯುವಸೇನೆಯಿಂದ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಹೆಚ್ಚಿನ ಸಿಸಿ ಕ್ಯಾಮೆರಾ ಅಳವಡಿಸುವಂತೆ ವಿಭಾಗಿಯ ನಿಯಂತ್ರಣ ಅಧಿಕಾರಿಗಳಿಗೆ ಮನವಿ
ಶಿವಮೊಗ್ಗ ಕೆಎಸ್ಆರ್ಟಿಸಿ ಬಸ್ ಸ್ಟ್ಯಾಂಡ್ ನಲ್ಲಿ ಇತ್ತೀಚೆಗೆ ಕಳ್ಳತನದ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿದೆ.

ಇದರಿಂದ ಶಿವಮೊಗ್ಗ ಜಿಲ್ಲೆಗೆ ಕೆಟ್ಟ ಹೆಸರು ಬರುವಂತಾಗಿದೆ ಹೆಚ್ಚಾಗಿ ದೂರದ ಊರುಗಳಿಂದ ಬರುವ ಪ್ರಯಾಣಿಕರ ವಸ್ತುಗಳು ಕಳ್ಳತನವಾಗುತ್ತಿದ್ದು ಕೆಲವೇ ಪ್ರಕರಣಗಳು ದಾಖಲಾಗುತ್ತಿದೆ ಪ್ರಯಾಣಿಕರು ದೂರದ ಊರು ನವರಾಗಿರುವುದರಿಂದ ಕೇಸ್ ದಾಖಲಿಸಲಾಗುತ್ತಿಲ್ಲ. ಅಂಕಿ ಅಂಶದ ಪ್ರಕಾರ 10 ತಿಂಗಳಿನಲ್ಲಿ ಸುಮಾರು 20 ರಷ್ಟು ಕಳ್ಳತನದ ಪ್ರಕರಣ ದಾಖಲಾಗಿದ್ದು ಸಿಸಿಟಿವಿ ಕ್ಯಾಮೆರದ ಕೊರತೆಯಿಂದಾಗಿ ಪೊಲೀಸ್ ಇಲಾಖೆಗೂ ಸಹ ಇದು ತಲೆ ನೋವಾಗಿದೆ. ತಾವುಗಳು ತಕ್ಷಣ ನಿಲ್ದಾಣದಲ್ಲಿ ಎಲ್ಲಾ ಫ್ಲಾಟ್ ಫಾರಂ ನಲ್ಲೂ ಕಾಣುವಂತೆ ಹಾಗೂ ಬಸ್ ಗಳು ಬಸ್ ನಿಲ್ದಾಣಕ್ಕೆ ಬರುವ ಮತ್ತು ಹೋಗುವ ಸ್ಥಳಗಳಿಗೆ ಸಿಸಿ ಕ್ಯಾಮೆರಾ ಅಳವಡಿಸುವಂತೆ ಹಾಗೂ ತಮ್ಮ ಇಲಾಖೆ ಸಿಬ್ಬಂದಿಗಳನ್ನು ನಿಯೋಜಿಸಿ ಕ್ರಮ ಕೈಗೊಳ್ಳಬೇಕಾಗಿ ಈ ಮೂಲಕ ಸಾರ್ವಜನಿಕರ ಪರವಾಗಿ ಕೇಳಿಕೊಳ್ಳುತ್ತೇವೆ. ಇನ್ನು 15 ದಿನಗಳಲ್ಲಿ ಈ ವಿಷಯವಾಗಿ ತಾವುಗಳು ಯಾವುದೇ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಕರ್ನಾಟಕ ರಕ್ಷಣಾ ವೇದಿಕೆ ಯುವ ಸೇನೆ ವತಿಯಿಂದ ಉಗ್ರವಾದ ಹೋರಾಟ ಮಾಡುವ ಎಚ್ಚರಿಕೆಯನ್ನು ಸಹ ನೀಡುತ್ತಿದ್ದೇವೆ ಹಾಗೆಯೇ ಜವಾಬ್ದಾರಿ ಸ್ಥಾನದಲ್ಲಿರುವ ತಾವುಗಳು ಕೂಡ ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡುತ್ತೇವೆಂದು ತಿಳಿಸುತ್ತಿದ್ದೇವೆ. ಈ ಹೋರಾಟದಲ್ಲಿ Shivamogga Bus Stand ಕರವೇ ಯುವಸೇನೆ ಜಿಲ್ಲಾಧ್ಯಕ್ಷ ಕಿರಣ್ ಕುಮಾರ್ ಹೆಚ್ಎಸ್ ಜಿಲ್ಲಾ ಉಪಾಧ್ಯಕ್ಷ ಜೈ ಕೃಷ್ಣ ನಗರಾಧ್ಯಕ್ಷ ಪ್ರಪುಲ್ಲ ಚಂದ್ರ ರಾಮು ಜಾದವ್ ರಾಮಣ್ಣ ಫುಟ್ ಕೋರ್ಟ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಿಜಯಕುಮಾರ್ ಉಪ್ಪಿನ್ ಮುಂತಾದವರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...